‘Darshan’ ಬಂಧನಕ್ಕೆ 1 ವರ್ಷ, ಡಿ.ಬಾಸ್ ಕಥೆ ಬದಲಿಸಿದ ವರ್ಷ…11-06-2024

ಜೈಲಿನ ಕಠಿಣ ನಿಯಮದಿಂದ ಎರಡೇ ದಿನಕ್ಕೆ ಸುಸ್ತಾದ ದರ್ಶನ್.

ಬೆಂಗಳೂರು: ಕನ್ನಡ ಚಿತ್ರರಂಗ ಸೇರಿದಂತೆ ಕರ್ನಾಟಕದಾದ್ಯಂತ ಈ ದಿನ (11-06-2024) ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್ (47) ಬಂಧನ ತಲ್ಲಣ ಸೃಷ್ಟಿಸಿತ್ತು. ಡಿಬಾಸ್ ಫ್ಯಾನ್ಸ್ಗಳಿಗೆ ಆಘಾತವಾಗಿ ಇಂದಿಗೆ ಬರೋಬ್ಬರಿ ಒಂದು ವರ್ಷ. ಇದು ಸಿನಿ ಕೆರಿಯರ್ನಲ್ಲಿ ದಾಸ ದರ್ಶನ್ ಮರೆಯದ ದಿನವಾಗಿ ಉಳಿಯಿತು. ಚಿತ್ರದುರ್ಗದ ರೇಣುಕಾಸ್ವಾಮಿ ವಿಚಾರಕ್ಕೆ ದರ್ಶನ್ ಎ2 ಆರೋಪಿಯಾಗಿ 06 ತಿಂಗಳಿಗೂ ಹೆಚ್ಚು ಕಾಲ ಸೆರೆವಾಸ ಅನುಭವಿಸಿ ಹೊರ ಬಂದರು. ಈ ಒಂದು ವರ್ಷ ಆದ ‘ದಾಸ’ನ ಕಹಿ ಘಟನೆಗಳು, ಬದಲಾವಣೆ, ಬೆಳವಣಿಗೆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಮಗ ರೇಣುಕಾಸ್ವಾಮಿ ಕಳೆದುಕೊಂಡು ಒಂದು ವರ್ಷ ಹಿನ್ನೆಲೆ ಪುಣ್ಯ ತಿಥಿ ಮಾಡಿದ ಅವರ ಕುಟುಂಬಸ್ಥರು ದರ್ಶನ್ ನಮ್ಮನ್ನು ಭೇಟಿ ಮಾಡಿಲ್ಲ. ಮಾಡುತ್ತಾರೆ ಎಂಬ ನಂಬಿಕೆ ಇಲ್ಲ ಎಂದು ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಹೇಳಿದ್ದಾರೆ. ಎ1 ಆರೋಪಿ ಪವಿತ್ರಾ ಗೌಡಗೆ ಇನ್ಸ್ಟಾಗ್ರಾಮ್ನಲ್ಲಿ ಕೆಟ್ಟ ಸಂದೇಶ, ಫೋಟೋ ಕಳುಹಿಸಿದ್ದ ವಿಚಾರದಲ್ಲಿ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ತರಲಾಗಿತ್ತು. ಆತನಿಗೆ ಶಿಕ್ಷೆ ನೀಡಿ, ಹಿಂಸಿಸಿ ಮನಬಂದಂತೆ ಥಳಿಸಿ, ಗುಪ್ತಾಂಗಕ್ಕೆ ಹಾನಿ ಮಾಡಿ ಕೊಲ್ಲಲಾಯಿತು ಎಂಬ ಆರೋಪ ನಟ ದರ್ಶನ್ ಹಾಗೂ ಸಹಚರರು ಎದರಿಸುತ್ತಿದ್ದಾರೆ. ಪ್ರಕರಣದ ವಿಚಾರಣೆ ನಡೆಯುತ್ತಿದೆ. ಪೊಲೀಸರು ಸುಪ್ರೀಂ ಕೋರ್ಟ್ನಲ್ಲಿ ದರ್ಶನ್ ಜಾಮೀನು ರದ್ದು ಕೋರಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ.

ದರ್ಶನ್ ಬಂಧನಕ್ಕೆ ಒಂದು ವರ್ಷ: ಏನೆಲ್ಲ ಆಯಿತು? * ನಟ ದರ್ಶನ್ ತೂಗುದೀಪ್ ಏನುಗಲ್ಲವೇನೋ ಎಂಬಂತೆ ಮೈಸೂರಿನಲ್ಲಿ ವರ್ಕೌಟ್ ಮಾಡುತ್ತಾ ಡಿವಿಲ್ ಸಿನಿಮಾ ಸೂಟಿಂಗ್ಗೆ ಸಜ್ಜಾಗುತ್ತಿದ್ದರು. ಈ ವೇಳೆ ಪೊಲೀಸರು ಅವರನ್ನು ಬಂಧಿಸುತ್ತಿದ್ದಂತೆ ರಾಜ್ಯಾದ್ಯಂತ ಡಿಬಾಸ್ ಫ್ಯಾನ್ಸ್ಗೆ ಬರಸಿಡಿಲು ಬಡದಂತಾಗಿತ್ತು.

* ಚಿತ್ರದುರ್ಗ ರೇಣುಕಾಸ್ವಾಮಿ ಕರೆತಂದು ಹಿಂಸಿಸಿ ಹತ್ಯೆ ಮಾಡಿ ಹೆಣವನ್ನು ನಗರದ ಸತ್ವ ಅಪಾರ್ಟ್ಮೆಂಟ್ ಬಳಿ ರಾಜಕಾಲುವೆಗೆ ಬೀಸಾಕಲಾಗಿತ್ತು. ಅದು ಸಿಗುತ್ತಿದ್ದಂತೆ ದರ್ಶನ್ ಕೈವಾಡ ಅದರಲ್ಲಿ ಇದೆ ಎಂಬುದನ್ನು ಪೊಲೀಸರ ಪತ್ತೆ ಮಾಡಿದ್ದರು. * ರೇಣುಕಾಸ್ವಾಮಿ ಹತ್ಯೆ ಬಳಿಕ ಕೆಲವುರ ಪೊಲೀಸರಿಗೆ ಶರಣಾಗಿದ್ದರು, ಅವರ ಮೇಲೆ ಅನುಮಾನ ಬಂದು ಬಾಯಿ ಬಿಡಿಸಿದಾಗ ಇದು ದರ್ಶನ್ ಹೇಳಿದ್ದಕ್ಕೆ ಮಾಡಿದ್ದೆವು ಎಂದು ಒಪ್ಪಿಕೊಂಡಿದ್ದರು. ನಂತರ ದರ್ಶನ, ಪವಿತ್ರಾ ಗೌಡ ಹೀಗೆ ಒಬ್ಬರ ಹಿಂದೊಬ್ಬರಂತೆ ಬರೋಬ್ಬರಿ 17 ಮಂದಿಯನ್ನು ಪೊಲೀಸರು ಬಂಧಿಸಿದ್ದರು.

* ಪಟ್ಟಣಗೆರೆ ಶೆಡ್ ಸುತ್ತಮುತ್ತಲಿನ ಸಿಸಿಟಿವಿ ಫೂಟೇಜ್ಗಳೇ ಪ್ರಕರಣಕ್ಕೆ ಸಾಕ್ಷಿಯಾಗಿದ್ದವು. ನಟ ದರ್ಶನ ಕಾರು ಸಂಚಾರದ ಚಲನವಲಗಳು ಸೆರೆಯಾಗಿದ್ದವು. ದರ್ಶನ್ ಬಂಧನ ಅವರ ಇಡೀ ಜೀವನದಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯಿತು. ಬಳಿಕ ಅವರ ಕೆಲವು ಹಳೇಯ ಹಲ್ಲೆ, ಇನ್ನಿತರ ಬೆದರಿಕೆ ಪ್ರಕರಣಗಳು ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ ವರದಿ ಆದವು. * ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ಸಮಯದಲ್ಲಿ ದರ್ಶನ್ ಅವರನ್ನು ಪರಪ್ಪನ ಅಗ್ರಹಾರದಲ್ಲಿ ಇಡಲಾಗಿತ್ತು. ಅಲ್ಲಿಂದ ಫ್ಯಾನ್ ಕುಟುಂಬದೊಂದಿಗೆ ವಿಡಿಯೋ ಕರೆ ಮಾಡಿ ಮಾತನಾಡಿರುವುದು, ವಿಲ್ಸನ್ ಗಾರ್ಡನ್ ನಾಗಾ ಸೇರಿದಂತೆ ಕೆಲವು ರೌಡಿ ಶೀಟರ್ಗಳ ಜತೆಗೆ ದರ್ಶನ್ ಆರಾಗಾಗಿದ್ದಾರೆ. ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ದೂರು ಕೇಳಿ ಬಂತು. ರೌಡಿಗಳ ಜತೆಗಿನ ದರ್ಶನ್ ಫೋಟೋ ವೈರಲ್ ಆಗಿತ್ತು. * ಊಟ ಸರಿಯಾಗಿಲ್ಲ ಎಂದು ನಟ ದರ್ಶನ್ ಜೈಲಿನಲ್ಲಿ ಸುಳ್ಳು ಹೇಳಿದ್ದಾರೆ ಎಂಬುದು ಗೊತ್ತಾಗಿತ್ತು. ಇತ್ತ ಡಿಬಾಸ್ ಕೆಲ ಅಭಿಮಾನಿಗಳು ಬಾಯಿಗೆ ಹಿಡಿತವಿಲ್ಲದೇ ಮಾತನಾಡಿದರು. ಬಹಿರಂಗವಾಗಿ ಆಕ್ರೋಶ, ಬೆದರಿಕೆ ಹಾಕಿದ್ದು ಸಾಮಾಜಿಕ ಜಾಲತಾಣದಿಂದ ಗೊತ್ತಾಯಿತು. ಇದು ಸಹ ನಟ ದರ್ಶನ್ ಗೆ ಬೇಲ್ ಸಿಗಲು ತಡವಾಯಿತು. * ಬೆಂಗಳೂರು ಸೆಂಟ್ರಲ್ ಜೈಲಿನಿಂದ ನಟ ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ಶೀಫ್ಟ್ ಮಾಡಲಾಯಿತು. ಪವಿತ್ರಾ ಗೌಡ ಬೆಂಗಳೂರಿನ ಜೈಲಿನಲ್ಲೇ ಉಳಿದರು. ಕೆಲವರನ್ನು ಬೆಳಗಾವಿ ಸೇರಿದಂತೆ ರಾಜ್ಯದ ಇತರ ಜೈಲುಗಳಿಗೆ ಆರೋಪಿಗಳನ್ನು ಸ್ಥಳಾಂತರಿಸಲಾಯಿತು. * ನಟ ದರ್ಶನ್ಗೆ ಬೆನ್ನು ನೋವು ಕಾಣಿಸಿಕೊಂಡಿತು. ಬಳ್ಳಾರಿ ಜೈಲಲ್ಲಿ ಪೊಲೀಸ್ ಸಿಬ್ಬಂದಿ ಟಿವಿ, ಪುಸ್ತಕ ಇನ್ನಿತರ ಸೌಲಭ್ಯ ಮಾಡಿಕೊಟ್ಟರು ಚಿಕಿತ್ಸೆಗೆ ಒಪ್ಪಿರಲಿಲ್ಲ. ನಂತರ ಪತ್ನಿ ವಿಜಯಲಕ್ಷ್ಮೀ ಅವರ ಮಾತಿಗೆ ಒಪ್ಪಿಗೆ ಚಿಕಿತ್ಸೆ ಪಡೆಯಲು ಮುಂದಾದರು. * ದರ್ಶನ್ ಗೆ ಜಾಮೀನು ಕೊಡಿಸಬೇಕೆಂದು ವಿಜಯಲಕ್ಷ್ಮೀ ಇನ್ನಿಲ್ಲದ ಶ್ರಮ ಹಾಕಿದ್ದರು. ಕಂಡ ಕಂಡ ದೇವರಿಗೆ ಪೂಜೆ ಸಲ್ಲಿಸಿದರು. ಹರಕೆ ಹೊತ್ತರು. ಡಿಬಾಸ್ ಅಭಿಮಾನಿಗಳ ಪಾಲಿಗೆ ಅತ್ತಿಗೆಯಾದರು. * ನಂತರ ಬೆನ್ನು ನೋವಿಗೆ ಚಿಕಿತ್ಸೆಗೆಂದು ಕೋರ್ಟ್ ಆರು ವಾರಗಳ ಜಾಮೀನು ನೀಡಿತು. ಅಕ್ಟೋಬರ್ 30ರಂದು ನಟ ದರ್ಶನ್ ಬಳ್ಳಾರಿ ಜೈಲಿನಿಂದ ಬಿಡುಗಡೆ ಆದರು. ಅಲ್ಲಿಂದ ಬಂದು ಬೆಂಗಳೂರಿನ ಕೆಂಗೇರಿಯ ಖಾಸಗಿ ಆಸ್ಪತ್ರೆಗೆ ದಾಸ ದರ್ಶನ್ ದಾಖಲಾದರು. * ಡಿಸೆಂಬರ್ ತಿಂಗಳಲ್ಲಿ 13 ರಂದು ಹೈಕೋರ್ಟ್ ಇದೇ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 07 ಆರೋಪಿಗಳಿಗೆ ಜಾಮೀನು ನೀಡಿ ಆದೇಶ ಹೊರಡಿಸಿತು. ಅಲ್ಲಿಗೆ ಸುಮಾರು ಆರು ತಿಂಗಳ ದಾಸನ ಜೈಲುವಾಸ ಅಂತ್ಯವಾಯಿತು. ನಂತರ ಎಲ್ಲ 17 ಆರೋಪಿಗಳು ಜಾಮೀನು ಪಡೆದರು. * ದರ್ಶನ್ಗೆ ನೀಡಿದ ಜಾಮೀನು ರದ್ದುಗೊಳಿಸುವಂತೆ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಕರ್ನಾಟಕ ಪೊಲೀಸರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ದರ್ಶನ್ ಜಾಮೀನು ರದ್ದು ಮಾಡುವಂತೆ ವಾದ ಮಂಡಿಸಿದ್ದಾರೆ. ದರ್ಶನ್, ಪವಿತ್ರಾ ಗೌಡ ಸೇರಿ 07 ಮಂದಿಯ ಜಾಮೀಣು ರದ್ದು ಕೋರಿದ್ದಾರೆ. ಅರ್ಜಿ ವಿಚಾರಣೆ ನಡೆಯುತ್ತಿದೆ. * ಜೈಲಿನಿಂದ ಬಿಡುಗಡೆ ಬಳಿಕ ಕೇರಳದ ಪ್ರಸಿದ್ಧ ದೇವಾಲಯಕ್ಕೆ ಹೋಗಿ ಬಂದ ನಟ ದರ್ಶನ್ ದಂಪತಿ ದೇವ ಆಶೀರ್ವಾದ ಪಡೆದಿದ್ದಾರೆ. ವಿಶೇಷ ಪೂಜೆ ನೆರವೇರಿಸಿದ್ದಾರೆ. * ಸದ್ಯ ನಟ ದರ್ಶನ್ ಡೆವಿಲ್ ಸಿನಿಮಾ ಶೋಟಿಂಗ್ನಲ್ಲಿ ಪಾಲ್ಗೊಂಡಿದ್ದಾರೆ. ಧನ್ವಿರ್ ನಟನೆಯ ‘ವಾಮನ’ ಸಿನಿಮಾವನ್ನು ಥಿಯೇಟರ್ನಲ್ಲಿ ವೀಕ್ಷಿಸಿದ್ದ ನಟ ದರ್ಶನ್ ಒಂದು ಬಾರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಬಿಟ್ಟರೆ ಎಲ್ಲಿಯೂ ಅಷ್ಟಾಗಿ ಕಾಣಿಸುತ್ತಿಲ್ಲ. ಅವರ ಅಭಿಮಾನಿಗಳು ‘ಡೆವಿಲ್’ ಸಿನಿಮಾಗಾಗಿ ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *