1000 ಕೋಟಿ ಬಜೆಟ್, ‘Ramayana’ ನಿರ್ಮಾಪಕ ನಮಿತ್ ಮಲ್ಹೋತ್ರಾ ಯಾರು ಗೊತ್ತೆ?

1000 ಕೋಟಿ ಬಜೆಟ್, ‘Ramayana’ ನಿರ್ಮಾಪಕ ನಮಿತ್ ಮಲ್ಹೋತ್ರಾ ಯಾರು ಗೊತ್ತೆ?

ರಣ್ಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ನಟಿಸಿರುವ ‘ರಾಮಾಯಣ’ ಸಿನಿಮಾ, ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನಿಸಿಕೊಂಡಿದೆ. ಸಿನಿಮಾಕ್ಕೆ ಒಟ್ಟು 1000 ಕೋಟಿ ಬಜೆಟ್ ಹಾಕಲಾಗಿದೆ. ಅಂದಹಾಗೆ ಇಷ್ಟು ದೊಡ್ಡ ಬಜೆಟ್ ಹಾಕಿ ಸಿನಿಮಾ ಮಾಡಿರುವ ನಿರ್ಮಾಪಕ ನಮಿತ್ ಮಲ್ಹೋತ್ರಾ ಯಾರು? ಅವರ ಹಿನ್ನೆಲೆ ಏನು?

ರಣ್ಬೀರ್ ಕಪೂರ್, ಯಶ್, ಮತ್ತು ಸಾಯಿ ಪಲ್ಲವಿ, ಪ್ರಧಾನ ಪಾತ್ರದಲ್ಲಿ ನಟಿಸಿರುವ ‘ರಾಮಾಯಣ’ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಮುಗಿದಿದೆ. ಸಿನಿಮಾದ ಗ್ಲಿಂಪ್ಸ್ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ಮೂರು ನಿಮಿಷದ ಗ್ಲಿಂಪ್ಸ್ ನೋಡಿದವರು ಇದು ಹಾಲಿವುಡ್ ಸಿನಿಮಾಗಳನ್ನೂ ಮೀರಿಸಬಹುದಾದ ವಿಷ್ಯುಲ್ ಎಫೆಕ್ಟ್ಸ್ ಇರುವ ಸಿನಿಮಾ ಎಂದು ಕೊಂಡಾಡಿದ್ದಾರೆ. ‘ರಾಮಾಯಣ’ ಸಿನಿಮಾ ವಿಶ್ವದರ್ಜೆಯ ಗುಣಮಟ್ಟದಲ್ಲಿ ಮೂಡಿ ಬರಬೇಕೆಂದು ಸಿನಿಮಾದ ಮೇಲೆ ಸುಮಾರು ನೂರು ಕೋಟಿ ಬಜೆಟ್ ಹಾಕಲಾಗುತ್ತಿದೆ. ಈ ಹುಚ್ಚು ಸಾಹಸಕ್ಕೆ ಕೈ ಹಾಕಿರುವ ವ್ಯಕ್ತಿಯ ಹೆಸರು ನಮಿತ್ ಮಲ್ಹೋತ್ರಾ.

‘ರಾಮಾಯಣ’ ಸಿನಿಮಾವನ್ನು ನಮಿತ್ ಮಲ್ಹೋತ್ರಾ ನಿರ್ಮಾಣ ಮಾಡುತ್ತಿದ್ದಾರೆ. ನಟ ಯಶ್ ಅವರು ಈ ಸಿನಿಮಾದ ಸಹ ನಿರ್ಮಾಪಕ. ಆದರೂ ಪ್ರಧಾನ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೇ. ಸಿನಿಮಾದ ಮೇಲೆ ಅತಿ ದೊಡ್ಡ ಮೊತ್ತದ ಬಂಡವಾಳ ಹೂಡಿರುವುದು ಅವರೇ ಅಂತೆ. ಬಾಲಿವುಡ್ನ ನಿರ್ಮಾಣ ಸಂಸ್ಥೆಗಳೆಂದರೆ ಯಶ್ ರಾಜ್ ಫಿಲಮ್ಸ್, ಧರ್ಮಾ ಪ್ರೊಡಕ್ಷನ್, ಟಿ-ಸೀರೀಸ್ ಹೆಸರುಗಳ ಹೊರತಾಗಿ ಇನ್ಯಾವ ದೊಡ್ಡದಾಗಿ ಕೇಳಿ ಬರುತ್ತಿರಲಿಲ್ಲ. ಅಂಥಹದರಲ್ಲಿ ಇವರ್ಯಾರೂ ಮಾಡದ ಅತಿ ದೊಡ್ಡ ಸಾಹಸಕ್ಕೆ ಕೈ ಹಾಕಿರುವ ಈ ನಮಿತ್ ಮಲ್ಹೋತ್ರಾ ಯಾರು?

ಬರೋಬ್ಬರಿ ಎಂಟು ಆಸ್ಕರ್ ಅನ್ನು ಗೆದ್ದಿರುವ ಜಗದ್ವಿಖ್ಯಾತ ಸ್ಟುಡಿಯೋನ ಸಹ ಮಾಲೀಕ ಹಾಗೂ ಹಾಲಿ ಸಿಇಓ ಈ ನಮಿತ್ ಮಲ್ಹೋತ್ರಾ. 1976 ರಲ್ಲಿ ಮುಂಬೈನಲ್ಲಿ ಜನಿಸಿದ ನಮಿತ್ ಮಲ್ಹೋತ್ರಾ ಅವರದ್ದು ಸಿನಿಮಾ ಹಿನ್ನೆಲೆಯೇ. ನಮಿತ್ ಅವರ ತಾತ ಎಂಎನ್ ಮಲ್ಹೋತ್ರಾ ಹಿಂದಿ ಸಿನಿಮಾಗಳಿಗೆ ಕ್ಯಾಮೆರಾಮ್ಯಾನ್ ಆಗಿದ್ದರು. ಮೊದಲ ಕಲರ್ ಸಿನಿಮಾ ‘ಝಾನ್ಸಿ ಕಿ ರಾಣಿ’ ಸಿನಿಮಾಕ್ಕೆ ಕೆಲಸ ಮಾಡಿದ್ದರು. ನಮಿತ್ ಮಲ್ಹೋತ್ರಾ ಅವರ ತಂದೆ ನರೇಶ್ ಮಲ್ಹೋತ್ರಾ ಹಿಂದಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಜೊತೆಗೆ ಸಿನಿಮಾಕ್ಕೆ ಬೇಕಿದ್ದ ವಸ್ತುಗಳನ್ನು ಬಾಡಿಗೆ ಕೊಡುವ ಉದ್ಯಮವನ್ನೂ ಹೊಂದಿದ್ದರು.

ನಮಿತ್ ಮಲ್ಹೋತ್ರಾಗೆ ಎಳವೆಯಿಂದಲೇ ತಂತ್ರಜ್ಞಾನ ವಿಶೇಷವಾಗಿ ಅನಿಮೇಷನ್ ಮೇಲೆ ಆಸಕ್ತಿ ಇತ್ತು. ಕಂಪ್ಯೂಟರ್ ಗ್ರಾಫಿಕ್ಸ್ ಕಲಿತು ತಮ್ಮ ತಂದೆಯ ಗ್ಯಾರೇಜಿನಲ್ಲಿ ಗ್ರಾಫಿಕ್ಸ್ ಸ್ಟುಡಿಯೋ ಪ್ರಾರಂಭ ಮಾಡಿದರು. ಆಗಷ್ಟೆ ಭಾರತದಲ್ಲಿ ಖಾಸಗಿ ಚಾನೆಲ್ಗಳ ಭರಾಟೆ ಜೋರಾಗಿತ್ತು. ಅವುಗಳ ಕಾರ್ಯಕ್ರಮಗಳಿಗೆ ಗ್ರಾಫಿಕ್ಸ್ ಮಾಡಿಕೊಡುತ್ತಿದ್ದರು ನಮಿತ್ ಮಲ್ಹೋತ್ರಾ. ಸೋನಿಯ ‘ಬೂಗಿ ಊಗಿ’ ಸೇರಿದಂತೆ ಹಲವು ಶೋಗಳಿಗೆ ಗ್ರಾಫಿಕ್ಸ್ ಮಾಡಿಕೊಟ್ಟಿರುವುದು ನಮಿತ್ ಮಲ್ಹೋತ್ರಾ ಅದೂ ತಮ್ಮ ಗ್ಯಾರೇಜಿನಿಂದ. ವಿ ಚಾನೆಲ್ಗೆ ಪೋಸ್ಟ್ ಪ್ರೊಡಕ್ಷನ್ ಮಾಡುತ್ತಿದ್ದರು. ಆಗಿನ ಕಾಲದ ಮ್ಯೂಸಿಕ್ ವಿಡಿಯೋಗಳಿಗೂ ಕೆಲಸ ಮಾಡಿದ್ದಾರೆ.

Leave a Reply

Your email address will not be published. Required fields are marked *