ಪಟಾಕಿ ಸಿಡಿಸುವ ವೇಳೆ 115 ಮಂದಿಗೆ ಗಾಯ

ಪಟಾಕಿ ಸಿಡಿಸುವ ವೇಳೆ 115 ಮಂದಿಗೆ ಗಾಯ

ಬೆಂಗಳೂರು: ಸಂಭ್ರಮ-ಸಡಗರದ ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವಾಗ ರಾಜಧಾನಿ ಬೆಂಗಳೂರಿನಲ್ಲಿ ಈವರೆಗೆ 115 ಮಂದಿ ಗಾಯಗೊಂಡಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಪಟಾಕಿ ಸಿಡಿತದಿಂದ ಗಾಯಗೊಂಡ ಪ್ರಕರಣ ಹೆಚ್ಚಳವಾಗಿದೆ. ಮಿಂಟೋ ಹಾಗೂ ನಾರಾಯಣ ನೇತ್ರಾಲಯ ಆಸ್ಪತ್ರೆಯಲ್ಲಿ ಒಟ್ಟು 115 ಕೇಸ್‌ಗಳು ದಾಖಲಾಗಿವೆ.

ನಾರಾಯಣ ನೇತ್ರಾಲಯ ಆಸ್ಪತ್ರೆ ಒಂದರಲ್ಲೇ ಮೂರು ದಿನದಲ್ಲಿ 66 ಕೇಸ್‌ಗಳು ದಾಖಲಾಗಿವೆ. ಇದರಲ್ಲಿ 49 ಗಂಡು ಮಕ್ಕಳು, 17 ಹೆಣ್ಣು ಮಕ್ಕಳಿದ್ದಾರೆ. 33 ಜನ ವಯಸ್ಕರಿಗೆ, 33 ಜನ ಮಕ್ಕಳಿಗೆ ಪಟಾಕಿ ಕಿಡಿ ಸಿಡಿದು ಗಾಯವಾಗಿದೆ. 10 ವರ್ಷದೊಳಗಿನ 14 ಮಕ್ಕಳು ಪಟಾಕಿಯಿಂದ ಗಾಯಗೊಂಡಿದ್ದಾರೆ. 10-18 ವರ್ಷದೊಳಗಿನ 19 ಜನ ಮಕ್ಕಳಿಗೆ ಗಾಯವಾಗಿದೆ. ಪಟಾಕಿಯಿಂದ ಗಂಡು ಮಕ್ಕಳೇ ಹೆಚ್ಚು ಗಾಯಗೊಂಡಿದ್ದಾರೆ. ಪಟಾಕಿ ಹೊಡೆಯುವ ವೇಳೆ ಅಕ್ಕಪಕ್ಕದಲ್ಲಿದ್ದ 33 ಮಂದಿಗೆ ಗಾಯವಾಗಿದೆ. ನಾಲ್ಕು ಮಂದಿಗೆ ಈಗಾಗಲೇ ಶಸ್ತç ಚಿಕಿತ್ಸೆ ಮಾಡಲಾಗಿದೆ.

ಆಕ್ಟೋಬರ್ -31 ರಂದು 14 ನೇತ್ರಹಾನಿ ಪ್ರಕರಣ ದಾಖಲಾಗಿದ್ದು, ನವೆಂಬರ್- 1 ರಂದು 27 ಕೇಸ್, ನವೆಂಬರ್- 2 ರಂದು 25

ಕೇಸ್ ದಾಖಲಾಗಿದೆ. ಮಿಂಟೋ ಆಸ್ಪತ್ರಗೆ ಇಲ್ಲಿಯವರೆಗೆ 49 ಜನರು ದಾಖಲಾಗಿದ್ದಾರೆ. 49ರಲ್ಲಿ 27 ಮಂದಿ ಪಟಾಕಿ ಸಿಡಿಸುವಾಗ ಗಾಯ ಮಾಡಿಕೊಂಡಿದ್ದಾರೆ. 22 ಮಂದಿ ಅಕ್ಕಪಕ್ಕ ಇದ್ದವರು ಪಟಾಕಿ ಸಿಡಿತಕ್ಕೆ ಒಳಗಾಗಿದ್ದಾರೆ. ಶನಿವಾರ ಒಂದೇ ದಿನ 20 ಮಂದಿ ದಾಖಲಾಗಿದ್ದಾರೆ. 20ರಲ್ಲಿ 15 ಜನ ಮಕ್ಕಳು ಗಾಯಗೊಂಡಿದ್ದಾರೆ.35 ಮಂದಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. 14 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪಟಾಕಿಯಿಂದ 32 ಮಕ್ಕಳು ಕಣ್ಣಿಗೆ ಏಟು ಮಾಡಿಕೊಂಡಿದ್ದಾರೆ. 17 ಮಂದಿ ವಯಸ್ಕರೂ ಸಹ ಪಟಾಕಿ ಸಿಡಿತಕ್ಕೆ ಒಳಗಾಗಿದ್ದಾರೆ. 23 ಮಂದಿಗೆ ಪಟಾಕಿಯಿಂದ ಗಂಭೀರ ಸಮಸ್ಯೆಯಾಗಿದೆ. 26 ಮಂದಿಗೆ ಸಣ್ಣ ಪ್ರಮಾಣದ ಗಾಯವಾಗಿದೆ. ನಾಲ್ವರಿಗೆ ಈಗಾಗಲೇ ಸರ್ಜರಿ ಮಾಡಲಾಗಿದೆ. ಇನ್ನೂ 10 ಮಂದಿಗೆ ಸರ್ಜರಿಯ ಅವಶ್ಯಕತೆಯಿದೆ ಎಂದು ಮಿಂಟೋ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *