ಒಂದೇ ತಿಂಗಳಲ್ಲಿ ಹೃದಯಾಘಾತಕ್ಕೆ 13 ಸಾ* – ಕೋವಿಡ್ ಲಸಿಕೆ ಕಾರಣವಲ್ಲ ತನಿಖೆಯಲ್ಲಿ ಬಯಲು

ಹಾಸನ || ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು..!

ಬೆಂಗಳೂರು: ಒಂದೇ ತಿಂಗಳಲ್ಲಿ ಹಾಸನ (Hassan) ಜಿಲ್ಲೆಯ 13 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಯುವಕರ ಹಠಾತ್ ಸಾವಿಗೆ ಕೋವಿಡ್ ಲಸಿಕೆ (Covid Vaccine) ಕಾರಣ ಎನ್ನುವ ಸಂಶಯ ಮೂಡಿತ್ತು. ಈ ಹಿನ್ನೆಲೆ ವೈದ್ಯರ ತಂಡವೊಂದು ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವ ವ್ಯಕ್ತಿಗಳ ಮೇಲೆ ತನಿಖೆ ನಡೆಸಿ ಸಾವಿಗೆ ನಿಖರವಾದ ಕಾರಣವೇನು ಎನ್ನುವುದನ್ನು ಬಯಲಿಗೆಳೆದಿದ್ದಾರೆ.

ಒಂದೇ ತಿಂಗಳ ಅವಧಿಯಲ್ಲಿ ಹಾಸನ ಜಿಲ್ಲೆಯ ಬೇರೆ ಬೇರೆ ಭಾಗಗಳ ಯುವಕ-ಯುವತಿಯರು ಸೇರಿ ಒಟ್ಟು 13 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಒಂದೇ ತಿಂಗಳಲ್ಲಿ 13 ಮಂದಿ ಹೃದಯಾಘಾತಕ್ಕೆ ಸಾವಾಗಿರೋದು ಆತಂಕ ಹೆಚ್ಚಿಸಿತ್ತು. ಹಾಸನ ನಗರದ ಸತ್ಯಮಂಗಲ ಬಡಾವಣೆಯ ಚೇತನ್ (35), ಬೇಲೂರು ಪಟ್ಟಣದ ನಿಶಾದ್ ಅಹ್ಮದ್ (35), ಮೇ 28ರಂದು ಹೊಳೆನರಸೀಪುರ ಪಟ್ಟಣದ ಸಂಧ್ಯಾ (20), ಅರಕಲಗೂಡು ತಾಲೂಕಿನ ಕೊಣನೂರು ಗ್ರಾಮದ ಅಭಿಷೇಕ್ (19), ಮೇ 28ರಂದು ಹಾಸನ ತಾಲ್ಲೂಕಿನ ಕೆಲವತ್ತಿ ಗ್ರಾಮದ ಕವನ(20), ಜೂ.11ರಂದು ಹೊಳೆನರಸೀಪುರ ಪಟ್ಟಣದ ನಿಶಾಂತ್ (20), ಜೂ 12ರಂದು ಆಲೂರು ತಾಲ್ಲೂಕಿನ ಮಗ್ಗೆ ಗ್ರಾಮದ ಬಳಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಸಾರಿಗೆ ಇಲಾಖೆ ನೌಕರ ಬಿ.ಆರ್.ನಾಗಪ್ಪ (55), ಹಾಸನ ನಗರಸಭೆ ಮಾಜಿ ಸದಸ್ಯ ನೀಲಕಂಠಪ್ಪ (58), ಜೂ.13ರಂದು ಹಾಸನ ಹೊರವಲಯದ ರಾಜಘಟ್ಟ ಬಳಿ ಕಾರಿನಲ್ಲೇ ದೇವರಾಜ್ (43), ಹಾಸನ ನಗರದ ತೆಲುಗರ ಬೀದಿಯ ಸತೀಶ್ (57), ಜೂ.14ರಂದು ಹಾಸನ ತಾಲ್ಲೂಕಿನ ದೊಡ್ಡಪುರ ಗ್ರಾಮದ ಕಾಂತರಾಜು (51) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೀಗೆ ಸರಣಿ ಸಾವಾಗುತ್ತಿರುವುದಕ್ಕೆ ಕೋವಿಡ್ ಲಸಿಕೆಯೇ ಕಾರಣ ಎಂದು ಸಂಶಯ ಮೂಡಿತ್ತು. ಹೀಗಾಗಿ ರಾಜಾರಾಂ ಎನ್ನುವವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು.

ಮನವಿಯನ್ನು ಆಧರಿಸಿ ಸಿಎಂ ಸಿದ್ದರಾಮಯ್ಯ ಅವರು ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಮುಖ್ಯಕಾರ್ಯದರ್ಶಿಗೆ ಸೂಚಿಸಿದ್ದರು. ಬಳಿಕ 10 ನುರಿತ ವೈದ್ಯರ ತಂಡ ಯುವಕರ ಹಠಾತ್ ಸಾವಿನ ಬಗ್ಗೆ ತನಿಖೆ ನಡೆಸಿದೆ. 18 ರಿಂದ 45 ವರ್ಷದೊಳಗಡೆ ಹೃದಯಾಘಾತದಿಂದ ಸಾವನ್ನಪ್ಪಿದ 250 ಮಂದಿಯ ಸಾವಿನ ವರದಿಯನ್ನು ತನಿಖೆಗೊಳಪಡಿಸಿ, ನಾಲ್ಕು ತಿಂಗಳುಗಳ ಕಾಲ ಅಧ್ಯಯನ ನಡೆಸಿ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎನ್ನುವ ವರದಿ ಸಿದ್ಧಪಡಿಸಿದೆ.

Leave a Reply

Your email address will not be published. Required fields are marked *