2025ರ ಅರ್ಧ ಭಾಗವು ಪೂರ್ಣಗೊಂಡಿದೆ. ಈ ಅವಧಿಯಲ್ಲಿ ಸಿನಿಮಾ ಪ್ರಿಯರಿಗೆ ಹೆಚ್ಚಿನ ಮನರಂಜನೆ ಸಿಕ್ಕಿಲ್ಲ ಎಂದೇ ಹೇಳಬಹುದು. ಆದರೆ, ಮುಂದಿನ ಆರು ತಿಂಗಳು ಸಾಕಷ್ಟು ಅದ್ದೂರಿಯಾಗಿ ಇರುತ್ತದೆ. ಪ್ರತಿ ತಿಂಗಳು ಒಂದು ಪ್ಯಾನ್ ಇಂಡಿಯಾ ಸಿನಿಮಾನ ನೀವು ನಿರೀಕ್ಷಿಸಬಹುದು. ಹಾಗಾದರೆ ಯಾವುದು ಆ ಸಿನಿಮಾಗಳು?

ಜುಲೈ : ಜುಲೈ ತಿಂಗಳಲ್ಲಿ ಪವನ್ ಕಲ್ಯಾಣ್ ಅವರು ನಟಿಸಿರುವ ‘ಹರಿ ಹರ ವೀರ ಮಲ್ಲು’ ಸಿನಿಮಾ ಇದೆ. ಈ ಚಿತ್ರವು ಡಿಸೆಂಬರ್ 24ರಂದು ರಿಲೀಸ್ ಆಗಲಿದೆ. ಜ್ಯೋತಿ ಕೃಷ್ಣ ಹಾಗೂ ಕ್ರಿಶ್ ಅವರು ಇದನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗಲಿದೆ
ಆಗಸ್ಟ್ : ಆಗಸ್ಟ್ ತಿಂಗಳಂದು ಸಾಕಷ್ಟು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಶಿವರಾಜ್ಕುಮಾರ್ ನಟನೆಯ ‘45’ ಆಗಸ್ಟ್ 14ರಂದು ರಿಲೀಸ್ ಆಗಲಿದೆ. ಆಗಸ್ಟ್ 14ರಂದು ‘ಕೂಲಿ’ ಹಾಗೂ ‘ವಾರ್ 2’ ಸಿನಿಮಾಗಳಲ್ಲಿ ಈ ತಿಂಗಳಲ್ಲಿ ನೀವು ನಿರೀಕ್ಷಿಸಬಹುದು. ‘ಕೂಲಿ’ ಚಿತ್ರದಲ್ಲಿ ರಜನಿಕಾಂತ್ ಹೀರೋ ಆದರೆ, ‘ವಾರ್ 2’ ಚಿತ್ರದಲ್ಲಿ ಹೃತಿಕ್ ರೋಶನ್ ಹಾಗೂ ಜೂನಿಯರ್ ಎನ್ಟಿಆರ್ ಇದ್ದಾರೆ.
ಸೆಪ್ಟೆಂಬರ್ : ಸೆಪ್ಟೆಂಬರ್ನಲ್ಲಿ ‘ಭಾಗಿ 4’ ಚಿತ್ರವು ರಿಲೀಸ್ ಆಗಲಿದೆ. ಇದಲ್ಲದೆ ತೇಜ್ ಸಜ್ಜಾ ನಟನೆಯ ‘ಮಿರಾಯಿ’ ಬರುತ್ತಿದೆ. ಬಾಲಯ್ಯ ಅಭಿನಯದ ‘ಅಖಂಡ್ 2’ ಹಾಗೂ ‘ಒಜಿ’ ಚಿತ್ರಗಳು ಈ ಸಂದರ್ಭದಲ್ಲಿ ತೆರೆ ಕಾಣಲಿವೆ.
ಅಕ್ಟೋಬರ್ : ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಸೂಪರ್ ಹಿಟ್ ಆಯಿತು. ಇದಕ್ಕೆ ಅವರದ್ದೇ ನಿರ್ದೇಶನ ಇತ್ತು. ಈಗ ‘ಕಾಂತಾರ: ಚಾಪ್ಟರ್ 1’ ಅಕ್ಟೋಬರ್ 2ರಂದು ತೆರೆಗೆ ಬರಲಿದೆ. ಇದನ್ನು ಖಚಿತಪಡಿಸಲಾಗಿದೆ. ಈ ಸಿನಿಮಾಗಾಗಿ ಕನ್ನಡಿಗರು ಮಾತ್ರವಲ್ಲ ಇಡೀ ಭಾರತ ಕಾದಿದೆ.
ನವೆಂಬರ್ : ಸದ್ಯದ ಮಟ್ಟಿಗೆ ನವೆಂಬರ್ನಲ್ಲಿ ಯಾವುದೇ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗುತ್ತಿಲ್ಲ. ಇದನ್ನು ಕೆಲ ಸ್ಟಾರ್ ಹೀರೋಗಳು ಬಳಸಿಕೊಳ್ಳಬಹುದು. ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ’, ದರ್ಶನ್ ಅಭಿನಯದ ‘ಡೆವಿಲ್’ ಈ ತಿಂಗಳ ಮೇಲೆ ಕಣ್ಣಿಡಬಹುದು.
ಡಿಸೆಂಬರ್ : ಡಿಸೆಂಬರ್ ಯಾವಾಗಲೂ ವಿಶೇಷ. ಈ ಸಂದರ್ಭದಲ್ಲಿ ದೊಡ್ಡ ಚಿತ್ರಗಳು ಮೂಡಿ ಬರುತ್ತವೆ. ರಣವೀರ್ ಸಿಂಗ್ ಅಭಿನಯದ ‘ಧುರಂಧರ್’, ಪ್ರಭಾಸ್ ಅವರ ‘ದಿ ರಾಜಾ ಸಾಬ್’ ಹಾಗೂ ಶಾಹಿದ್ ಕಪೂರ್ ಅವರ ಇನ್ನೂ ಹೆಸರಿಡದ ಸಿನಿಮಾಗಳನ್ನು ಈ ಸಂದರ್ಭದಲ್ಲಿ ನಿರೀಕ್ಷಿಸಬಹುದಾಗಿದೆ.
