ತುಮಕೂರು ಜಿಲ್ಲೆಯಲ್ಲಿ 23,722 ಬಿಪಿಎಲ್ ಕಾರ್ಡ್ ರದ್ದು!

ತುಮಕೂರು ಜಿಲ್ಲೆಯಲ್ಲಿ 23722 ಬಿಪಿಎಲ್ ಕಾರ್ಡ್ ರದ್ದು!

ತುಮಕೂರು:- ಬಿಪಿಎಲ್ ಕಾರ್ಡ್ಗಳನ್ನು ಹೊಂದುವ ಮಾನದಂಡಗಳಡಿ ಬಾರದ 23722  ಕಾರ್ಡುಗಳನ್ನು ಸರ್ಕಾರ ತುಮಕೂರು ಜಿಲ್ಲೆಯಲ್ಲಿ ರದ್ದುಗೊಳಿಸಿದೆ.

ತುಮಕೂರು ಜಿಲ್ಲೆಯಲ್ಲಿ ರದ್ದುಗೊಳಿಸಲಾದ ಬಿಪಿಎಲ್  ಕಾರ್ಡುದಾರರ ಮಾಹಿತಿಯನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಜಿಲ್ಲೆಯಲ್ಲಿ 4547 ಆದಾಯ ತೆರಿಗೆ ಪಾವತಿದಾರರು, 219 ಸರ್ಕಾರಿ ನೌಕರರು, ವಾರ್ಷಿಕ 1.20  ಲಕ್ಷ ರೂ.ಗಳಿಗಿಂತಲೂ ಹೆಚ್ಚು ಕೌಟುಂಬಿಕ ಆದಾಯ ಹೊಂದಿರುವವರು ಸೇರಿ 19124ಜನ  ಪಡಿತರ ಚೀಟಿಯನ್ನು ಹೊಂದಿದ್ದಾರೆ. ಇವರೆಲ್ಲರ ಬಿಪಿಎಲ್ ಕಾರ್ಡು ಈಗ ರದ್ದಾಗಿದೆ ಎಂದು ಹೇಳಿದ್ದಾರೆ.

ವಿರೋಧ ಪಕ್ಷದವರು ಬಿಪಿಎಲ್ ಪಡಿತರ ಚೀಟಿಗಳ ಬಗ್ಗೆ ಜನರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಆದಾಯ ತೆರಿಗೆ ಪಾವತಿಸುವವರು, ಸರ್ಕಾರಿ ನೌಕರರು, ನಾಲ್ಕು ಚಕ್ರ ವಾಹನ(ವೈಟ್ ಬೋರ್ಡ್) ಹೊಂದಿರುವವರು ನಿಯಮಾವಳಿಯನ್ವಯ ಬಿಪಿಎಲ್ ಪಡಿತರ ಚೀಟಿ ಪಡೆಯಲು ಅರ್ಹರಿರುವುದಿಲ್ಲ. ರಾಜ್ಯದಲ್ಲಿ ಅಂಕಿ ಅಂಶಗಳ ಪ್ರಕಾರ ಶೇ. 80ರಷ್ಟು ಕುಟುಂಬಗಳು ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿವೆ.  ಕರ್ನಾಟಕವು ದೇಶದಲ್ಲಿ ತೆರಿಗೆ ಪಾವತಿಸುವಲ್ಲಿ 2 ನೇ ಸ್ಥಾನದಲ್ಲಿದ್ದರೂ ಶೇ.80ರಷ್ಟು ಬಿಪಿಎಲ್ ಕುಟುಂಬವಿರಲು ಹೇಗೆ ಸಾಧ್ಯ? ಜಿಬಿಪಿಎಲ್ ಕುಟುಂಬದ ಅರ್ಹರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಬೇಕೆಂಬ ದೃಷ್ಟಿಯಿಂದ  ಅನರ್ಹ ಪಡಿತರ ಚೀಟಿಯನ್ನು ರದ್ದುಪಡಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂಬ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವ ಸಲುವಾಗಿ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲಾಗುತ್ತಿದೆ ಎಂದು ವಿರೋಧಪಕ್ಷದವರು ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾದ ಮಾತು ಎಂದು ಸ್ಪಷ್ಟಪಡಿಸಿದರು.

ಜನರ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ :-

ರಾಜ್ಯದ ಜನತೆ ನಮ್ಮ ಸರ್ಕಾರದ ಮೇಲೆ ಇಟ್ಟಿರುವ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಹಲವಾರು ಭರವಸೆಗಳನ್ನು ಈಡೇರಿಸಿದ್ದೇವೆ. ಐದು ವರ್ಷ ಕಳೆಯುವುದರೊಳಗೆ ಎಲ್ಲ ಭರವಸೆಗಳನ್ನು ಹಂತಹAತವಾಗಿ ಅನುಷ್ಠಾನಗೊಳಿಸುತ್ತೇವೆ ಎಂದು ಹೇಳಿದರು.

ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬೀದಿ ನಾಯಿಗಳ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ನಗರ ವ್ಯಾಪ್ತಿಯಲ್ಲಿ  3000 ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತç ಚಿಕಿತ್ಸೆ ಮಾಡಲು ಪಾಲಿಕೆ ಮುಂದಾಗಿದ್ದು, ಈಗಾಗಲೇ 700 ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತç ಚಿಕಿತ್ಸೆ ಹಾಗೂ ಆ್ಯಂಟಿ ರೇಬಿಸ್ ವ್ಯಾಕ್ಸಿನೇಷನ್ ಮಾಡಲಾಗಿದೆ ಎಂದು ತಿಳಿಸಿದರು.

 ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಒಂದು ಬಾರಿ ತೀರುವಳಿ (ಒಟಿಎಸ್) ಮೂಲಕ ಆಸ್ತಿ ತೆರಿಗೆ ಬಾಕಿ ಪಾವತಿಸಲು ಅವಕಾಶ ನೀಡಿರುವಂತೆ ಪಾಲಿಕೆಯಲ್ಲಿಯೂ ಅವಕಾಶ ಕಲ್ಪಿಸಬೇಕು ಎಂಬ ಪತ್ರಕರ್ತರ ಮನವಿಗೆ ಸ್ಪಂದಿಸಿದ ಅವರು ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ ಪಾಲಿಕೆಯಲ್ಲೂ ಸಹ ಒಂದು ಬಾರಿ ತೀರುವಳಿ(ಒಟಿಎಸ್)ಗೆ ಸಮಯ ನಿಗಧಿ ಮಾಡಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *