ಸ್ವಚ್ಛ ಸರ್ವೇಕ್ಷಣ ಅಂಗವಾಗಿ ವಿಶೇಷ ಸ್ವಚ್ಛತಾ ಅಭಿಯಾನ.!

ಸ್ವಚ್ಛ ಸರ್ವೇಕ್ಷಣ ಅಂಗವಾಗಿ ವಿಶೇಷ ಸ್ವಚ್ಛತಾ ಅಭಿಯಾನ.!

26 ರಸ್ತೆ ವಿಭಜಕಗಳಲ್ಲಿ ಸ್ವಚ್ಛತಾ ಕಾರ್ಯಾಚರಣೆ .

ಬೆಂಗಳೂರು:  ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ತ್ಯಾಜ್ಯಮುಕ್ತ ನಗರ ಪಾಲಿಕೆ ರೂಪಿಸುವ ಉದ್ದೇಶದಿಂದ ಹಾಗೂ ಸ್ವಚ್ಛ ಸರ್ವೇಕ್ಷಣ 2025-26 ರ ಶ್ರೇಯಾಂಕದಲ್ಲಿ ಉತ್ತಮ ಸ್ಥಾನ ಗಳಿಸುವ ನಿಟ್ಟಿನಲ್ಲಿ ವಿಶೇಷ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ರೂಪಿಸಲಾದ ಕಾರ್ಯ ಯೋಜನೆಯ (ಆಕ್ಷನ್ ಪ್ಲಾನ್) ಅನ್ವಯ 8 ನೇ ಭಾಗವಾಗಿ ಕೇಂದ್ರ ನಗರ ಪಾಲಿಕೆ  ವ್ಯಾಪ್ತಿಯಲ್ಲಿ *26 ರಸ್ತೆ ವಿಭಜಕಗಳು ಹಾಗೂ ರಸ್ತೆಯಲ್ಲಿನ ದ್ವೀಪಗಳನ್ನು (ಐಲ್ಯಾಂಡ್) ಆಯ್ಕೆ ಮಾಡಿಕೊಂಡು ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ* ಹಾಗೂ ಸುತ್ತಮುತ್ತ ತ್ಯಾಜ್ಯ ಹಾಕದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು *ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತರಾದ ಶ್ರೀ ದಲ್ಜಿತ್ ಕುಮಾರ್* ತಿಳಿಸಿದ್ದಾರೆ.

ಸ್ವಚ್ಛತಾ ಕಾರ್ಯದಲ್ಲಿ ಒಟ್ಟು 291 ಜನ ಪೌರಕಾರ್ಮಿಕರು ಹಾಗೂ ಇತರೆ ಸ್ವಚ್ಛತೆ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. *ಈ ಕಾರ್ಯಾಚರಣೆಯಲ್ಲಿ ಸುಮಾರು 3.5 ಟನ್ ತ್ಯಾಜ್ಯವನ್ನು ಸಂಗ್ರಹಿಸಿ* ವಿಲೇವಾರಿ ಮಾಡಲಾಗಿದೆ.

ಈ ಸ್ವಚ್ಛತಾ ಅಭಿಯಾನದಲ್ಲಿ ಡಿಜಿಎಂ ಭೀಮೇಶ್ ನಾಯಕ್, ಸಂಬಂಧಿತ ವಿಭಾಗದ ಎ.ಜಿ.ಎಂ ಗಳು ಅಧಿಕಾರಿಗಳು, ಪೌರಕಾರ್ಮಿಕರು ಹಾಗೂ ಇತರೆ ಸಿಬ್ಬಂದಿಗಳು ಭಾಗಿಯಾಗಿದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *