ಬೆಂಗಳೂರು; ಭಗವಾನ್ ಮಹಾವೀರರ 2624 ನೇ ಜನ್ಮ ಜಯಂತಿ ಹಿನ್ನೆಲೆಯಲ್ಲಿ ಏಪ್ರಿಲ್ 10 ರಂದು ಜೈನ್ ಯುವ ಸಂಘಟನೆಯಿಂದ ಕಲ್ಯಾಣ ಮಹೋತ್ಸವವನ್ನು ಆಯೋಜಿಸಿದ್ದು, ಅಹಿಂಸಾ ಮತ್ತು ವಿಶ್ವಶಾಂತಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಹಲವಾರು ಸಾಮಾಜಿಕ ಚಟುವಟಿಕೆಗಳ ಮೂಲಕ ಭಗವಾನ್ ಮಹಾವೀರರ ಕಲ್ಯಾಣ ಮಹೋತ್ಸವವನ್ನು ಸ್ಮರಣೀಯಗೊಳಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿ್ಎ ಎಂದು ಜೈನ್ ಯುವ ಸಂಘಟನೆಯ ಅಧ್ಯಕ್ಷ ಜೈನ್ ಮಹಾವೀರ್ ಮುನೋತ್ ಹೇಳಿದ್ದಾರೆ.

ಫ್ರೀಡಂ ಪಾರ್ಕ್ ಸಮೀಪದ ಗಾಂಧಿನಗರದ ಕುಂಡಲಪುರದಲ್ಲಿ ಜೈನ ಧರ್ಮದ ಸಂದೇಶ ಹಾಗೂ ಧ್ಯೇಯಗಳನ್ನು ಪಸರಿಸಲು ಈ ಬಾರಿ ಕಲ್ಯಾಣ ಮಹೋತ್ಸವವನ್ನು ಮತ್ತಷ್ಟು ಆಕರ್ಷಣೀಯಗೊಳಿಸಲಾಗುತ್ತಿದೆ. ಮಹಾತ್ಮಾಗಾಂಧೀಜಿ, ಲೋಕಮಾನ್ಯ ತಿಲಕರ ಮೇಲೆಯೂ ಜೈನಧರ್ಮ ವ್ಯಾಪಕ ಪರಿಣಾಮ ಬೀರಿದ್ದು, ಅವರ ಬೋಧನೆಗಳು ಆತ್ಮದ ಅಂದವನ್ನು ಮತ್ತು ಐಕ್ಯತೆಯನ್ನು ಪ್ರತಿಬಿಂಬಿಸುತ್ತವೆ. “ಬದುಕು ಮತ್ತು ಬದುಕಲು ಬಿಡು” ಎಂಬ ಘೋಷವಾಕ್ಯ ಪ್ರಪಂಚದಾದ್ಯಂತ ಅತಿ ಹೆಚ್ಚು ಜನರು ಆಚರಿಸುವಂತೆ ಮಾಡಿದೆ ಎಂದರು.
ಈ ವರ್ಷದ ನಮ್ಮ ಧಾರ್ಮಿಕ ಮತ್ತು ಮಾನವತಾ ಸೇವೆಗಳಲ್ಲಿ ರಕ್ತದಾನ ಶಿಬಿರದ ಮೂಲಕ 500 ಯೂನಿಟ್ ಗಳಿಗಿಂತ ಅಧಿಕ ರಕ್ತ ಸಂಗ್ರಹ. ಉಚಿತ ಕಣ್ಣು ಪರೀಕ್ಷೆ, ಮಧುಮೇಹ, ರಕ್ತದೊತ್ತಡ ಮತ್ತಿತರೆ ಪರೀಕ್ಷೆಗಳನ್ನು ನಡೆಸಿ, ಅಶಕ್ತರಿಗೆ ಆಹಾರ ಪೂರೈಸಲಾಗುತ್ತಿದೆ ಎಂದರು.