ತುಮಕೂರು: ನಗರದ ರೈಲ್ವೆ ಸ್ಟೇಷನ್ ಬಳಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಪ್ರತ್ಯೇಕ ಪ್ರಕರಣಗಳಲ್ಲಿ ಮೂರು ಬೈಕ್‌ಗಳು ಕಳುವಾಗಿರುವ ಬಗ್ಗೆ ನಗರ ಠಾಣೆ, ತಿಲಕ್‌ಪಾರ್ಕ್ ಹಾಗೂ ಎನ್ ಇಪಿಎಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕ್ಲಿನಿಕ್‌ಗೆ ತೆರಳಿ ವಾಪಸ್ ಬಂದಾಗ ಬೈಕ್ ನಾಪತ್ತೆ
ಜು.28ರಂದು ಮಧ್ಯಾಹ್ನ 1.30ರ ಸಮಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ಖಾಸಗಿ ಕ್ಲಿನಿಕ್‌ಗೆ ತಮ್ಮ ಮಗಳನ್ನು ತೋರಿಸಲು ಬಂದಿದ್ದ ಎಲ್.ಎಚ್.ರವಿ ಅವರು ಅಶೋಕ ರಸ್ತೆಯಲ್ಲಿ ತಮ್ಮ ಪ್ಯಾಷನ್ ಪ್ಲಸ್ ಬೈಕ್ ನಿಲ್ಲಿಸಿದ್ದರು. ಮಗಳಿಗೆ ಚಿಕಿತ್ಸೆ ಕೊಡಿಸಿ ಸಂಜೆ 6ಕ್ಕೆ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿದ್ದು, ಎಲ್ಲೆಡೆ ಹುಡುಕಾಡಿ ಜು.31ರಂದು ನಗರಠಾಣೆಯಲ್ಲಿ ದೂರುದಾಖಲಾಗಿದೆ. ಕಳುವಾದ ಬೈಕ್ ದೂರುದಾರರಿಗೆ ಅವರ ಸಂಬAಧಿಯವರು ವರ್ಷದ ಹಿಂದೆ ನೀಡಿದ್ದಾಗಿದೆ.
ಶಿಕ್ಷಕರೊಬ್ಬರ ಬೈಕ್ ಕಳವು
ನಗರದ ಮಹಾಲಕ್ಷಿö್ಮÃನಗರ ವಾಸಿ ಶಿಕ್ಷಕ ಬಿ.ಮಂಜುನಾಥ್ ಎಂಬುವರಿಗೆ ಸೇರಿದ ಪ್ಯಾಷನ್ ಪ್ರೋ ದ್ವಿಚಕ್ರ ವಾಹನ ರೈಲ್ವೆಸ್ಟೇಷನ್ ಮುಂಭಾಗ ನಿಲ್ಲಿಸಿದ್ದ ವೇಳೆ ಕಳುವಾಗಿದ್ದು, ಜುಲೈ 11ರಂದು ನಡೆದ ಪ್ರಕರಣದ ಬಗ್ಗೆ ತಡವಾಗಿ ಜು.29ರಂದು ಎನ್‌ಇಪಿಎಸ್ ಠಾಣೆಗೆ ಆಗಮಿಸಿ ದೂರು ನೀಡಲಾಗಿದೆ.
ಗೆಳೆಯನ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳವು
ಜುಲೈ 22ರಂದು ರೈಲ್ವೆ ಸ್ಟೇಷನ್ ಬಳಿಯ ತನ್ನ ಗೆಳೆಯನ ಮನೆ ಬಳಿ ನಿಲ್ಲಿಸಿದ್ದ ಪಿಎಚ್ ಕಾಲೋನಿ ವಾಸಿ ಫಾಜಿಲ್ ಅಹಮದ್ ಎಂಬುವರ ಟಿವಿಎಸ್ ವಿಕ್ಟರ್ ಬೈಕ್ ಕಳುವಾಗಿದ್ದು ತಿಲಕ್‌ಪಾರ್ಕ್ ಠಾಣೆಗೆ ದೂರು ನೀಡಿದ್ದಾರೆ. ಇವರು ಅಂದು ಬೆಳಿಗ್ಗೆ ಬೈಕ್ ನಿಲ್ಲಿಸಿ ರೈಲಿನಲ್ಲಿ ಬೆಂಗಳೂರಿಗೆ ಕೆಲಸಕ್ಕೆ ತೆರಳಿ ರಾತ್ರಿ 8ಕ್ಕೆ ವಾಪಸ್ ಬಂದಾಗ ಬೈಕ್ ಕಣ್ಮರೆಯಾಗಿದೆ. ಕಳುವಾದ ಬೈಕ್‌ಗೆ ಫಾಜಿಲ್ 2ನೇ ಮಾಲೀಕರಾಗಿದ್ದು, ಇನ್ನೂ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿರಲಿಲ್ಲ ಎಂಬುದು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.




