ರೈತ ಪ್ರಗತಿ || ಈ ಯೋಜನೆ ಅಡಿ ರೈತರಿಗೆ ದೊರಯಲಿದೆ 3 ಸಾವಿರ ಪಿಂಚಣಿ

ಈ ಯೋಜನೆ ಅಡಿ ರೈತರಿಗೆ ದೊರಯಲಿದೆ 3 ಸಾವಿರ ಪಿಂಚಣಿ

ಭಾರತವು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಅನೇಕರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಒಂದು ಕಡೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ ಸರ್ಕಾರ ರೈತರನ್ನು ಬೆಂಬಲಿಸಲು ಅನೇಕ ಯೋಜನೆಯನ್ನು ಪರಿಚಯಿಸಿದೆ.ಅದರಲ್ಲಿ “ಪ್ರಧಾನ ಮಂತ್ರಿ ಕಿಸಾನ್ ಮನ್ಧನ್ ಯೋಜನೆ” ಎಂಬ ಯೋಜನೆ ಒಂದು.

ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಲು, ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು ಮತ್ತು ರೈತರಾಗಿರಬೇಕು. ನಿರ್ದಿಷ್ಟ ವಯಸ್ಸಿನೊಳಗಿನ ವ್ಯಕ್ತಿಗಳು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. 15,000 ರೂ.ಗಿಂತ ಕಡಿಮೆ ಮಾಸಿಕ ಆದಾಯ ಹೊಂದಿರುವ 20 ರಿಂದ 42 ವರ್ಷ ವಯಸ್ಸಿನ ಭಾರತೀಯ ರೈತರು ಅರ್ಜಿ ಸಲ್ಲಿಸಲು ಅರ್ಹರು. ಇದಲ್ಲದೆ ಅರ್ಜಿದಾರರು ಈಗಾಗಲೇ NPS, EPFO, ಅಥವಾ ESIC ನಲ್ಲಿ ಸಕ್ರಿಯರಾಗಿದ್ದರೆ ಅವರು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

ಪ್ರಧಾನ ಮಂತ್ರಿ ಕಿಸಾನ್ ಮನ್ಧನ್ ಯೋಜನೆಗೆ ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಪ್ರತಿ ತಿಂಗಳು 55 ರೂ. ನಿಂದ 200 ರೂ. ನಡುವೆ ಹೂಡಿಕೆ ಮಾಡಬೇಕಾಗುತ್ತದೆ. ಈ ಮೊತ್ತವನ್ನು ಅರ್ಜಿದಾರರ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಅರ್ಜಿದಾರರಿಗೆ 60 ವರ್ಷ ತುಂಬಿದ ನಂತರ ಅವರು ಪ್ರತಿ ತಿಂಗಳು 3,000 ರೂ. ಪಿಂಚಣಿ ಪಡೆಯುತ್ತಾರೆ. ಅರ್ಜಿದಾರರು ತಮ್ಮ ಆಧಾರ್ ಕಾರ್ಡ್, ಮತದಾರರ ಕಾರ್ಡ್, ರೇಷನ್ ಕಾರ್ಡ್ ಅಥವಾ ಶಾಶ್ವತ ನಿವಾಸದ ಪುರಾವೆ, ಬ್ಯಾಂಕ್ ಖಾತೆ ಪಾಸ್‌ಬುಕ್, ಸಕ್ರಿಯ ಮೊಬೈಲ್ ಸಂಖ್ಯೆ ಮತ್ತು ಬಣ್ಣದ ಪಾಸ್‌ಪೋರ್ಟ್ ಗಾತ್ರದ ಫೋಟೋವನ್ನು ಒದಗಿಸಬೇಕಾಗುತ್ತದೆ. ಆಸಕ್ತ ಅರ್ಹ ವ್ಯಕ್ತಿಗಳು ಈ ದಾಖಲೆಗಳೊಂದಿಗೆ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಕೇಂದ್ರ ಕಚೇರಿಗೆ ಭೇಟಿ ನೀಡಿ.

Leave a Reply

Your email address will not be published. Required fields are marked *