ಬೆಂಗಳೂರು: ಐಟಿ ಕಾರಿಡಾರ್ ಎಲೆಕ್ಟ್ರಾನಿಕ್ ಸಿಟಿ ಮೂಲಕ ಸಾಗಿ ಬೊಮ್ಮಸಂದ್ರ ತಲುಪುವ ನಮ್ಮ ಮೆಟ್ರೋ ಹಳದಿ ಮಾರ್ಗವು (Namma metro yellow line) ಪ್ರಯಾಣಿಕರಿಗೆ ಸಂಚಾರ ಮುಕ್ತಗೊಳಿಸಲು ಮಹೂರ್ತ ಕೂಡಿ ಬಂದಿದೆ. ಪ್ರೋಟೋ ಟೈಪ್ ಮಾದರಿಯ ಎರಡು ಡ್ರೈವರ್ ಲೆಸ್ ರೈಲು ಹೊಂದಿರುವ BMRCL ಇದೇ ಏಪ್ರಿಲ್ ಅಂತ್ಯಕ್ಕೆ ಚೀನಾದಿಂದ ಚೆನ್ನೈ ಮಾರ್ಗವಾಗಿ ಬರುವ ಮೂರನೇ ರೈಲಿನ ಆಗಮನ ಎದುರು ನೋಡುತ್ತಿದೆ.

ಎಲೆಕ್ಟ್ರಾನಿಕ್ ಸಿಟಿ ಮೂಲಕ ಹಾದು ಹೋಗುವ ಆರ್.ವಿ.ರಸ್ತೆ-ಬೊಮ್ಮಸಂದ್ರ ಹಳದಿ ಮೆಟ್ರೋ ಮಾರ್ಗವು 19 ಕಿ.ಮೀ. ಇದೆ. ಈ ಮಾರ್ಗದಲ್ಲಿ ಜೂನ್ ಅಂತ್ಯಕ್ಕೆ ಇಲ್ಲವೇ ಜುಲೈ ಆರಂಭದಲ್ಲಿ ಡೈವರ್ಲೆಸ್ ಮೆಟ್ರೋ ರೈಲುಗಳು ಪ್ರಯಾಣಿಕರನ್ನು ಹೊತ್ತೊಯ್ಯಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮಾಹಿತಿ ನೀಡಿದೆ.
ಅಧಿಕಾರಿಗಳ ಚಿತ್ತ ಮೂರನೇ ರೈಲಿನತ್ತ
ಸದ್ಯ ಎರಡನೇ ರೈಲಿನ ಪ್ರಾಯೋಗಿಕ ಸಂಚಾರ, ಸಿಗ್ನಲ್ ಪರೀಕ್ಷೆ ಸೇರಿದಂತೆ ಹಲವು ಪರೀಕ್ಷೆಗಳೂ ಪೂರ್ಣಗೊಂಡಿವೆ. ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ಇದೇ ಏಪ್ರಿಲ್ ಅಂತ್ಯಕ್ಕೆ ಅನುಮೋದನೆ ನೀಡಲಿದ್ದಾರೆ. ಆ ಹೊತ್ತಿಗೆ ಮೂರನೇ ಡ್ರೈವರ್ಲೆಸ್ ರೈಲು ಚೀನಾದ ಸಿಆರ್ಆರ್ಸಿ ನಾನ್ಜಿಂಗ್ ಪುಸಾನ್ ಕಂಪನಿ ಲಿಮಿಟೆಡ್ ತಯಾರಿಸಿದೆ.
ಚೀನಾ ನಿರ್ಮಿತ ಬೋಗಿಗಳು, ಬಿಡಿ ಭಾಗಗಳು ಭಾರತದ ಕೊಲ್ಕತ್ತಾದ ಟಿಟಾಗರ್ ರೈಲ್ ಸಿಸ್ಟಮ್ಗೆ ಕಾರ್ಖಾನೆಗೆ ಬರಲಿವೆ. ಅಲ್ಲಿಂದ ಜೋಡಣೆ ಆಗಿ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಬರಲಿವೆ. 2019 ರಲ್ಲಿ BMRCL ಚೀನಾ ಕಂಪನಿ ಜೊತೆಗೆ 36 ರೈಲುಗಳಿಗೆ ಖರೀದಿಗೆ 1578 ಕೋಟಿ ರೂ. ಒಡಂಬಡಿಕೆ ಮಾಡಿಕೊಂಡಿತ್ತು. ಬಾಕಿ ರೈಲುಗಳನ್ನು ತರಲು ನಿಮಗದ ಅಧಿಕಾರಿಗಳು ಕೊಲ್ಕತ್ತಾ ಟಿಟಾಗರ್ ಕಂಪಿನಿಯಲ್ಲಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಏಪ್ರಿಲ್ ಅಂತ್ಯಕ್ಕೆ ಮೂರನೇ ರೈಲು ತರಲು ಸಿದ್ಧತೆ ಆರಂಭಿಸಿದ್ದಾರೆ.
ಹಳದಿ ಮಾರ್ಗದಲ್ಲಿ 15 ರೈಲು ಸಂಚಾರ ಈವರೆಗೆ ಬಿಎಂಆರ್ಸಿಎಲ್ ಹಳದಿ ಮಾರ್ಗಕ್ಕಾಗಿ ಎರಡು ರೈಲು ಮಾತ್ರ ಸ್ವೀಕರಿಸಿದೆ. ಚೀನಾ ಕಂಪನಿ ನೀಡುವ 36 ರೈಲುಗಳಲ್ಲಿ 15 ರೈಲುಗಳು ಹಳದಿ ಮಾರ್ಗದಲ್ಲಿ ಓಡಾಡಲಿವೆ. ಉಳಿದ 21 ರೈಲುಗಳನ್ನು ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಓಡಾಡಲಿವೆ. ಸಿಆರ್ಆರ್ಸಿ ನೇರವಾಗಿ ಎರಡು ರೈಲುಗಳನ್ನು ತಯಾರಿಸುತ್ತಿದೆ. ಉಳಿದವುಗಳನ್ನು ಪಶ್ಚಿಮ ಬಂಗಾಳದ ಕೊಲ್ಲಕತ್ತಾದ ಟಿಟಾಗರ್ ಕಂಪನಿಯಲ್ಲಿ ತಯಾರಾಗುತ್ತಿವೆ. ಈ ಹಳದಿ ಮಾರ್ಗದ ರೈಲುಗಳು ಚಾಲಕ ರಹಿತ ಮತ್ತು ಸಂವಹನ ಆಧಾರಿತ ರೈಲು ನಿಯಂತ್ರಣ (CBTC) ತಂತ್ರಜ್ಞಾನ ಹೊಂದಿವೆ. ಆರಂಭದಲ್ಲಿ ಲೋಕೋ ಪೈಲಟ್ ಸಹಿತ ರೈಲು ಓಡಿಸಲು ಬಿಎಂಆರ್ಸಿಎಲ್ ಅಧಿಕಾರಿಗಳು ಪ್ಲಾನ್ ಮಾಡಿಕೊಂಡಿದ್ದಾರೆ.
2021 ರಲ್ಲಿ ಹಳದಿ ಮಾರ್ಗ ತೆರೆಯಬೇಕಿತ್ತು! ಎರಡನೇ ರೈಲು ಹಾಗೂ 19.15 ಕಿಲೋಮೀಟರ್ ಉದ್ದದ ಹಳದಿ ಮಾರ್ಗದ ಒಟ್ಟು 16 ನಿಲ್ದಾಣಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಶೀಘ್ರವೇ ಅನುಮೋದನೆ ನೀಡಲಿದ್ದಾರೆ. ಅಂದುಕೊಂಡಂತೆ ಎಲ್ಲವು ಆದರೆ ಸದ್ಯದ ರೈಲಿನ ಆವರ್ತನ 2.5 ನಿಮಿಷ ಇದ್ದು, ಅದು 90 ಸೆಕೆಂಡುಗಳಿಗೆ ಇಳಿಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಲವು ಗಡುವು ಮೀರದಿದ್ದರೆ ನಮ್ಮ ಮೆಟ್ರೋ ಹಳದಿ ಮಾರ್ಗವು ಡಿಸೆಂಬರ್ 2021 ರಲ್ಲಿಯೇ ಆರಂಭವಾಗಬೇಕಿತ್ತು. ಅದಾದ ಬಳಿಕ ಕೆಲವು ಗಡುವು ಮೀರಿ ಇದೀಗ 2025ರ ಮಧ್ಯಕ್ಕೆ ಆರಂಭವಾಗುತ್ತಿದೆ..