ತುಮಕೂರು: ಮೊಬೈಲ್‌ಗೆ ಬಂದ ಹೊಟೇಲ್ ರೆಸ್ಟೊರೆಂಟ್ ರಿವ್ಯೂ ಮಾಡಿದರೆ 2000ರೂ. ಹಣ ಸಿಗುತ್ತದೆಂಬ ಆಮಿಷಕ್ಕೆ ಒಳಗಾಗಿ ಆನ್‌ಲೈನ್‌ನಲ್ಲಿ ರಿವ್ಯೂ ಟಾಸ್ಕ್ ಅನ್ನು ಮುಂದುವರಿಸಿ ವಿವಿಧ ಹಂತಗಳಲ್ಲಿ ಒಟ್ಟು 5,34,210ರೂ. ಹಣ ಕಳೆದುಕೊಂಡ ಬಗ್ಗೆ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತುಮಕೂರು ಗ್ರಾಮಾಂತರ ಕಸಬಾ ಹೋಬಳಿ ಹಾರೋಹಳ್ಳಿಯ ತೇಜಸ್ ಎಂಬ ಯುವಕನೇ ಹಣ ಕಳೆದುಕೊಂಡವನಾಗಿದ್ದು,ಈತ ತನ್ನ ಮೊಬೈಲ್‌ಗೆ ಬಂದ ಹೋಟೆಲ್ ರೆಸ್ಟೊರೆಂಟ್ ರಿವ್ಯೂ ಕೊಟ್ಟರೆ 2000 ಹಣ ಗಳಿಸಬಹುದೆಂಬ ಆಸೆಗೊಳಗಾಗಿ ಟಾಸ್ಕ್ ಪ್ರವೇಶಿಸಿದ್ದಾನೆ. ಮೊದಲಿಗೆ 2000 ಹಣ ಯುವಕನ ಖಾತೆಗೆ ಜಮೆ ಮಾಡಿದ್ದಾರೆ.
ನಂತರ ವಂಚಕರು ಟೆಲಿಗ್ರಾಂ ಆಪ್ ಮೂಲಕ ಯುವಕನನ್ನು ಸಂಪರ್ಕಕ್ಕೆ ಬರಬೇಕೆಂದು ತಿಳಿಸಿ, ಬಿಟ್ ಕಾಯಿನ್ ಟ್ರೇಡಿಂಗ್‌ನಲ್ಲಿ ತೊಡಗಿದರೆ ಇನ್ನೂ ಹೆಚ್ಚಿನ ಹಣ ಗಳಿಸಬಹುದೆಂದು ನಂಬಿಸಿ ಏಪ್ರಿಲ್ 17 ರಿಂದ ಜುಲೈ 23ರವರೆಗೆ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಯುಪಿಐ ಐಡಿಗಳಿಗೆ 5,34,210 ರೂ. ಹಣ ಹಾಕಿಸಿಕೊಂಡು ವಂಚಿಸಿದ್ದಾರೆ.
ವಂಚನೆಗೊಳಗಾದ ಹಣ ಮರಳಿ ಪಡೆಯಲು ಮತ್ತೆ 35,890ರೂ ಪಾವತಿಸಿ ಎಂದು ಮೆಸೇಜ್ ಬಂದಿದ್ದನ್ನು ನೋಡಿ ಸ್ನೇಹಿತರ ಗಮನಕ್ಕೆ ತಂದಾಗ ತೇಜಸ್‌ಗೆ ತಾನೂ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಬಳಿಕ ಆ.4ರಂದು ಸೈಬರ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾನೆ.
For More Updates Join our WhatsApp Group :