ಬೆಂಗಳೂರು: ಹಳಸಿದ ಕೇಸ್ ತಿಂದು 5 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆಯೊಂದು ಕೆಪಿ ಅಗ್ರಹಾರದ ಭುವನೇಶ್ವರಿ ನಗರದಲ್ಲಿ ಸೋಮವಾರ ನಡೆದಿದೆ.
ಮೃತ ಬಾಲಕನನ್ನು ಬಿ.ಧೀರಜ್ ಎಂದು ಗುರ್ತಿಸಲಾಗಿದೆ. ವಿಷಯುಕ್ತ ಆಹಾರ ಸೇವನೆಯೇ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ.
ಈ ನಡುವೆ ಬಾಲಕನ ಪೋಷಕರಾದ ಬಾಲರಾಜ್ (42) ಹಾಗೂ ತಾಯಿ ನಾಗಲಕ್ಷ್ಮೀ (35) ಅವರಿಗ ವಿವಿ ಪುರಂನ ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.
ಮೂವರಿಗೂ ಹಳಸಿದ ಕೇಕ್ ತಿಂದ ಕೂಡಲೇ ವಾಂತಿ ಹಾಗೂ ಅತಿಸಾರದ ಲಕ್ಷಣಗಳು ಕಂಡು ಬಂದಿದೆ. ಕೇಕ್ ಜೊತೆಗೆ ಅನ್ನ ಹಾಗೂ ಹಪ್ಪಳವನ್ನು ಸೇವನೆ ಮಾಡಿರುವುದಾಗಿ ಬಾಲಕನ ತಂದೆ ಹೇಳಿಕೊಂಡಿದ್ದಾರೆ.