ಮುಂಬೈ: 60 ಕೋಟಿ ರೂಪಾಯಿ ಮೊತ್ತದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ತನಿಖೆ ತೀವ್ರಗೊಂಡಿರುವ ವೇಳೆ, ಇದೀಗ ಅವರ ಪತ್ನಿ ನಟಿ ಶಿಲ್ಪಾ ಶೆಟ್ಟಿಗೂ ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗದಿಂದ ನೋಟಿಸ್ ಜಾರಿ ಮಾಡಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
60 ಕೋಟಿ ವಂಚನೆ: ಶಿಲ್ಪಾ ಶೆಟ್ಟಿ ಕಂಪನಿಗೆ ಹಣ ವರ್ಗಾವಣೆ?
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ವಂಚನೆಯ ಮೊತ್ತದಲ್ಲಿ ಸುಮಾರು ₹15 ಕೋಟಿ ಹಣವನ್ನು ಶಿಲ್ಪಾ ಶೆಟ್ಟಿ ಮಾಲೀಕತ್ವದ ಕಂಪನಿಗೆ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಈ ಹಣವನ್ನು ವೈಯಕ್ತಿಕ ಉದ್ದೇಶಗಳು ಹಾಗೂ ಜಾಹೀರಾತುಗಳ ಖರ್ಚಿಗೆ ಬಳಸಲಾಗಿರುವುದು ಎನ್ನಲಾಗಿದೆ. ಇದರಿಂದಾಗಿ ಶಿಲ್ಪಾ ಶೆಟ್ಟಿಗೆ ನೇರವಾಗಿ ವಿಚಾರಣೆಗಾಗಿ ನೋಟಿಸ್ ನೀಡಲಾಗಿದೆ.
ನಟಿಯರ ಹೆಸರನ್ನೂ ಎಳೆದ ರಾಜ್ ಕುಂದ್ರಾ!
ಈ ಮೊದಲು ರಾಜ್ ಕುಂದ್ರಾ ವಿಚಾರಣೆ ನಡೆದಾಗ, ಅವರು ನೇಹಾ ದೂಪಿಯಾ ಮತ್ತು ಬಿಪಾಷಾ ಬಸು ಸೇರಿದಂತೆ ಕೆಲವು ಬಾಲಿವುಡ್ ನಟಿಯ ಹೆಸರುಗಳನ್ನು ಉಲ್ಲೇಖಿಸಿದ್ದರು. ಈ ನಟಿಯರ ಖಾತೆಗಳಿಗೆ ಸಹ ಹಣ ವರ್ಗಾವಣೆಗೊಂಡಿರುವ ಬಗ್ಗೆ ತನಿಖೆ ಮುಂದುವರೆದಿದೆ.
ವಿವಾದಗಳ ದಂಪತಿ ಮತ್ತೆ ಸುದ್ದಿಯಲ್ಲಿ
ಇದು ಶಿಲ್ಪಾ ಶೆಟ್ಟಿ–ರಾಜ್ ಕುಂದ್ರಾ ದಂಪತಿಗೆ ವಿವಾದದ ಹೊಸ ಪ್ರಸ್ತಾಪವಲ್ಲ. ರಾಜಸ್ಥಾನ ರಾಯಲ್ಸ್ ಬೆಟ್ಟಿಂಗ್ ಪ್ರಕರಣ, ಚಿನ್ನದ ಮಳಿಗೆ ವಂಚನೆ, ಸಾಲದ ಹಗರಣ, ಮತ್ತು ನೀಲಿ ಚಿತ್ರ ನಿರ್ಮಾಣದ ಪ್ರಕರಣದಂತೆ ಹಲವು ವಿವಾದಗಳಲ್ಲಿ ಈ ಜೋಡಿ ಮುಳುಗಿತ್ತು. ಇದೀಗ, ಈ ಹೊಸ ಪ್ರಕರಣ ಮತ್ತೆ ಈ ದಂಪತಿಯನ್ನು ಸುದ್ದಿಯ ಕೇಂದ್ರಬಿಂದುವಾಗಿಸಿದೆ.
For More Updates Join our WhatsApp Group :
https://chat.whatsapp.com/JVoHqE476Wn3pVh1gWNAcH
