ನವದೆಹಲಿ: ದೆಹಲಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ನಿರ್ದೇಶಕನೊಬ್ಬನ ವಿರುದ್ಧ ಭಾರೀ ಲೈಂಗಿಕ ದೌರ್ಜನ್ಯ ಆರೋಪ ಹೊರಟಿದ್ದು, ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್ನ ನಿರ್ದೇಶಕ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ ಹಲವು ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ.
ವಿದೇಶ ಪ್ರವಾಸದ ಭರವಸೆ ನೀಡಿ ಲೈಂಗಿಕ ಶೋಷಣೆ?
ತಮ್ಮ ಕ್ಲಾಸ್‌ನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರಿಗೆ ವಿದೇಶ ಪ್ರವಾಸದ ಆಮಿಷ ತೋರಿಸಿ, ಅಶ್ಲೀಲ ಮೆಸೇಜ್ಗಳು ಕಳುಹಿಸಿ, ಹಾಗು ತಮ್ಮ ಕೋಣೆಗೆ ಕರೆಯುವ ಕೃತ್ಯವನ್ನು ಈ ಸ್ವಾಮೀಜಿ ನಡೆಸುತ್ತಿದ್ದರೆನ್ನಲಾಗಿದೆ. ಒಟ್ಟು 32 ವಿದ್ಯಾರ್ಥಿನಿಯರಲ್ಲಿ ಕನಿಷ್ಠ 16 ಮಂದಿ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿದ್ದಾರೆ.
ಬೆದರಿಕೆ, ಬ್ಲಾಕ್ಮೇಲ್, ಅಶ್ಲೀಲ ಮೆಸೇಜ್: ಒಂದೆರಡಲ್ಲ ಸ್ವಾಮೀಜಿಯ ಕೃತ್ಯ!
- ಪರೀಕ್ಷೆಗಳಲ್ಲಿ ಕಡಿಮೆ ಅಂಕ ಕೊಡಿಸುವ ಬೆದರಿಕೆ
- ಒತ್ತಡಕ್ಕೆ ಒಳಪಟ್ಟು ತಮ್ಮ ಕೋಣೆಗೆ ಬರುವಂತೆ ಪ್ರೇರಣೆ
- ಸಮ್ಮತಿಯಿಲ್ಲದ ಲೈಂಗಿಕ ಸಂಪರ್ಕ
- ವಾಟ್ಸಾಪ್ ಮೂಲಕ ಅಶ್ಲೀಲ ಸಂದೇಶ ಕಳಿಸುವುದು
- ವಿದೇಶ ಪ್ರವಾಸದ ಆಮಿಷ ತೋರಿಸುವುದು
ಇವು ಸ್ವಾಮೀಜಿಯ ‘ಕಾಮಲೀಲೆಗಳ’ ಭಾಗವಾಗಿದ್ದವು ಎನ್ನಲಾಗಿದೆ.
FIR ದಾಖಲು, ಲುಕ್ ಔಟ್ ನೋಟಿಸ್ ಜಾರಿ!
ನೈಋತ್ಯ ದೆಹಲಿಯ ಎಸಿಪಿ ಐಶ್ವರ್ಯಾ ಸಿಂಗ್ ಪ್ರಕಾರ, ಸೂಕ್ತ ಸೆಕ್ಷನ್‌ಗಳಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಈಗಾಗಲೇ ಪಟಿಯಾಲಾ ಹೌಸ್ ಕೋರ್ಟ್ನಲ್ಲಿಯೂ ಸ್ವಾಮೀಜಿಯ ವಿರುದ್ಧ ದೂರು ದಾಖಲಾಗಿದೆ. ಆರೋಪ ತಿಳಿದ ತಕ್ಷಣವೇ ಶೃಂಗೇರಿ ಮಠದ ಆಡಳಿತ ಮಂಡಳಿ ಸ್ವಾಮೀಜಿಯನ್ನು ವಜಾ ಮಾಡಿ ಸ್ಪಷ್ಟ ಸಂದೇಶ ನೀಡಿದೆ.
ಪರಾರಿ ಸ್ವಾಮೀಜಿ – ನಕಲಿ ನಂಬರ್ ಪ್ಲೇಟ್ವಿರುವ ವೋಲ್ವೋ ವಶಕ್ಕೆ
ತನಿಖೆ ಆರಂಭವಾದ ಬಳಿಕ ಸ್ವಾಮೀಜಿ ಪರಾರಿ ಆಗಿದ್ದು, ದೆಹಲಿಯ ಶಾರದಾ ಇನ್ಸ್ಟಿಟ್ಯೂಟ್‌ನ ನೆಲಮಾಳಿಗೆಯಲ್ಲಿ ನಕಲಿ ನಂಬರ್ ಪ್ಲೇಟ್ ಹೊಂದಿರುವ ವೋಲ್ವೋ ಕಾರು ಪತ್ತೆಯಾಗಿದೆ. ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ.
For More Updates Join our WhatsApp Group :




