ಹನಿಟ್ರ್ಯಾಪ್ : ಪಾಕಿಸ್ತಾನಿ ಏಜೆಂಟ್‌ಗೆ INS ಕದಂಬ ನೌಕಾನೆಲೆ ಮಾಹಿತಿ ಸೋರಿಕೆ

ಕಾರವಾರ: ಶತ್ರು ರಾಷ್ಟ್ರಗಳಿಗೆ ಐಎನ್‌ಎಸ್ ಕದಂಬ ನೌಕಾ ನೆಲೆಯ ಚಿತ್ರಗಳು ಮತ್ತು ಮಹತ್ವದ ಮಾಹಿತಿಗಳನ್ನು ರವಾನಿಸಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದ ಮೂವರು ಪಾಕಿಸ್ತಾನದ ಮಹಿಳಾ ಏಜೆಂಟ್ ನಿಂದ ಹನಿಟ್ರ್ಯಾಪ್ ಗೆ ಒಳಗಾದ ಮಾಹಿತಿ ಸಿಕ್ಕಿದೆ.

ತನ್ನನ್ನು ನೌಕಾ ಅಧಿಕಾರಿ ಎಂದು ಪರಿಚಯಿಸಿಕೊಂಡ ಪಾಕಿಸ್ತಾನಿ ಏಜೆಂಟ್, ಮೂವರಿಂದ ನೌಕಾ ನೆಲೆಯ ಪ್ರಮುಖ ಮಾಹಿತಿ ಮತ್ತು ಚಿತ್ರಗಳನ್ನು ಪಡೆದಿದ್ದಳು ಎಂದು ತನಿಖೆಯಿಂದ ಬಹಿರಂಗಗೊಂಡಿದೆ.

ಕಳೆದ ವರ್ಷ ಫೇಸ್‌ಬುಕ್‌ನಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿ ಮೂವರಿಗೂ ಈಕೆ ಹತ್ತಿರವಾಗಿದ್ದಳು. ಆರೋಪಿಗಳಾದ ಮುದ್ಗಾದ ವೇಥನ್ ತಾಂಡೇಲ್, ಥೋಡೂರಿನ ಸುನೀಲ್ ಮತ್ತು ಹಳವಳ್ಳಿಯ ಅಕ್ಷಯ್ ನಾಯ್ಕ್ ಆರೋಪಿಗಳಾಗಿದ್ದಾರೆ.ಸುನಿಲ್ ಮೂರು ವರ್ಷಗಳ ಹಿಂದೆ ನೌಕಾನೆಲೆಯಲ್ಲಿ ಕೆಲಸ ಬಿಟ್ಟು ಗೋವಾದ ರೆಸ್ಟೋರೆಂಟ್‌ಗೆ ಸೇರಿಕೊಂಡಿದ್ದ. ನೌಕಾನೆಲೆಯಲ್ಲಿ ಕೆಲಸ ಮಾಡುವ ತನ್ನ ಸ್ನೇಹಿತರು ಮತ್ತು ಸಂಬಂಧಿಕರಿಂದ ವೆಥನ್ ಮಾಹಿತಿ ಪಡೆಯುತ್ತಿದ್ದ.

ಪಾಕಿಸ್ತಾನಿ ಏಜೆಂಟ್ ಯುದ್ಧನೌಕೆಗಳ ಆಗಮನ, ಅವುಗಳ ನಿರ್ಗಮನ ಮತ್ತು ಇತರ ಭದ್ರತಾ ವಿವರಗಳ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಳು. ಪ್ರತಿ ತಿಂಗಳು ಮೂವರಿಗೂ ತಲಾ 5,000 ರೂಪಾಯಿಗಳಂತೆ ವೇಥನ್ ತಾಂಡೇಲ್ ಮತ್ತು ಅಕ್ಷಯ್ ನಾಯ್ಕ್ ನಿಂದ ಎಂಟು ತಿಂಗಳ ಕಾಲ ಹಣ ನೀಡಿದ್ದಳು. ಈಕೆಯಿಂದ ನಾಲ್ಕು ತಿಂಗಳ ಕಾಲ ಹಣ ಪಡೆದ ಸುನೀಲ್ ನಂತರ ಫೇಸ್ ಬುಕ್ ನಲ್ಲಿ ಆಕೆಯನ್ನು ಬ್ಲಾಕ್ ಮಾಡಿದ್ದ.

Leave a Reply

Your email address will not be published. Required fields are marked *