ಡ್ರ್ಯಾಗನ್ ಫ್ರೂಟ್ ಸೇವಿಸುವುದರಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭವಿದೆಯಾ…?

ಡ್ರ್ಯಾಗನ್ ಫ್ರೂಟ್ ಹೆಸರು ಕೇಳೋಕೆ ವಿಚಿತ್ರವಾಗಿದೆ. ಭಾರತದ ದೇಸಿ ಹಣ್ಣು ಇದಲ್ಲ ಆದ್ರೆ ಮಾರ್ಕೆಟ್‌ನಲ್ಲಿ ಇದು ಎಲ್ಲರ ಕಣ್ಣು ಕುಕ್ಕುವ ಹಣ್ಣು. ಇದನ್ನ ನೋಡಿದ ತಕ್ಷಣ ಖರೀದಿಸಲು ಮನಸಾಗುತ್ತೆ. ಹಣ್ಣು ಕೊಂಚ ದುಬಾರಿ. ಅನೇಕರು ಕ್ಯೂರಿಯಾಸಿಟಿಗಾದರೂ ಒಮ್ಮೆ ಇದನ್ನು ಖರೀದಿಸುತ್ತಾರೆ.

ಆದ್ರೆ ಇದರ ಸೇವನೆಯಿಂದ ಅನೇಕ ಆರೋಗ್ಯಕರ ಉಪಯೋಗಗಳು ಇದೆ. ಕೆಲವು ಮುಖ್ಯವಾದ ಉಪಯೋಗಗಳ ಬಗ್ಗೆ ತಿಳಿಯೋಣ ನಂತರ ಟೇಸ್ಟಿ ರೆಸಿಪಿ ಬಗ್ಗೆ ತಿಳಿಸಿ ಕೊಡ್ತೀವಿ

1. ಕ್ಯಾನ್ಸರ್ ನಿಯಂತ್ರಕ ಡ್ರ್ಯಾಗನ್ ಹಣ್ಣಿನಲ್ಲಿ ಪಿಗ್ಮೆಂಟೆಡ್ ಕೆರೊಟಿನಾಯ್ಡ್ಗಳು ಮತ್ತು ವಿಟಮಿನ್ ಸಿ ಇರುವುದರಿಂದ ಇದು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಸಂಶೋಧನೆಗಳ ಪ್ರಕಾರ ಡ್ರ್ಯಾಗನ್ ಫ್ರೂಟ್‌ನಲ್ಲಿರುವ ಬೆಟಾಸಿಯಾನಿನ್ಸ್ ಅಂಶ ಸ್ತನ ಕ್ಯಾನ್ಸರ್‌ನ ಕೋಶಗಳನ್ನು ಹರಡದಂತೆ ನಿಯಂತ್ರಿಸುತ್ತದೆ. ಜೊತೆಗೆ ಆ?ಯಂಟಿ ಆಕ್ಸಿಡೆಂಟ್‌ಗಳು ಸೆಲ್ಯೂಲಾರ್ ಹಾನಿಕಾರಕಗಳನ್ನು ಸರಿಪಡಿಸುತ್ತದೆ.

2. ಗರ್ಭಿಣಿಯರ ಆರೋಗ್ಯಕ್ಕೆ ಉತ್ತಮ ಡ್ರ್ಯಾಗನ್ ಹಣ್ಣಿನಲ್ಲಿ ಐರನ್ ಅಂಶ ಅಧಿಕವಾಗಿರುವುದರಿಂದ ಗರ್ಭಿಣಿಯರಿಗೆ ಅನಿಮಿಯಾ ಸಮಸ್ಯೆ ಉಂಟಾಗುವುದನ್ನು ತಡೆಗಟ್ಟುತ್ತದೆ. ಹಾಗೂ ಇದರಲ್ಲಿ ಮಿನರಲ್‌ಗಳಾದ ಪೊಟ್ಯಾಷಿಯಂ, ಕ್ಯಾಲ್ಸಿಯಂ, ಮತ್ತು ಮ್ಯಾಗ್ನಿಷಿಯಂ ಸಮೃದ್ಧವಾಗಿದೆ. ಈ ಎಲ್ಲಾ ಪೋಷಕಾಂಶಗಳು ರಕ್ತ ಪರಿಚಲನೆ, ಮೆದುಳಿನ ಆರೋಗ್ಯ, ಮೂಳೆ ರಚನೆಯನ್ನು ಉತ್ತಮವಾಗಿಸುತ್ತದೆ. ಡೆಂಗ್ಯೂ ಸೊಳ್ಳೆ ಕಚ್ಚಿ ಎಷ್ಟು ದಿನದ ನಂತರ ಜ್ವರ ಬರುತ್ತದೆ?

3. ತೂಕ ನಿಯಂತ್ರಿಸುತ್ತದೆ : ಇಲಿಗಳ ಮೇಲೆ ಅಧ್ಯಯನ ನಡೆಸಲಾಗಿದ್ದು, ಕೆಂಪು ಡ್ರ್ಯಾಗನ್ ಹಣ್ಣಿನಲ್ಲಿರುವ ಬೆಟಾಸಯಾನಿನ್‌ಗಳು ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಕರುಳಿನಲ್ಲಿ ಪ್ರಯೋಜನಕಾರಿಯಾಗಿರುವ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ನಿಯಂತ್ರಿಸುವ ಮೂಲಕ ಬೊಜ್ಜು ತಡೆಯುತ್ತದೆ ಎಂದು ಸಾಬೀತುಪಡಿಸಲಾಗಿದೆ. ಡ್ರ್ಯಾಗನ್ ಫ್ರೂಟ್‌ನಲ್ಲಿರುವ ಹೆಚ್ಚಿನ ಫೈಬರ್ ಮತ್ತು ನೀರಿನ ಅಂಶವು ನಿಮ್ಮನ್ನು ದೀರ್ಘಕಾಲದವರೆಗೆ ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ.

ಡ್ರ್ಯಾಗನ್ ಹಣ್ಣು ಆರೋಗ್ಯಕರ ಹಣ್ಣು. ಇದರಿಂದ ಅನೇಕ ಲಾಭಗಳಿದೆ. ಡ್ರ್ಯಾಗನ್ ಹಣ್ಣು ಇತರ ಹಣ್ಣುಗಳಂತಲ್ಲ ತಿನ್ನಲು ಅಷ್ಟೋದು ಟೇಸ್ಟಿ ಅನ್ನಿಸೋದಿಲ್ಲ. ಹಾಗಂತ ಸುಮ್ನೆ ಕೂರೋಕಾಗುತ್ತಾ? ಖಂಡಿತ ಇಲ್ಲ. ಡ್ರ್ಯಾಗನ್ ಫ್ರೂಟ್‌ನ ಟೇಸ್ಟಿಯಾಗಿ ತಿನ್ನಬೇಕಂದ್ರೆ ಈ ವಿಧಾನಗಳನ್ನ ಟ್ಟ್ರೈ ಮಾಡಿ.

1. ಜೇನು ತುಪ್ಪದ ಜೊತೆಗೆ ಸೂಪರ್ ಡ್ರ್ಯಾಗನ್ ಹಣ್ಣು ಸಾಮಾನ್ಯವಾಗಿ ನೋಡೋದಕ್ಕೆ ಆಕರ್ಷಿತವಾಗಿದ್ದರೂ ಕೂಡ ತಿನ್ನಲು ಕೊಂಚ ಸಪ್ಪೆ. ಆಗ ನಾವು ಡ್ರ್ಯಾಗನ್ ಹಣ್ಣಿನ ಸಿಪ್ಪೆ ತೆಗೆದು ಒಳಗಿನ ತಿರುಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಅದಕ್ಕೆ ಜೇನು ತುಪ್ಪ ಸೇರಿಸಿ ತಿಂದರೆ ತುಂಬಾನೇ ರುಚಿಕರವಾಗಿರುತ್ತದೆ.

2. ಫ್ರೂಟ್ ಸಲಾಡ್ ಮತ್ತು ಮ್ಯೂಸ್ಲಿ ತಯಾರಿಸಿ ಹಣ್ಣಿನ ಸಲಾಡ್ ಅಥವಾ ಮ್ಯೂಸ್ಲಿ ಜೊತೆಗೆ ಕೂಡ ಡ್ರ್ಯಾಗನ್ ಹಣ್ಣನ್ನು ಸೇರಿಸಬಹುದು. ಮೊದಲು ಒಂದು ಬೌಲ್‌ನಲ್ಲಿ ಸಣ್ಣದಾಗಿ ಕತ್ತರಿಸಿದ ಡ್ರ್ಯಾಗನ್ ಹಣ್ಣು ಹಾಕಿ. ನಂತರ ಅದಕ್ಕೆ ಎಲ್ಲಾ ತರಹದ ಹಣ್ಣುಗಳು, ಡ್ರೆöÊ, ಮ್ಯೂಸ್ಲಿ, ಜೇನು ತುಪ್ಪ, ಹಾಲು ಸೇರಿಸಿ ಸೇವಿಸಬಹುದು.

3. ಡ್ರ್ಯಾಗನ್ ಹಣ್ಣು ಸ್ಮೂಥಿ ಅನೇಕ ಮಂದಿ ಹಣ್ಣುಗಳನ್ನು ಇಷ್ಟ ಪಡದಿದ್ದರೂ ಅದೇ ಹಣ್ಣಿನ ಸ್ಮೂಥಿ ಮಾಡಿ ಕೊಟ್ಟರೆ ಇಷ್ಟ ಪಟ್ಟು ತಿನ್ನುತ್ತಾರೆ. ಡ್ರ್ಯಾಗನ್ ಹಣ್ಣಿಗೆ ಮೊಸರು ಅಥವಾ ಯೋಗರ್ಟ್, ಸಕ್ಕರೆ(oಠಿಣioಟಿಚಿಟ), ಐಸ್‌ಕ್ಯೂಬ್ ಸೇರಿಸಿ ಸ್ಮೂಥಿ ತಯಾರಿಸಿ ಕುಡಿಯಬಹುದು.

4. ಡ್ರ್ಯಾಗನ್ ಹಣ್ಣಿನ ಕಬಾಬ್ ಡ್ರ್ಯಾಗನ್ ಹಣ್ಣು ಈ ಹೆಸರು ಕೇಳಲು ವಿಚಿತ್ರವಾಗಿದೆಯಲ್ಲ. ಈ ರಿಸಿಪಿಯನ್ನು ಮನೆಯಲ್ಲಿ ಟ್ರೆöÊ ಮಾಡಿದ್ರೆ ಖಂಡಿತ ಇಷ್ಟ ಪಡ್ತೀರ. ಮೊದಲಿಗೆ ಡ್ರ್ಯಾಗನ್ ಹಣ್ಣನ್ನು ಕ್ಯೂಬ್ ಆಕಾರದಲ್ಲಿ ತುಂಡು ಮಾಡಿಕೊಳ್ಳಿ. ನಂತರ ಒಂದು ಪ್ಯಾನ್ ಎಣ್ಣೆ ಹಚ್ಚಿ ಡ್ರ್ಯಾಗನ್ ಹಣ್ಣನ್ನು ಗ್ರಿಲ್ ಮಾಡುವ ವಿದಾನದಲ್ಲಿ ಸುಟ್ಟುಕೊಳ್ಳಿ. ಆಮೇಲೆ ರುಚಿಗೆ ತಕ್ಕಷ್ಟು ಉಪುö್ಪ ಹಾಗೂ ಖಾರದ ಪುಡಿ ಚಿಮುಕಿಸಿ ತಿನ್ನಿ.

5. ಡ್ರ್ಯಾಗನ್ ಹಣ್ಣಿನ ಜ್ಯೂಸ್ ಡ್ರ್ಯಾಗನ್ ಹಣ್ಣು ಸಪ್ಪೆ ಅಂತ ಹೇಳುವವರು ಡ್ರ್ಯಾಗನ್ ಜೊತೆಗೆ ಇತರ ಹಣ್ಣುಗಳನ್ನು ಸೇರಿಸಿ ಜ್ಯೂಸ್ ತಯಾರಿಸಿ ನಂತರ ಅದಕ್ಕೆ ಬೆಲ್ಲ ಅಥವಾ ಜೇನುತುಪ್ಪ ಸೇರಿಸಿ ಕೆಲಕಾಲ ಫ್ರೀಜರ್ನಲ್ಲಿ ಇಟ್ಟು ನಂತರ ಕುಡಿಯಿರಿ. ಹೀಗೆ ಅನೇಕ ವಿಧದಲ್ಲಿ ಬಾಯಿಗೆ ರುಚಿಸುವ ಹಾಗೆ ಡ್ರ್ಯಾಗನ್ ಹಣ್ಣುನ್ನು ತಿನ್ನಬಹುದುದಾಗಿದೆ.

Leave a Reply

Your email address will not be published. Required fields are marked *