ಬೆಂಗಳೂರು: ಅಕ್ರಮವಾಗಿ ರೈತರ ಕೃಷಿ ಭೂಮಿ ವಶಪಡಿಸಿಕೊಳ್ಳುತ್ತಿರುವ ನೈಸ್ ಕಂಪನಿ ದೌರ್ಜನ್ಯ, ಭ್ರಷ್ಟಾಚಾರ ವಿರೋಧಿಸಿ ಹಾಗೂ ರೈತರ ಭೂಮಿಯನ್ನು ಉಳಿಸಲು ಆಗ್ರಹಿಸಿ ನೈಸ್ ಭೂ ಸಂತ್ರಸ್ಥ ರೈತರ ಬೃಹತ್ ಸಮಾವೇಶ.
ಬಿ.ಎಂ.ಐ.ಸಿ. ಯೋಜನೆಯ ನೈಸ್ ಕಂಪನಿ ಪಾಲುದಾರಿಕೆಯನ್ನು ಕದ್ದುಗೊಳಿಸಲು ಆಗ್ರಹಿಸಿ, ನೈಸ್ ಕಂಪನಿಯ ಭೂ ಸ್ವಾಧೀನ ಹಾಗೂ ರಸ್ತೆ ನಿರ್ಮಾಣದ ಹಗರಣವನ್ನು ತನಿಖೆಗೆ ಒಳಪಡಿಸಿ ಶಿಕ್ಷಿಸಲು ಆಗ್ರಹಿಸಿ, ರೈತರ ಒಪ್ಪಿಗೆ ಇಲ್ಲದೆ ರೈತರ ಗಮನಕ್ಕೆ ಬಾರದಂತೆ ಭೂ ಸ್ವಾಧೀನ ಮಾಡಿರುವ ಎಲ್ಲ ಪ್ರಕರಣಗಳನ್ನು ರದ್ದು ಪಡಿಸಲು ಆಗ್ರಹಿಸಿ, ನೈಸ್ ಅಕ್ರಮ ಕುರಿತು ಸದನ ಸಮಿತಿ ಮತ್ತು ಸಂಪುಟ ಉಪ ಸಮಿತಿಗಳ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಆಗ್ರಹಿಸಿ, ಕೆ.ಐ.ಎ.ಡಿ.ಬಿ. ಹಾಗೂ ನೈಸ್ ಕಂಪನಿಯ ಅಕ್ರಮ ಮೈತ್ರಿಯಿಂದ ಹಗಲು ದರೋಡೆ ಮಾಡಿರುವ ಎಲ್ಲಾ ಹೆಚ್ಚುವರಿ ಭೂಮಿಯನ್ನು ವಾಪಸು ಪಡೆದುಕೊಳ್ಳಲು ಆಗ್ರಹಿಸಿ, ಭೂ ಸ್ವಾಧೀನ ಪ್ರಕಟಣೆ ಮತ್ತು ಕೋರ್ಟ್ ತೀರ್ಮಾನಗಳ ಹೆಸರಿನಲ್ಲಿ ರೈತರ ಮೇಲೆ ನೈಸ್ ಕಂಪನಿಯ ದಬ್ಬಾಳಿಕೆ ದೌರ್ಜನ್ಯ ನಿಲ್ಲಿಸಲು ಆಗ್ರಹಿಸಿ, ಟೋಲ್ ಸಂಗ್ರಹಿಸುತ್ತಿರುವ ರಸ್ತೆಗೆ ಭೂಮಿ ಕಳೆದುಕೊಂಡ ರೈತರಿಗೆ ಒಪ್ಪಂದದಂತೆ ಹೆಚ್ಚಿನ ಪರಿಹಾರ ಹಾಗೂ ನಿವೇಶನ ಒದಗಿಸಲು ಆಗ್ರಹಿಸಿ, ಬಿ.ಎಂ.ಐ.ಸಿ. ಯೋಜನೆಯ ನೆಪದಲ್ಲಿ ನೈಸ್ ಸಂಸ್ಥೆ ನಡೆಸುತ್ತಿರುವ ರಿಯಲ್ ಎಸ್ಟೇಟ್ ವ್ಯವಹಾರವನ್ನು ನಿರ್ಬಂಧಿಸಲು ಹಾಗೂ ಶಿಕ್ಷಿಸಲು ಆಗ್ರಹಿಸಿ, ಹಲವಾರು ವರ್ಷಗಳಿಂದ ನಿವೇಶನಕ್ಕಾಗಿ ಅರ್ಜಿ ಹಾಕಿಕೊಂಡು ಹೋರಾಟ ನಡೆಸುತ್ತಿರುವ ಬಡವರಿಗೆ ನಿವೇಶನ ನೀಡಬೇಕು ಮತ್ತು ಮನೆ ಕಟ್ಟಿಕೊಡಬೇಕೆಂದು ಒತ್ತಾಯಿಸಿ, ಸರ್ಕಾರಿ ಭೂಮಿಯನ್ನು ಕಬಳಿಸುತ್ತಿರುವ ಭೂ ಗಳ್ಳರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ, ಬೆಂಗಳೂರು ನಗರ ಎಲ್ಲಾ ವ್ಯಾಪ್ತಿಯ ಎಲ್ಲಾ ಅರ್ಹ ಬಗರ್ ಹುಕುಂ ಸಾಗುವಳಿದಾರರಿಗೆ 18 ಕಿಲೋಮೀಟರ್ ಪರಿಮಿತಿ ನಿರ್ಬಂಧ ರದ್ದುಪಡಿಸಿ ಭೂಮಿ ಹಕ್ಕು ಪತ್ರ ನೀಡಲು ಆಗ್ರಹಿಸಿ, ನೈಸ್ ಭೂ ಸಂತಸ್ತರ ರೈತರ ಬೃಹತ್ ಸಮಾವೇಶವನ್ನು ಸೆಪ್ಟೆಂಬರ್ 22, 2024 ರಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಹಾಗೂ ನೈಸ್ ಸಂತಸ್ಥ ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮಾವೇಶದ ಆಗ್ರಹಗಳನ್ನು ಸರ್ಕಾರಗಳು ಕಡೆಗಣಿಸಿದರೆ, ಇದೇ ರೀತಿ ಭೂಮಿ ಪ್ರಶ್ನೆ ಮೇಲೆ ಹೋರಾಡುತ್ತಿರುವ ರೈತ ಸಮೂಹದ ಜೊತೆ ಸೇರಿ ಸಹಸ್ರಾರು ರೈತರ ವಿಧಾನ ಸೌಧ ನಡೆಸಲಾಗುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಹಾಗೂ ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ಎಚ್ಚರಿಕೆ ನೀಡುತ್ತದೆ.ಈ ಮಹತ್ವದ ಸಮಾವೇಶದಲ್ಲಿ ನೈಸ್ ಭೂ ಸ್ವಾಧೀನದಿಂದ ನೊಂದಿರುವ ಎಲ್ಲಾ ರೈತರು ತಮ್ಮ ಗ್ರಾಮಗಳ ಎಲ್ಲಾ ರೈತರನ್ನು ಒಗ್ಗೂಡಿಸಿಕೊಂಡು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ನೈಸ್ ಭೂ ಸಂತ್ರಸ್ತ ರೈತರ ಹೋರಾಟ ಸಮಿತಿಗಳು ಈ ಮೂಲಕ ವಿನಂತಿ ಮಾಡಿಕೊಳ್ಳುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ಅಧ್ಯಕ್ಷ ಎನ್. ವೆಂಕಟಾಚಲಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ,ಸಿದ್ದರಾಜು , ಚನ್ನೇಗೌಡರು , ಚಂದ್ರಶೇಖರ, ಶ್ರೀನಿವಾಸ ಉಪಸ್ಥಿತಿರು.