ನೂತನ ಹೆಲಿಪೋರ್ಟ್ ನಿರ್ಮಿಸಿದ ಚೀನಾ : ಗಡಿ ಭದ್ರತೆಯ ಕುರಿತು ಹೆಚ್ಚಿದ ಕಳವಳ

ನೂತನ ಹೆಲಿಪೋರ್ಟ್ ನಿರ್ಮಿಸಿದ ಚೀನಾ : ಗಡಿ ಭದ್ರತೆಯ ಕುರಿತು ಹೆಚ್ಚಿದ ಕಳವಳ

ನವದೆಹಲಿ : ಲೈನ್ ಆಫ್ ಕಂಟ್ರೋಲ್ ಬಳಿ ನೂತನ ಹೆಲಿಪೋರ್ಟ್ ಅನ್ನು ಚೀನಾ ನಿರ್ಮಿಸಿದೆ ಇದರಿಂದ ಗಡಿ ಭದ್ರತೆಯ ಕುರಿತು ಕಳವಳ ಹೆಚ್ಚಾಗಿದೆ. ಲೈನ್ ಆಫ್ ಕಂಟ್ರೋಲ್ ಬಳಿಯಿಂದ ಸುಮಾರು 20 km ದೂರದಲ್ಲಿ ಚೀನಾ ನೂತನ ಹೆಲಿಪೋರ್ಟ್ ನಿರ್ಮಿಸುತ್ತಿದೆ. ಈ ನಿರ್ಮಾಣದಿಂದ ಕ್ಷೀಕ್ರವಾಗಿ ಸೇನಾ ಸಾಮಗ್ರಿಗಳನ್ನು ಭಾರತ ಚೀನಾ ಗಡಿನಾಡಿನ ದೂರ ಮತ್ತು ಹಿಂದುಳಿದ ಪ್ರದೇಶದಲ್ಲಿ ನಿಯೋಜಿಸಲು ಚೀನಾಗೆ ಸಹಕಾರಿಯಾಗಲಿದೆ ಇದರಿಂದ ಈ ಪ್ರಾಂತ್ಯದಲ್ಲಿ ಭಾರತಕ್ಕೆ ಭದ್ರತೆ ಕುರಿತು ಕಳವಳವನ್ನು ಉಂಟು ಮಾಡಲಿದೆ ಎಂದು ಮಾಹಿತಿ ಲಭ್ಯವಾಗಿದೆ. ಈ ಹೆಲಿಪೋರ್ಟ್ ಅನ್ನು ಟಿಬೆಟ್ ನ ಸ್ವಯತ ಪ್ರಾಂತ್ಯದಲ್ಲಿರುವ ನೈಯಿಂಗ್ಚಿ ಆಡಳಿತದ ಗೋಂಗ್ರಿ ಗಬು ಕು ನದಿಯ ತಟದಲ್ಲಿ ನಿರ್ಮಿಸಲಾಗುತ್ತಿದೆ ಹಾಗೂ ಇದು ವ್ಯಾಜ್ಯರಹಿತ ಚೀನಾ ಪ್ರಾಂತ್ಯದ ಒಳಗೆ ಇದೆ ಎಂದು ಹೇಳಲಾಗಿದೆ. ವರದಿ ಪ್ರಕಾರ ಡಿಸೆಂಬರ್ 1 2023 ರಂದು ಈ ಪ್ರಾಂತ್ಯದಲ್ಲಿ ಯಾವುದೇ ನಿರ್ಮಾಣ ಕಂಡುಬಂದಿರಲಿಲ್ಲ ಆದರೆ ಸಪ್ಟೆಂಬರ್ 16 ,2024ರ ವೇಳೆಗೆ ನೆಲವನ್ನು ಸಮತಟ್ಟು ಮಾಡುವ ಕೆಲಸಕ್ಕೆ ಚಾಲನೆ ನೀಡಿರುವುದು ದೃಢಪಟ್ಟಿದೆ.

Leave a Reply

Your email address will not be published. Required fields are marked *