ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು- ಪ್ರಲ್ಹಾದ್ ಜೋಶಿ

ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು- ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ: ತಿರುಪತಿ ಲಡ್ಡುನಲ್ಲಿ ಮಾಂಸ ಇತ್ಯಾದಿ ವಸ್ತುಗಳು ಪತ್ತೆಯಾಗಿರುವುದನ್ನು ಲ್ಯಾಬ್ ವರದಿ ವಿವರಿಸಿದ್ದು  ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೂಡ ಹೇಳಿದ್ದರಲ್ಲಿ ಸತ್ಯ ಇದೆ  ಹಾಗಾಗಿ ಇದರಲ್ಲಿ ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂದಿನಿ ತುಪ್ಪ ಬಂದ್ ಮಾಡಿಸಿದ ನಂತರ ಈತರಹ ವಸ್ತುಗಳನ್ನು ಖರೀದಿ ಮಾಡಿ ಲಡ್ಡು ತಯಾರಿಸಲಾಗಿದೆ. ಹಿಂದಿನ ಆಂಧ್ರಪ್ರದೇಶ ಸರ್ಕಾರ ಹಾಗೂ ಕಾಂಗ್ರೆಸ್ನವರ ಹಿಂದು ವಿರೋದಿ ನೀತಿಯಿಂದ ಈರೀತಿ ಆಗುತ್ತಿದೆ. ಈ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದವರು ಈ ರೀತಿ ಮಾಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದನ್ನು ನಾವು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ. ಪ್ರಸಾದ ವಿತರಣೆಯಲ್ಲಿ ಆಯಾ ಸರ್ಕಾರಗಳು ಮೂಗು ತೂರಿಸದೇ ದೇವಸ್ಥಾನ ಆಡಳಿತ ಮಂಡಳಿಯವರು ನಿರ್ಧಾರ ಮಾಡಬೇಕು ಮತ್ತು ಪರಿಶೀಲಿಸಬೇಕು. ದೇಶದ ನಂಬಿಕೆ, ಸಂಸ್ಕೃತಿ, ಶ್ರದ್ಧೆ ಪ್ರಶ್ನೆ ಹಾಳು ಮಾಡಬಾರದು ಎಂದರು.

 ಮೋಹಬತ್ಕಾ ದುಖಾನ್ ಎನ್ನುವ ಕಾಂಗ್ರೆಸ್ನ ರಾಹುಲ್ಗಾಂಧಿ, ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡಲು ಹಚ್ಚಿದ್ದಾರೆ. ಸಂವಿಧಾನ ವಿರೋಧಿ ನಡುವಳಿಕೆ ಮುಂದುವರಿಸಿದ್ದಾರೆ. ಸಿಖ್ ಸಹೋದರರನ್ನು ಅಪಮಾನ ಮಾಡಿದ್ದಾರೆ. ವಿದೇಶದ ನೆಲದಲ್ಲಿ ಬಹುಸಂಸ್ಕೃತಿಯ ನಾಡಾದ ನಮ್ಮ ದೇಶದ ಮಾನವನ್ನು ಹರಾಜು ಮಾಡಿದ್ದಾರೆ ಎಂದು ತಿವಿದರು.

ಗಣೇಶನ ಮೆರವಣಿಗೆ ಮಾಡಿದವರ ಮೇಲೆ ಎಫ್ಐಆರ್ ಹಾಕಲಾಗುತ್ತಿದೆ. ನೋಡಲು ಹೋದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪ್ರತಿಪಕ್ಷ ನಾಯಕ ಆರ್. ಅಶೋಕ ಅವರ ಮೇಲೂ ಎಫ್ಐಆರ್ ದಾಖಲಾಗಿದೆ. ಮಸೀದಿ ಬಂದರೆ ಗಣೇಶ ಹಾಡು ಬಂದ್ ಮಾಡಬೇಕಂತೆ, ಹಾಗಾದರೆ ಗಣೇಶ ಹೋದರೆ ಮುಸ್ಲಿಮರು ನಮಾಜ್ ಬಂದ್ ಮಾಡುತ್ತಾರೆಯೇ? ಎಂದು ಸಚಿವರು ಪ್ರಶ್ನೆ ಮಾಡಿದರು. ರಾಜ್ಯ ಸರ್ಕಾರ ತುಷ್ಟೀಕರಣ ಹಾಗೂ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.

ಮುನಿರತ್ನ ಮೇಲೆ ಆರೋಪಗಳಿವೆ. ಸರಿಯಾಗಿ ತನಿಖೆ ಮಾಡಬೇಕು. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗಲಿದೆ. ಆದರೆ, ಅದರು 2020ರ ಪ್ರಕರಣ ಈಗ ಮುನ್ನೆಲೆಗೆ ಬಂದಿದ್ದು ಏಕೆ?. ರಾಜ್ಯ ಸರ್ಕಾರದ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವುದಿಲ್ಲ ಎಂದರು. ಸ್ಮಶಾನ ಭೂಮಿ ಆಗಿದ್ದರೆ ಇಂದಿರಾ ಕ್ಯಾಂಟಿನ್ ಬೇರೆ ಕಡೆ ಮಾಡಬೇಕು. ಸೌಹಾರ್ದತೆಯುವಾಗಿ ಶಾಸಕರು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಬಗೆಹರಿಸಬೇಕು ಎಂದು ಸಲಹೆ ಇತ್ತ ಸಚಿವರು, ರಾಜ್ಯ ಸರ್ಕಾರ ದಿವಾಳಿಯಾಗಿದೆ. ಹಾಗಾಗಿ ಪಾಲಿಕೆ ಸಿಬ್ಬಂದಿಗೆ ಪಗಾರ ಕೊಡಲು ಆಗುತ್ತಿಲ್ಲ. ಡಿ ದರ್ಜೆ ಮತ್ತು ಬಡವರಿಗೆ ಸಂಬಳ ಕೊಡಲು ಹಿಂದೇಟು ಹಾಕುತ್ತಿದೆ ಎಂದು ದೂರಿದರು.

Leave a Reply

Your email address will not be published. Required fields are marked *