ಪ್ರತಿವರ್ಷ 40 ಸಾವಿರಕ್ಕೂ ಹೆಚ್ಚು ರಸ್ತೆ ಅಪಘಾತ : ಸುಮಾರು 10 ಸಾವಿರ ಜನ ಮರಣ

ಪ್ರತಿವರ್ಷ 40 ಸಾವಿರಕ್ಕೂ ಹೆಚ್ಚು ರಸ್ತೆ ಅಪಘಾತ : ಸುಮಾರು 10 ಸಾವಿರ ಜನ ಮರಣ

ಬೆಂಗಳೂರು : ಮುಖ್ಯಮಂತ್ರಿಗಳ ಆಪಾತ್ಕಾಲಯಾನ ಸೇವೆ ಅಡಿಯಲ್ಲಿ ನೂತನ 65 ಆಂಬ್ಯುಲೆನ್ಸ್ ಗಳನ್ನು ಲೋಕಾರ್ಪಣೆ ಮಾಡಲಾಗಿದೆ. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗ ಆಂಬ್ಯುಲೆನ್ಸ್ ಗಳ ಲೋಕಾರ್ಪಣೆಯನ್ನು ಸಿಎಂ ಸಿದ್ದರಾಮಯ್ಯ ನೆರವೇರಿಸಿದ್ದಾರೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಪ್ರತಿವರ್ಷ 40 ಸಾವಿರ ಹೆಚ್ಚು ರಸ್ತೆ ಅಪಘಾತ ಆಗ್ತಿವೆ. ಅಪಘಾತಾದಿಂದ 10 ಸಾವಿರ ಜನ ಮರಣ ಹೊಂದುತ್ತಿದ್ದಾರೆ. ದಾರಿಯಲ್ಲೆ ಅಸ್ಪತ್ರೆಗೆ ಹೋಗಬೇಕಾದ್ರೆ ಮರಣ ಹೊಂದುವ ಸಾದ್ಯತೆ ಇದೆ. ಆಕ್ಸಿಡೆಂಟ್ ಆಗಿ ದೂರದ ಊರಿನಿಂದ ಆಸ್ಪತ್ರೆಗೆ ಕರೆದುಕೊಂಡು ಬರ್ತಾರೆ. ಒಳ್ಳೆಯ ಚಿಕಿತ್ಸೆ ನೀಡುವ ಆಂಬ್ಯುಲೆನ್ಸ್ ಬೇಕು. ಗೋಲ್ಡನ್ ಅವರ್ ನಲ್ಲಿ ಚಿಕಿತ್ಸೆ ಕೊಡಬೇಕಾದ ಅಂಬ್ಯುಲೆನ್ಸ್ ಬೇಕು 108 ಅಂಬ್ಯುಲೆನ್ಸ್ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗಬೇಕಾದ್ರೆ ಸಮಸ್ಯೆ ಆಗುತ್ತೆ ಸಿಎಂ ಹೆಸರಲ್ಲೆ ಕಾರ್ಯಕ್ರಮ ಮಾಡ್ತಿದ್ದೇವೆ ಎಂದರು. ರಸ್ತೆ ಸುರಕ್ಷತಾ ಪ್ರಾಧಿಕಾರದ ನಿಧಿಯಿಂದ ಹಲವು ಇಲಾಖೆಗಳು ಅನುದಾನ ಬಳಸಿಕೊಳ್ಳಬಹುದು ಅಡ್ವಾನ್ಸ್ ಲೈಫ್ ಸಪೊರ್ಟ್ ಅಂಬ್ಯುಲೆನ್ಸ್ ಹಾಗೂ  ಬೇಸಿಕ್ ಲೈಫ್ ಸಪೊರ್ಟ್ ಅಂಬ್ಯುಲೆನ್ಸ್ ರೀತಿ ಎರಡು ಅಂಬ್ಯುಲೆನ್ಸ್ ವ್ಯವಸ್ಥೆ ಇದೆ. ಬ್ಲಾಕ್ ಸ್ಪಾಟ್ ಗುರುತಿಸಿ, ಸಿಬ್ಬಂದಿಗೆ ಟ್ರೈನಿಂಗ್ ಕೊಡಲಾಗುತ್ತೆ. ಮುಂದಿನ ಒಂದು ಅಥವಾ ಎರಡು ವರ್ಷದಲ್ಲಿ ಕರ್ನಾಟಕದಲ್ಲಿ ಇದನ್ನ ಅಳವಡಿಸಿಕೊಳ್ಳಲು ವ್ಯವಸ್ಥೆ ಮಾಡಲು ಸಿಎಂಗೆ ಮನವಿ ಮಾಡ್ತಿವಿ. ಚಿಕ್ಕ ವಯಸ್ಸಿನಲ್ಲಿ ಇರೋರೆ ಹೆಚ್ಚು ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಪ್ರತಿಯೊಬ್ಬರನ್ನ ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಹೇಳಿದರು.

Leave a Reply

Your email address will not be published. Required fields are marked *