ಧಾರವಾಡ:ಕೃಷಿ ವೇದಿಕೆಯಲ್ಲಿಯೇ ಕೃಷಿ ವಿವಿ ಕುಲಪತಿಗೆ ಸಚಿವರ ಕ್ಲಾಸ್ ತೆಗೆದುಕೊಂಡ ಘಟನೆ ಇಂದು ನಡೆಯಿತು.
ಧಾರವಾಡ ಕೃಷಿ ವಿವಿಯಲ್ಲಿ ನಡೆದಿರೋ ಮೇಳದಲ್ಲಿ ಕೃಷಿ ವಿವಿ ಕುಲಪತಿ ಪಿ.ಎಲ್. ಪಾಟೀಲಗೆ ಕ್ಲಾಸ್ ತೆಗೆದುಕೊಳ್ಳಲಾಯಿತು. ಭಾಷಣದಲ್ಲಿಯೇ ಕುಲಪತಿಗೆ ತರಾಟೆ ತೆಗೆದುಕೊಂಡ ಲಾಡ್ ಅವರುಕಳೆದ ವರ್ಷ ಹತ್ತು ಲಕ್ಷ ಜನ ಬಂದಿದ್ದರುಆದರೆ ಆ ಬಳಿಕ ಏನ ಆಗಿತ್ತು ಕಳೆದ ಐದು ವರ್ಷದ ಮೇಳದ ಪ್ರಗತಿ ಏನು ಕಳೆದ ವರ್ಷವೇ ನಾನು ನಿಮಗೆ ಹೇಳಿದ್ದೆಆ ಬಳಿಕ ನಮ್ಮನ್ನು ಸಂಪರ್ಕಿಸಲೇ ಇಲ್ಲ. ಇದು ಸರ್ಕಾರದ ಹಣದ ಮೇಳ ಅಲ್ಲದಿರಬಹುದುಸ್ವಯಂ ಆಗಿ ದೇಣಿಗೆ, ಹಣ ಸಂಗ್ರಹದ ಮೂಲಕ ಆಗುತ್ತಿದೆಸಂತೋಷ ಇದೆ ಆದರೆ ಮೇಳದ ಪ್ರಗತಿಯ ವರದಿ ಏನಿದೆ?ಎಲ್ಲರನ್ನೂ ಸೇರಿಸಿ ಸಭೆ ಮಾಡಿ ಅಂತಾ ಹೇಳಿದ್ವಿಸಭೆ ಮಾಡಿಲ್ಲ ಯಾಕೆ? ನೀವು ವೈಯಕ್ತಿಕವಾಗಿ ಮಾಡಿಕೊಂಡ್ರೆ ಹೇಗೆ?ಯಾಕೆ ನೀವು ಯಾರನ್ನು ಕರೆಯೊಲ್ಲನೀವೆನು ಇಲ್ಲಿ ಶಾಶ್ವತ ಅಲ್ಲ ವ್ಯವಸ್ಥೆ ಮಾತ್ರ ಇರೋದು ನೀವು ಸಾರ್ವಜನಿಕವಾಗಿ ಇರಬೇಕು ಯಾರೂ ಇಲ್ಲಿ ಶಾಶ್ವತ ಅಲ್ಲ ನೀವು ನಿವೃತ್ತಿ ಆಗ್ತಿರಿಅಧಿಕಾರ ಸಹ ನಮ್ಮಲ್ಲಿ ಬಹಳ ದಿನ ಇರೋದಿಲ್ಲಆದರೆ ನಿಮ್ಮಲ್ಲಿ ಕೃಷಿಗೆ ಸಂಬಂಧಿಸಿದ ಮಾಹಿತಿಯೇ ಇರೋದಿಲ್ಲನೀವು ಇರ್ತಿರೋ ಇಲ್ಲವೋ? ಮುಂದೆ ಯಾರು ಬರುತ್ತಾರೋ ಗೊತ್ತಿಲ್ಲ ಆದರೆ ನಾವು ಹೋದ ಮೇಲೆ ಜನ ನೆನೆಸುವ ಕೆಲಸ ಮಾಡಬೇಕೆಂದು ತರಾಟೆ ತೆಗೆದುಕೊಂಡರು.