ರೇಣುಕಾಸ್ವಾಮಿ ಕೊಲೆ‌ ಪ್ರಕರಣ: ತುಮಕೂರು ಜೈಲಿನಲ್ಲಿದ್ದ ಮೂವರು ಆರೋಪಿಗಳಿಗೆ ಜಾಮೀನು

ರೇಣುಕಾಸ್ವಾಮಿ ಕೊಲೆ ಪ್ರಕರಣ: ತುಮಕೂರು ಜೈಲಿನಲ್ಲಿದ್ದ ಮೂವರು ಆರೋಪಿಗಳಿಗೆ ಜಾಮೀನು

ತುಮಕೂರು :- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ‌ ಪ್ರಕರಣದ ತುಮಕೂರು ಕಾರಾಗೃಹದಲ್ಲಿದ್ದ ನಾಲ್ವರು ಆರೋಪಿಗಳ ಪೈಕಿ ಮೂವರು ಆರೋಪಿಗಳಿಗೆ  ಜಾಮೀನು ಸಿಕ್ಕಿದೆ.

ಕೊಲೆ ಪ್ರಕರಣದ ಎ-15ನೇ ಆರೋಪಿ ಕಾರ್ತಿಕ್, ಎ-16ನೇ ಆರೋಪಿ‌ ಕೇಶವಮೂರ್ತಿ, ಎ-17 ಆರೋಪಿ‌ ನಿಖಿಲ್ ನಾಯಕ್ ಗೆ ಜಾಮೀನು ಮಂಜೂರಾಗಿದೆ.

ಎ-16ನೇ ಆರೋಪಿ‌ ಕೇಶವಮೂರ್ತಿಗೆ ಹೈಕೋರ್ಟ್ ನಿಂದ ಜಾಮೀನು ಮಂಜೂರಾಗಿದ್ದು,‌ ಎ-15 ಮತ್ತು ಎ-17ನೇ ಆರೋಪಿಗಳಿಗೆ 57ನೇ ಸಿಸಿಹೆಚ್ ಕೋರ್ಟ್ ನಿಂದ ಜಾಮೀನು ಸಿಕ್ಕಿದೆ.

ಜಾಮೀನು ಸಿಕ್ಕರೂ ಬಿಡುಗಡೆಯಿಲ್ಲ:- ‌ನ್ಯಾಯಾಲಯಗಳಿಂದ ಜಾಮೀನು ಮಂಜೂರು ಆಗಿದ್ದರೂ ಆರೋಪಿಗಳಿಗೆ‌ ಜೈಲಿನಿಂದ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.  ತುಮಕೂರು ಜೈಲಾಧಿಕಾರಿಗೆ ಆದೇಶ ಪ್ರತಿ ಸಿಗದ ಹಿನ್ನೆಲೆಯಲ್ಲಿ ಬಿಡುಗಡೆಯಾಗಿಲ್ಲ. ನಾಳೆ ಆದೇಶ ಪ್ರತಿ ಸಿಗುವ ಸಾಧ್ಯತೆಯಿದ್ದು, ಜಾಮೀನು ಮಂಜೂರಾಗಿರುವ ಆರೋಪಿಗಳು ಬಿಡುಗಡೆಯಾಗುವ ಸಾಧ್ಯತೆಯಿದೆ.

ಬಾಯಿಬಿಟ್ಟಿದ್ದ ಆರೋಪಿಗಳು:-

 ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರ ಮುಂದೆ ಶರಣಾಗಿದ್ದ ಆರೋಪಿಗಳಾದ ಕಾರ್ತಿಕ್‌, ಕೇಶವ್ & ನಿಖಿಲ್ ನಾಯಕ್  ಈ ಮೂವರು ಕೊಲೆ ಬಗ್ಗೆ ಪೊಲೀಸರ ಮುಂದೆ ಸಂಪೂರ್ಣ ಮಾಹಿತಿಯನ್ನು ಬಾಯ್ಬಿಟ್ಟಿದ್ದರು. ಈ ಮೂವರು ನೀಡಿದ ಮಾಹಿತಿಯಿಂದಲೇ ಕೊಲೆ ಕೇಸ್‌ನಲ್ಲಿ ದರ್ಶನ್ ಅಂಡ್ ಗ್ಯಾಂಗ್ ಅರೆಸ್ಟ್ ಆಗಿತ್ತು.

ನಾಲ್ವರು ಆರೋಪಿಗಳು ತುಮಕೂರು ಕಾರಾಗೃಹಕ್ಕೆ ಶಿಪ್ಟ್ ಆಗಿದ್ದರು:- ರೇಣುಕಾಸ್ವಾಮಿ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಾದ ರವಿಶಂಕರ್, ನಿಖಿಲ್ ನಾಯಕ್, ಕೇಶವ್ ಹಾಗೂ ಕಾರ್ತಿಕ್‍ನನ್ನು  ಜೂನ್ ತಿಂಗಳಲ್ಲಿ‌ ಪರಪ್ಪನ ಅಗ್ರಹಾರ ಜೈಲಿನಿಂದ ತುಮಕೂರು ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. 24ನೇ ಎಸಿಎಂಎಂ ನ್ಯಾಯಾಲಯ ಆರೋಪಿಗಳನ್ನು ತುಮಕೂರು ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ಆದೇಶ ನೀಡಿದ ಹಿನ್ನೆಲೆ  ಬಿಗಿ ಪೊಲೀಸ್ ಭದ್ರತೆಯಲ್ಲಿ ತುಮಕೂರು ಹೊರವಲಯದ ರಂಗಾಪುರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಆರೋಪಿಗಳನ್ನ ಸ್ಥಳಾಂತರಿಸಿದ್ದರು.

Leave a Reply

Your email address will not be published. Required fields are marked *