ಹೆದ್ದಾರಿ ದರೋಡೆಕೋರರ ಬಂಧನ: ಸಾರ್ವಜನಿಕರಿಂದ ಶ್ಲಾಘನೆ

ಹೆದ್ದಾರಿ ದರೋಡೆಕೋರರ ಬಂಧನ: ಸಾರ್ವಜನಿಕರಿಂದ ಶ್ಲಾಘನೆ

ದಾಬಸ್ ಪೇಟೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಮೂವರು ಖತರ್ನಾಕ್ ಹೆದ್ದಾರಿ ಕಳ್ಳರನ್ನು ದಾಬಸ್‌ಪೇಟೆ ಪೊಲೀಸರು ಬಂಧಿಸಿದ್ದು, ಬಂಧಿತರಿOದ, ಎರಡು ಬೈಕ್ ಮತ್ತು ವಿವಿಧ ಕಂಪನಿಯ 13 ಮೊಬೈಲ್ ಪೋನ್‌ಗಳು ಹಾಗೂ 15 ಗ್ರಾಂ ತೂಕದ 3 ಚಿನ್ನದ ಉಂಗುರಗಳು ಮತ್ತು ಒಂದು ಬೆಳ್ಳಿ ಉಂಗುರ ವಶಪಡಿಸಿಕೊಂಡಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಪದೇ ಪದೇ ಹೆದ್ದಾರಿ ರಾಬರಿ ಮಾಡುತ್ತಿದ್ದ ಕಳ್ಳರ ತಂಡಗಳನ್ನು ಮೇಲಿಂದ ಮೇಲೆ ಭೇದಿಸಿ ಜೈಲಿಗೆ ಕಳುಹಿಸಿರುವುದು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಘಟನೆ ವಿವರ: ಕಳೆದ ಸೆ.4 ರಂದು ತುಮಕೂರು ಮೂಲದ ಪ್ರದೀಪ್ (36) ಎಂಬಾತ ಬುಲೆಟ್ ಬೈಕ್‌ನಲ್ಲಿ ನೆಲಮಂಗಲದಿAದ ತುಮಕೂರಿಗೆ ಹೋಗುತ್ತಿದ್ದಾಗ2 ಬೈಕ್‌ಗಳಲ್ಲಿ ಬಂದ ಖದೀಮರು ಬೈಕ್ ಅಡ್ಡಗಟ್ಟಿ ಡ್ರಾö್ಯಗನ್ ನಿಂದ ಬೆದರಿಸಿ ಗುಂಡೇನಹಳ್ಳಿ ಕಡೆ ಇರುವ ಸರ್ವೀಸ್ ರಸ್ತೆಗೆ ಕರೆದೊಯ್ದು ಆತನ ಬಳಿ ಇದ್ದ ೩ ಚಿನ್ನದ ಉಂಗುರ ಹಾಗೂ 2 ಮೊಬೈಲ್, ಒಂದು ಬೆಳ್ಳಿ ಉಂಗುರ ಕಿತ್ತುಕೊಂಡು ಪರಾರಿಯಾಗಿದ್ದರು. ಘಟನೆಗೆ ಸಂಬAಧಿಸಿದOತೆ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಇನ್ಸ್ ಪೆಕ್ಟರ್ ರಾಜು ತಮ್ಮ ನೇತೃತ್ವದಲ್ಲಿ ಪಿಎಸ್‌ಐಗಳಾದ ವಿಜಯಕುಮಾರಿ, ಸಿದ್ದಪ್ಪ ಹಾಗೂ ಸಿಬ್ಬಂದಿಗಳಾದ ರಂಗನಾಥ್, ಚಂದ್ರು ಬೀಳಗಿ, ಸುನೀಲ್ ಕುಮಾರ್, ರಾಜೇಶ್, ಗೌತಮ್ ಕಾಳಿ, ಸುಧಾಕರ್, ಗಂಗೇಶ್ ಒಳಗೊಂಡ ವಿಶೇಷ ತಂಡವೊAದನ್ನು ರಚಿಸಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದರು.

 ಸಿಸಿ ಕ್ಯಾಮಾರದಲ್ಲಿ ಕಳ್ಳರ ಚಹರೆ ಪತ್ತೆ ಹಚ್ಚಿದ ಪೊಲೀಸರು ಇವರ ಜಾಡು ಹಿಡಿದುಕೊಂಡು ಹೋದಾಗ ತುಮಕೂರಿನಲ್ಲಿ ಇರುವುದು ಪತ್ತೆಯಾಗಿ ತುಮಕೂರಿನ ಮರಳೂರು ದಿಣ್ಣೆಯ ಸಯ್ಯದ್ ಸಾಧಿಕ್, ಶಾಂತಿ ನಗರ ಸಲ್ಮಾನ್ ಮತ್ತು ಬಡೇ ಸಾಬ್ ಪಾಳ್ಯ ಮೂಲದ ಸಯ್ಯದ್ ಉಮೃದ್ದೀನ್ ಎಂಬ ಖತರ್ನಾಕ್ ಹೆದ್ದಾರಿ ದರೋಡೆಕೋರರನ್ನು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದೇ ರೀತಿ ಹೆದ್ದಾರಿಯಲ್ಲಿ ಹೊಂಚು ಹಾಕಿ ದರೋಡೆ ಮಾಡಿದ್ದ ತಂಡವೊOದನ್ನು ಕಳೆದ ವಾರವಷ್ಟೇ ಡಾಬಸ್ ಪೇಟೆ ಪೋಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು ಈ ಬಗ್ಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *