ತುಮಕೂರಲ್ಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ :ಬಲವಾಯ್ತು  ಆಗ್ರಹ

ತುಮಕೂರಲ್ಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ :ಬಲವಾಯ್ತು ಆಗ್ರಹ

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸುವ ಪ್ರಸ್ತಾಪವಿದೆ. ಆದರೆ ಪ್ರಸ್ತುತ ನೆಲಮಂಗಲ, ಕುಣಿಗಲ್ ರಸ್ತೆಯಲ್ಲಿ ವಿಮಾನ ನಿಲ್ದಾಣವನ್ನು ಸ್ಥಾಪಿಸುವ ವಿಚಾರವು ಪ್ರಸ್ತಾಪವಾಗುತ್ತಿದ್ದು, ತುಮಕೂರಿನಲ್ಲೇ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಒತ್ತಾಯಿಸಿದೆ.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಟಿ.ಜೆ. ಗಿರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತುಮಕೂರಿನಲ್ಲೇ ವಿಮಾನ ನಿಲ್ದಾಣ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಲಾಗಿದೆ.

ತುಮಕೂರು ಪ್ರಮುಖ 20 ಜಿಲ್ಲೆಗಳಿಗೆ ಹಾದು ಹೋಗುವ ಹೆಬ್ಬಾಗಿಲಾಗಿದ್ದು, ವಿಸ್ತಾರವಾದ ವಸಂತ ನರಸಾಪುರದಲ್ಲಿ ಸುಮಾರು 14 ಸಾವಿರ ಎಕರೆ ಬೃಹತ್ ಕೈಗಾರಿಕಾ ಪ್ರದೇಶವಿದೆ. ಈ ಕೈಗಾರಿಕಾ ಪ್ರದೇಶದಲ್ಲಿ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ಈಗಾಗಲೇ ಒಂದು ಡ್ರಾಫ್ಟ್ ಕೂಡ ಮಾಡಿದ್ದು, ಇಲ್ಲಿ ಸ್ಥಾಪಿಸಿದರೆ ವ್ಯಾಪಾರ, ವ್ಯವಹಾರ, ಕೈಗಾರಿಕಾ ಅಭಿವೃದ್ಧಿ, ಅಂತಾರಾಷ್ಟ್ರೀಯ ವ್ಯಾಪಾರದ ಅಭಿವೃದ್ಧಿ ಹಾಗೂ ಸರ್ಕಾರಕ್ಕೆ ಹೆಚ್ಚಿನ ರೆವಿನ್ಯೂ ಬಂದಂತಾಗುತ್ತದೆ ಎಲ್ಲಕ್ಕಿಂತ ಮೊದಲು ಸುಮಾರು 20ಕ್ಕೂ ಅಧಿಕ ಜಿಲ್ಲೆಯವರೆಗೆ ಹತ್ತಿರವಾಗುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹೇಳಿದೆ.

Leave a Reply

Your email address will not be published. Required fields are marked *