ತುಮಕೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕಿ ಮೂರು ದಿನವಾದ್ರು ಇನ್ನು ಸಿಕ್ಕಿಲ್ಲ ಬಿಡುಗಡೆ ಭಾಗ್ಯ.
ಹೌದು, ಜಾಮೀನಿನ ಕಾನೂನು ಪ್ರಕ್ರಿಯೆ ಮುಗಿಯದ ಕಾರಣ ಜೈಲಿನಿಂದ ಇನ್ನು ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಬಿಡುಗಡೆಗೆ ಶ್ಯೂರಿಟಿ ಸಮಸ್ಯೆ ಆಗ್ತಿದೆ ಎನ್ನಲಾಗುತ್ತಿದೆ.
ಶ್ಯೂರಿಟಿ ಕೊಡಲು ಯಾರು ಮುಂದೆ ಬರುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ತುಮಕೂರು ಜಿಲ್ಲಾ ಕಾರಾಗೃಹದಲ್ಲಿರುವ ನಾಲ್ವರು ಆರೋಪಿಗಳ ಪೈಕಿ ಮೂವರಿಗೆ ಜಾಮೀನು ಸಿಕ್ಕಿತ್ತು.
ಆರೋಪಿಗಳಾದ ಕೇಶವಮೂರ್ತಿ, ಕಾರ್ತಿಕ್, ಹಾಗೂ ನಿಖಿಲ್ ನಾಯಕ್ ಗೆ ಜಾಮೀನು ದೊರಕಿತ್ತು. ಎ-16 ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ ನಿಂದ ಹಾಗೂ
ಎ-15 ಆರೋಪಿ ಕಾರ್ತಿಕ್ ಹಾಗೂ ಎ-17 ಆರೋಪಿ ನಿಖಿಲ್ ಗೆ 57 ನೇ ಸಿಸಿಹೆಚ್ ಕೋರ್ಟ್ ನಿಂದ ಜಾಮೀನು ಸಿಕ್ಕಿತ್ತು.
ಕೋರ್ಟ್ ನಿಂದ ಷರತ್ತು ಬದ್ಧ ಜಾಮೀನು ಸಿಕ್ಕಿ 3 ದಿನ ಕಳೆದಿದೆ. ಆದರೆ, ಮೂರು ದಿನ ಕಳೆದರು ಕಾನೂನು ಪ್ರಕ್ರಿಯೆ ಮುಗಿಯುತ್ತಿಲ್ಲ.
ಬಾಂಡ್ ಶ್ಯೂರಿಟಿ ಸೇರಿದಂತೆ ಇನ್ನಿತರೆ ಕೆಲ ಕಾನೂನು ಪ್ರಕ್ರಿಯೆ ಮುಗಿದಿಲ್ಲ. ಅಲ್ಲದೆ ಕೋರ್ಟ್ನಿಂದ ಜೈಲಾಧಿಕಾರಿಗೆ ಜಾಮೀನಜ ಪತ್ರವೂ ಸಹ ಸಿಕ್ಕಿಲ್ಲ. ಜಾಮೀನು ಪ್ರತಿ ಸಿಕ್ಕ ಬಳಿಕ ಜೈಲಿನಿಂದ ಮೂವರನ್ನ ರಿಲೀಸ್ ಮಾಡಲಿರುವ ಜೈಲಾಧಿಕಾರಿಗಳು. ಹಾಗಾಗಿ
ಇಂದು ಸಂಜೆಯೊಳಗೆ ಬಹುತೇಕ ಮೂವರು ಆರೋಪಿಗಳು ಜೈಲಿನಿಂದ ಬಿಡುಗಡೆ ಸಾಧ್ಯತೆಯಿದೆ.