ಗ್ರಾಮೀಣ ಯುವಕರಿಗೆ ಮಾದರಿ ಪಶುಸಂಗೋಪನೆ

ಗ್ರಾಮೀಣ ಯುವಕರಿಗೆ ಮಾದರಿ ಪಶುಸಂಗೋಪನೆ

ತಮ್ಮ ಓದಿಗೆ ತಕ್ಕಂತೆ ಕೆಲಸ ಸಿಗದಿರುವ ಈ ಕಾಲದಲ್ಲಿ ಉದ್ಯೋಗವನ್ನು ಹರಸಿ ಗ್ರಾಮೀಣ ಭಾಗದ ರೈತರ ಮಕ್ಕಳು ಪಟ್ಟಣ ಸೇರುತ್ತಿರುವುದನ್ನು ನಾವು ನೋಡಬಹುದು. ಏಕೆಂದರೆ ಅಲ್ಲಿ ಯಾರಿಗೂ ಕಾಣದೆ ನೆರಳಲ್ಲಿ ದುಡಿಯುತ್ತೇವೆ ಎಂಬುವುದು ಯುವಕರ ಕನಸು, ಆದರೆ ಅಲ್ಲಿನ ನಿಜ ಸ್ವರೂಪವೇ ಬೇರೆ. ಇದನ್ನೆಲ್ಲಾ ಮನಗಂಡ ಕೆಲವು ಯುವಕರು ಕಷ್ಟವಾದರೂ ಪರವಾಗಿಲ್ಲ ನಾವು ಕೃಷಿಯಲ್ಲೇ ಮುಂದುವರೆಯುತ್ತೇವೆ ನಮ್ಮ ಊರಿನಲ್ಲೇ ಜೀವಿಸುತ್ತೇವೆ ಎಂದು ಬೆಂಗಳೂರಿನAತಹ ಪಟ್ಟಣಗಳನ್ನು ತೊರೆದು, ಹಳ್ಳಿಗಳಿಗೆ ಬಂದು ಸೇರುತ್ತಿರುವ ಸಾಕಷ್ಟು ಉದಾಹರಣೆಗಳನ್ನು ನೋಡಿದ್ದೇವೆ.

ಅಂತಹ ಯುವಕರುಗಳಿಗೆ ಕಷ್ಟವಾದರೂ ಪರವಾಗಿಲ್ಲ ಹಣ ಸಂಪಾದಿಸುವ ಮಾರ್ಗವಾಗಿ ಹುಡುಕಿಕೊಳ್ಳುವುದು ಎಂದರೆ ಅದು ಪಶುಸಂಗೋಪನೆ ಏಕೆಂದರೆ ಇಲ್ಲಿ ಒಂದು ಲಾಭದಾಯಕವಾದ ಉದ್ಯೋಗವಾಗಿಯೂ ನಾವು ಪರಿಗಣಿಸುತ್ತೇವೆ, ಕರ್ನಾಟಕದಲ್ಲಿ ೭೫% ಜನಸಂಖ್ಯೆ ಪಶುಸಂಗೋಪನೆಯನ್ನೇ ಅವಲಂಭಿಸಿದ್ದಾರೆ. ಯುವಕರಿಗೆ ಒಂದಷ್ಟು ಮಾಹಿತಿಗಳನ್ನು ನೀಡಲು ಪಶುಸಂಗೋಪನೆ ಇಲಾಖೆಯಿಂದ ಮಾರ್ಗದರ್ಶನ ನೀಡುತ್ತಿದ್ದಾರೆ. ಇಂತಹ ಕ್ಷೇತ್ರಗಳಲ್ಲಿ ಆಸಕ್ತಿ ವಹಿಸುವಂತಹ ಯುವಜನತೆಗೆ ಪ್ರೋತ್ಸಾಹಿಸುವಂತಹ ಕೆಲಸವು ವಿವಿಧ ಇಲಾಖೆಗಳಿಂದ ಆಗಬೇಕಿದೆ.

ಆರ್ಥಿಕವಾಗಿ ದೇಶದ ಸ್ಥಿರತೆಯನ್ನು ಹೆಚ್ಚಿಸಲು ಪಶುಸಂಗೋಪನೆಯು ಸಹಕಾರಿಯಾಗಿದೆ. ಅತಿ ಹೆಚ್ಚಾಗಿ ಹಳ್ಳಿಗಳಲ್ಲಿ ಹಸುಗಳನ್ನು ಸಾಕುತ್ತಿರುವುದರಿಂದ, ದೇಶದೆಲ್ಲೆಡೆ ಹಾಲಿನ ಕ್ರಾಂತಿಯನ್ನು ಪ್ರಸರಿಸಲು ಸಹಕಾರಿಯಾಗುತ್ತಿದೆ. ಇದನ್ನೇ ಉದ್ದಿಮೆಯನ್ನಾಗಿ ಮಾಡಿಕೊಂಡು ಯಶಸ್ಸು ಕಂಡವರನ್ನೂ ನಾವು ನೋಡಬಹುದು. ಪಟ್ಟಣದ ಜೀವನ ಸಾಕೆನ್ನುವವರು ಹಳ್ಳಿಗಳಿಗೆ ಬಂದು ಈ ಉದ್ಯೋಗವನ್ನು ಆರಂಭಿಸುತ್ತಾರೆ. ಯಾವುದೇ ಒತ್ತಡವಿಲ್ಲದೆ ನೆಮ್ಮದಿಯ ಜೀವನವನ್ನು ಸಾಗಿಸಲು ಸಹಕಾರಿಯಾಗಿದೆ ಎಂದು ನಮ್ಮ ಹಳ್ಳಿಗರೂ ಸಹ ಹೇಳುತ್ತಾರೆ.

ಪಶುಸಂಗೋಪನೆಯಲ್ಲಿ ಅದರಲ್ಲೂ ಪ್ರಮುಖವಾಗಿ ಆದಾಯವನ್ನು ತರುವಂತಹ ಹಸುಗಳ ತಳಿಗಳಲ್ಲಿ ಎಚ್ಎಫ್, ಜರ್ಸಿ, ಬ್ಲಾಕ್, ನಾಟಿ ಕ್ರಾಸ್, ರೆಡ್ಎನ್, ಆಲ್ ಬ್ಲಾಕ್, ನಂತಹ ವಿವಿಧ ತಳಿಗಳ ಹಸುಗಳನ್ನು ಸಹ ನೋಡಬಹುದು. ಅದರಲ್ಲೂ ಅತಿ ಹೆಚ್ಚಾಗಿ ಹಾಲನ್ನು ನೀಡುವಂತಹ ಆದಾಯವನ್ನು ದುಪ್ಪಟ್ಟು ಹೆಚ್ಚಿಸುವಂತಹ ತಳಿಗಳಲ್ಲಿ ಹೆಚ್ಎಫ್ ತಳಿಯ ಹಸು ಮುಖ್ಯವಾಗಿದೆ. ಈ ಹಸುಗಳು ಹಳ್ಳಿಗಳ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳುವುದರಿಂದ ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚಾಗಿ ಸಾಕಲಾಗುತ್ತದೆ.

ಇತ್ತಿಚ್ಚಿನ ಯುವಜನತೆಗೆ ಸ್ವ- ಉದ್ಯೋಗವನ್ನು ಸೃಷ್ಠಿಸಿಕೊಳ್ಳಲು ಈ ಪಶುಸಂಗೋಪನೆಯು ಸಹಕಾರಿಯಾಗಿದ್ದು, ಪಟ್ಟಣದಲ್ಲಿನ ಯುವಜನತೆಗೆ ಹಳ್ಳಿಗಳ ಕಡೆ ಮುಖಮಾಡಲು ಇನ್ನಷ್ಟು ಪ್ರೋತ್ಸಾಹವನ್ನು ನೀಡಿ, ಹಸು ಸಾಕಾಣಿಕೆಗೆ ಇರುವಂತಹ ಯೋಜನೆಗಳನ್ನು, ಹಾಗೂ ಅನುದಾನಗಳ ಮಾಹಿತಿಯನ್ನು ನೀಡುವುದರಿಂದ ಪಶುಸಂಗೋಪನೆ ಇನ್ನಷ್ಟು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ, ಹಾಗೂ ಯುವಜನತೆಗೆ ತಮ್ಮ ಉದ್ಯೋಗವನ್ನು ತಾವೇ ಸೃಷ್ಟಿಸಿಕೊಳ್ಳಲು ಸಹಕಾರಿಯಾಗುತ್ತದೆ.

Leave a Reply

Your email address will not be published. Required fields are marked *