ಹಾವೇರಿ || ಹೆಗ್ಗೇರಿ ಕೆರೆಗೆ ಅಪರೂಪದ ಅತಿಥಿಗಳ ಆಗಮನ

ಹಾವೇರಿ: ದೇಶ-ವಿದೇಶಗಳ ಬಾನಾಡಿಗಳ ಆಶ್ರಯತಾಣವಾಗಿರುವ ಹಾವೇರಿಯ ಹೆಗ್ಗೇರಿಗೆ ಇದೀಗ ಹೊಸ ಅತಿಥಿಗಳು ಬಂದಿದ್ದಾರೆ. ಹೆಗ್ಗೇರಿಗೆ ಯುಟಿಪಿ ಕಾಲುವೆಯಿಂದ ನೀರು ತುಂಬಿಸಲಾಗಿದ್ದು, ಈ ನೀರಿನೊಂದಿಗೆ ನೀರುನಾಯಿಗಳ ಹಿಂಡು ಆಗಮಿಸಿವೆ. 16ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಇವು ಬೆಳಗ್ಗೆ ಮತ್ತು ಸಂಜೆ ಕೆರೆಯಲ್ಲಿ ಕಾಣಸಿಗುತ್ತಿವೆ.

ಕೆರೆಯಲ್ಲಿ ಹೇರಳವಾಗಿ ಸಿಗುವ ಮೀನು, ಏಡಿ ಮತ್ತು ಕಪ್ಪೆ ಸೇರಿದಂತೆ ವಿವಿಧ ಜಲಚರಗಳು ಇವುಗಳಿಗೆ ಆಹಾರ. ನದಿ ಪಕ್ಕದ ಕಲ್ಲಿನ ಪೊಟರೆಗಳಲ್ಲಿ ವಾಸಿಸುವ ನೀರುನಾಯಿಗಳು ತುಂಗಭದ್ರಾ ನದಿಯನ್ನು ತಮ್ಮ ಅವಾಸಸ್ಥಾನ ಮಾಡಿಕೊಂಡಿವೆ. ವಿವಿಧ ಕೆರೆಗಳಿಗೆ ಮಳೆಗಾಲದಲ್ಲಿ ಯುಟಿಪಿ ಕಾಲುವೆ ಮೂಲಕ ನೀರು ಹರಿಸಲಾಗುತ್ತದೆ. ಇದರೊಂದಿಗೆ ಬರುವ ನೀರುನಾಯಿಗಳು ಹೆಗ್ಗೇರಿ, ಹೊಂಬರಡಿ, ಚಿಕ್ಕಲಿಂಗದಹಳ್ಳಿ ಹಾಗು ಗುತ್ತಲ ಸೇರಿದಂತೆ ದೊಡ್ಡಕೆರೆಗಳಲ್ಲಿ ಕಂಡುಬರುತ್ತಿವೆ.

2 ನೀರುನಾಯಿಗಳನ್ನು ಕೊಂದು ಹಾಕಿದ ದುಷ್ಕರ್ಮಿಗಳು!: ಮನುಷ್ಯರಿಗೆ ತೊಂದರೆ ಕೊಡದೆ ತಮ್ಮಷ್ಟಕ್ಕೆ ತಾವಿದ್ದರೂ ದುಷ್ಕರ್ಮಿಗಳು ಎರಡು ನೀರುನಾಯಿಗಳನ್ನು ಹೊಡೆದು ಕೊಂದಿದ್ದಾರೆ. ಇದರಿಂದ ಎಚ್ಚೆತ್ತ ಪರಿಸರಪ್ರೇಮಿಗಳು ಅರಣ್ಯ ಇಲಾಖೆಗೆ ದೂರು ನೀಡಿದ್ದು, ಇದೀಗ ಎಚ್ಚರಿಕೆಯ ಫಲಕಗಳನ್ನು ಹಾಕಲಾಗಿದೆ.

Leave a Reply

Your email address will not be published. Required fields are marked *