ಶಿವಮೊಗ್ಗ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ನಿಷೇಧಿತ ಚೀನಾ ಬೆಳ್ಳುಳ್ಳಿ

ಶಿವಮೊಗ್ಗ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ನಿಷೇಧಿತ ಚೀನಾ ಬೆಳ್ಳುಳ್ಳಿ

ಶಿವಮೊಗ್ಗ: ಬೆಳ್ಳುಳ್ಳಿ ಬೆಲೆ ಏರಿಕೆ ಮಧ್ಯೆ ಇದೀಗ ಶಿವಮೊಗ್ಗ ಮಾರುಕಟ್ಟೆಗೆ ನಿಷೇಧಿತ ಚೀನಾ ಬೆಳ್ಳುಳ್ಳಿ ಎಂಟ್ರಿ ಕೊಟ್ಟಿದ್ದು, ದೇಶಿ ಬೆಳ್ಳುಳ್ಳಿ ಮಾರಾಟಗಾರರಿಗೆ ಸಂಕಷ್ಟ ತಂದೊಡ್ಡಿದೆ.

ಬೆಳ್ಳುಳ್ಳಿ ದರ 300 ರೂಪಾಯಿಯಿಂದ 350 ರೂಪಾಯಿ ತಲುಪಿದೆ. ದುಬಾರಿ ಬೆಳ್ಳುಳ್ಳಿ ಖರೀದಿಯೇ ಗ್ರಾಹಕರಿಗೆ ಕಷ್ಟವಾಗಿದೆ.

ಬೆಳ್ಳುಳ್ಳಿ ಬೆಲೆ ಏರಿಕೆಯನ್ನೇ ಬಂಡವಾಳ ಮಾಡಿಕೊಂಡ ಕೆಲ ಬೆಳ್ಳುಳ್ಳಿ ಸಗಟು ವ್ಯಾಪಾರಸ್ಥರು ನಿಷೇಧಿತ ಚೀನಾ ಬೆಳ್ಳುಳ್ಳಿಯನ್ನು ಕಡಿಮೆ ದರದಲ್ಲಿ ಮಾರುಕಟ್ಟೆಗೆ ಬಿಟ್ಟು ಮಾರಾಟ ಮಾಡುತ್ತಿದ್ದಾರೆ.

ಆರೋಗ್ಯಕ್ಕೆ ಹಾನಿಕಾರಕ ಎನ್ನಲಾದ ಚೀನಾ ಬೆಳ್ಳುಳ್ಳಿ ಮಾರಾಟ ಶಿವಮೊಗ್ಗದ ಗಾಂಧಿಬಜಾರ್ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಬಡಾವಣೆಗಳಲ್ಲಿ ನಡೆಯುತ್ತಿದೆ.

ಶಿವಮೊಗ್ಗ ಮಾರುಕಟ್ಟೆಗೆ ನಿಷೇಧಿತ ಚೀನಾ ಬೆಳ್ಳುಳ್ಳಿ ಎಂಟ್ರಿಯಾಗುತ್ತಿದ್ದಂತೆ ದೇಶಿ ಬೆಳ್ಳುಳ್ಳಿ ಬೇಡಿಕೆ ಕಡಿಮೆಯಾಗಿದೆ. ನಿಷೇಧಿತ ಬೆಳ್ಳುಳ್ಳಿ ಎಂಬುದು ಗೊತ್ತಿಲ್ಲದೇ ಗ್ರಾಹಕರು ಕಡಿಮೆ ದರದ ಚೀನಾ ಬೆಳ್ಳುಳ್ಳಿ ಖರೀದಿ ಮಾಡುತ್ತಿದ್ದಾರೆ.

ಚೀನಾ ಬೆಳ್ಳುಳ್ಳಿ ದೇಶ ಹಾಗೂ ರಾಜ್ಯದಲ್ಲಿ ನಿಷೇಧಿಸಲಾಗಿದೆ. ಚೀನಾದಲ್ಲಿ ಬೆಳ್ಳುಳ್ಳಿಗೆ ಅತ್ಯಧಿಕ ರಾಸಾಯನಿಕ ಬಳಕೆ ಮಾಡುತ್ತಾರೆ. ಸಂಸ್ಕರಣೆಯಲ್ಲಿಯೂ ರಾಸಾಯನಿಕ ಉಪಯೋಗಿಸಲಾಗುತ್ತದೆ. ಇವುಗಳ ಸೇವನೆ ಆರೋಗ್ಯಕ್ಕೆ ಹಾನಿಕಾರರ. ಹೊಣ್ಣು, ಉರಿ ಇತ್ಯಾದಿ ಸೋಂಕು ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ 10 ವರ್ಷಗಳ ಹಿಂದೆಯೇ ಚೀನಾ ಬೆಳ್ಳುಳ್ಳಿ ನಿಷೇಧಿಸಲಾಗಿದೆ.

Leave a Reply

Your email address will not be published. Required fields are marked *