ಯಾವ್ಯಾವುದೋ ದೇಶದ ಆಕ್ಷನ್ ಚಿತ್ರಗಳನ್ನು ನೋಡಿ ರೋಮಾಂಚನಗೊಳ್ಳುವ ಪ್ರೇಕ್ಷಕರಿಗೆ ಆಯುಧ ಪೂಜೆಯ ಸಂದರ್ಭದಲ್ಲಿ ಹೇಳಿ ಮಾಡಿಸಿದ ಚಿತ್ರ ಇದು. ಆದರೆ ಚಿತ್ರ ಬಿಡುಗಡೆಯಾದ ಕ್ಷಣದಿಂದಲೇ ಇದು ನಮ್ಮ ಕನ್ನಡದ ಚಿತ್ರ ಅನ್ನೊದನ್ನು ಕೂಡ ಮರೆತು ಧ್ರುವ ಸರ್ಜಾ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾರ್ಟಿನ್ ಚಿತ್ರವನ್ನು ಹೀನಾಮಾನವಾಗಿ ಟ್ರೋಲ್ ಮಾಡುತ್ತಿರುವುದರ ಜೋತೆಗೆ ನೆಗೆಟಿವ್ ರಿವ್ಯಗಳು ಕೇಳಿಬರುತ್ತಿವೆ.
ಚಿತ್ರದ ಮೇಲೇ ನೆಗೆಟಿವ ಪರಿಣಾಮ ಬೀರಿದೆ ಅಂತಾ ಚಿತ್ರತಂಡ ತಲೆ ಕೆಡಿಸಿಕೊಂಡು ಕುತಿಲ್ಲಾ ಏಕೆಂದರೆ, ಚಿತ್ರತಂಡದ ಪ್ರಕಾರ ಚಿತ್ರ ಗೆಲುವಿನತ್ತ ಸಾಗಿದೆ ಮತ್ತು ಯಶಸ್ಸನ್ನು ಗಳಿಸಿದೆ ಎಂಬುದು ಅವರ ಅಭಿಪ್ರಾಯವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಚಿತ್ರತಂಡ ಹೆಮ್ಮೆಯಿಂದ ಚಿತ್ರದ ಮೊದಲೆರಡು ದಿನದ ಗಳಿಕೆಯನ್ನು ಕೂಡ ಸಾರ್ವಜನಿಕವಾಗಿ ಹಂಚಿಕೊಂಡಿದೆ. ಈ ಚಿತ್ರ ಮೊದಲ ದಿನ ಕರ್ನಾಟಕದಲ್ಲಿ 9.1 ಕೋಟಿ ರೂ ಗಳಿಸಿದ್ದರೆ ಎರಡನೇ ದಿನ 13.4 ಕೋಟಿ ರೂಪಾಯಿಯನ್ನು ಗಳಿಸಿದೆ. ಇದೆಲ್ಲದರ ಜೋತೆಗೆ ಧ್ರುವಾ ಸರ್ಜಾ ಕಾಲೆಳೆಯುವವರು ಕಾಲ ಕೆಳಗೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.
ಇನ್ನು ಧ್ರುವ ಸರ್ಜಾ ಬಗ್ಗೆ ಮತ್ತು ಮಾರ್ಟಿನ್ ಚಿತ್ರದ ಬಗ್ಗೆ ನೆಗೆಟಿವ್ ಮಾತುಗಳನ್ನು ಕೇಳಿ, ನಿಮಗೆ ಧ್ರುವ ಸರ್ಜಾ ಬೇಡವಾದರೆ ನಮ್ಮಲ್ಲಿ ಅವರನ್ನು ಕಳುಹಿಸಿಕೊಡಿ ನಮಗೆ ಧ್ರುವ ಅವರಂತಹ ಮಾಸ್ ಹೀರೋ ಬೇಕು ಎನ್ನುತ್ತಿದ್ದಾರೆ. ಮಾರ್ಟಿನ್ ನಮಗೆ ತುಂಬಾ ಇಷ್ಟವಾಯ್ತು, ನಿಮಗೆ ಇಷ್ಟವಾಗದೇ ಇದ್ದರೆ ಪರವಾಗಿಲ್ಲ ಆದರೆ ಚಿತ್ರದ ಕುರಿತು ಅಪಪ್ರಚಾರ ಮಾಡಬೇಡಿ ಎಂದು ಒಬ್ಬ ಹಿಂದಿ ಯೂಟ್ಯೂಬರ್ ಪ್ರತ್ಯುತ್ತರ ನೀಡಿದ್ದಾರೆ.
ಸದ್ಯ ಅಪಪ್ರಚಾರದ ವಿರುದ್ಧ ಹೋರಾಡುತ್ತಿರುವ ಈ ಮಾರ್ಟಿನ್ ಒಟ್ಟಾರೆಯಾಗಿ ಚಿತ್ರಮಂದಿರದಲ್ಲಿ ಎಷ್ಟು ಹಣ ಗಳಿಸಬಹುದು ಎನ್ನುವುದು ಸದ್ಯದ ಕುತೂಹಲ.