ಬೆಂಗಳೂರು : ಪ್ರತಿ ವರ್ಷಕ್ಕೆ 3.5 ಮಿಲಿಯನ್ ಮಕ್ಕಳು ಅತಿಸಾರ, ನ್ಯುಮೋನಿಯಾಕ್ಕೆ ಬಲಿಯಾಗುತ್ತಿದ್ದಾರೆ. ಮಕ್ಕಳ ಕೈಗಳ ಸ್ವಚ್ಛತೆಯ ಬಗ್ಗೆ ಗಮನ ಹರಿಸಿ ಆಟವಾಡಿದ ನಂತರ, ಊಟಕ್ಕೂ ಮೊದಲು, ನಂತರ ಹಾಗೂ ಶೌಚಾಲಯ ಬಳಿಸಿದ ಬಳಿಕ ಮಕ್ಕಳಿಗೆ ಕೈ ತೊಳೆಯಲು ಅಭ್ಯಾಸ ಮಾಡಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಅತಿಸಾರ, ನ್ಯುಮೋನಿಯಾದಂತ ಕಾಯಿಲೆಗಳಿಗೆ ಮಕ್ಕಳು ತುತ್ತಾಗುವುದನ್ನು ತಡೆಯಲು ಮಕ್ಕಳ ಕೈಗಳ ಸ್ವಚ್ಛತೆಯನ್ನು ಕಾಪಾಡುವುದು ಬಹಳ ಮುಖ್ಯವಾಗಿದೆ. ಕೈ ತೊಳೆಯುವ ಅಭ್ಯಾಸವನ್ನು ಮಕ್ಕಳಲ್ಲಿ ರೂಢಿಸಿ. ಆಗಾಗ ಮಕ್ಕಳ ಕೈಗಳ ಸ್ವಚ್ಛತೆಯ ಬಗ್ಗೆ ಗಮನ ಹರಿಸಿ.
ಸಾಮಾನ್ಯವಾಗಿ ಆರೋಗ್ಯವಾಗಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಉಸಿರಾಡಲು ಸ್ವಲ್ಪ ಕಷ್ಟ ಪಟ್ಟರೆ ಆತನಿಗೆ ಎದೆಯಲ್ಲಿ ಕಫ ಕಟ್ಟಿರಬೇಕು ಎಂದು ಊಹಿಸಬಹುದು. ಉಸಿರಾಟದ ತೊಂದರೆ ಇನ್ನೂ ಸ್ವಲ್ಪ ಜಾಸ್ತಿಯಾದರೆ ಅದನ್ನು ದಮ್ಮು ಅಥವಾ ಆಸ್ತಮಾ ಎಂದು ಕರೆಯಬಹುದು. ಆದರೆ ನೇರವಾಗಿ ಶ್ವಾಸಕೋಶಕ್ಕೆ ತೊಂದರೆಯಾಗಿ ವಿಪರೀತ ಉಸಿರಾಟದ ಸಮಸ್ಯೆಯಿಂದ ಬಳಲಿ ಕೆಲವೊಂದು ರೋಗ ಲಕ್ಷಣಗಳನ್ನು ಒಳಗೊಂಡ ವ್ಯಕ್ತಿಗೆ ನ್ಯೂಮೋನಿಯ ಸಮಸ್ಯೆ ಉಂಟಾಗಿದೆ ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ.
ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ನ್ಯುಮೋನಿಯಾ(Pneumonia) ಸಮಸ್ಯೆಯು ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಇದು ಯಾವುದೇ ವಯಸ್ಸಿನಲ್ಲೂ ಸಂಭವಿಸಬಹುದು. ನ್ಯುಮೋನಿಯಾ ಶ್ವಾಸಕೋಶದ ಸೋಂಕನ್ನು ಉಂಟುಮಾಡುತ್ತದೆ. ನೀರು ತುಂಬುವುದು, ಶ್ವಾಸಕೋಶದಲ್ಲಿ ಕೀವು ಉಸಿರಾಟಕ್ಕೆ ತೊಂದರೆ, ಕೀವು ಮತ್ತು ಕಫದ ತೊಂದರೆಗಳನ್ನು ಉಂಟುಮಾಡುತ್ತದೆ.
ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಅದು ಗಂಭೀರ ಸ್ವರೂಪವನ್ನು ಪಡೆಯಬಹುದು. ಅದೇ ಸಮಯದಲ್ಲಿ, ಚಿಕಿತ್ಸೆಯನ್ನು ಸಮಯಕ್ಕೆ ಪಡೆದರೆ, ರೋಗಿಯು ಸಹ ಚೇತರಿಸಿಕೊಳ್ಳಬಹುದು.
ನ್ಯುಮೋನಿಯಾದ ಲಕ್ಷಣಗಳು ನ್ಯುಮೋನಿಯಾ ಸಾಮಾನ್ಯವಾಗಿ ಶೀತದಿಂದ ಪ್ರಾರಂಭವಾಗುತ್ತದೆ. ಶ್ವಾಸಕೋಶದಲ್ಲಿ ಸೋಂಕು ವೇಗವಾಗಿ ಮುಂದುವರೆದಾಗ, ಹೆಚ್ಚಿನ ಜ್ವರದಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ. ಎದೆನೋವು ಕೂಡ ಕಾಣಿಸಿಕೊಳ್ಳಬಹುದು. ಐದು ವರ್ಷದೊಳಗಿನ ಮಕ್ಕಳಿಗೆ ಜ್ವರ ಬರುವುದಿಲ್ಲ ಆದರೆ ಕೆಮ್ಮು ಮತ್ತು ಉಸಿರಾಟದ ತೊಂದರೆ ಇರುತ್ತದೆ.