ಎಡೆಬಿಡದೆ ಸುರಿಯುತ್ತಿರುವ ಮಳೆ : ತೀವ್ರ ಸಂಕಷ್ಟದಲ್ಲಿ ಕಾಫಿ ಬೆಳೆಗಾರರು

ಎಡೆಬಿಡದೆ ಸುರಿಯುತ್ತಿರುವ ಮಳೆ : ತೀವ್ರ ಸಂಕಷ್ಟದಲ್ಲಿ ಕಾಫಿ ಬೆಳೆಗಾರರು

ಧಾರಾಕಾರ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಕಾಫಿ ಬೆಳೆಗೆ ಅಪಾರ ಹಾನಿಯಾಗಿದೆ

ಚಿಕ್ಕಮಗಳೂರು:  ಎಡೆಬಿಡದೆ ಸುರಿದ ಮಳೆಗೆ ಮಲೆನಾಡು ಭಾಗದ ಕಾಫಿ ಬೆಳೆಗಾರರ ಬದುಕು ಅತಂತ್ರವಾಗಿದ್ದು, ಈಗಾಗಲೇ ಬೆಳೆಗಾರರು ಶೇ 30ರಷ್ಟು ತಮ್ಮ ಬೆಳೆ ಕಳೆದುಕೊಂಡಿದ್ದಾರೆ. ಕಾಫಿ ಎಸ್ಟೇಟ್‌ಗಳಲ್ಲಿ ಆಂತರಿಕ ಬೆಳೆಯಾಗಿ ಬೆಳೆದ ಕರಿಮೆಣಸು ಕೂಡ ಹಾನಿಯಾಗಿದೆ. ಇನ್ನೂ ಶೇಕಡಾ 80 ರಷ್ಟು ಕಾಳುಮೆಣಸಿನ ಬಳ್ಳಿಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ನಿನ್ನೆ ಸಂಜೆ ಆಲ್ದೂರು ಹೋಬಳಿ ವ್ಯಾಪ್ತಿಯ ದೊಡ್ಡಮಾಗರವಳ್ಳಿ ಮತ್ತು ಚಿಕ್ಕಮಾಗರವಳ್ಳಿಯಲ್ಲಿ ಭಾರಿ ಮಳೆಯಾಗಿದೆ. ಕಾಫಿ ಗಿಡಗಳು ಕೊಚ್ಚಿ ಹೋಗಿದ್ದು, ಹಲವು ತೋಟಗಳು ನೀರಿನಲ್ಲಿ ಮುಳುಗಡೆಯಾಗಿವೆ. ಸಮೀಪದ ಹೊಳೆಗೆ ಏಕಾಏಕಿ ನೀರು ನುಗ್ಗಿದ್ದರಿಂದ ಭತ್ತದ ಗದ್ದೆ ಹಾಗೂ ಕಾಫಿ ತೋಟ ಮುಳುಗಡೆಯಾಗಿದೆ ಎಂದು ರೈತ ಸುರೇಶ್ ಹೇಳುತ್ತಾರೆ.

ಕಾಫಿ ಬೆಳೆಗಾರ ಪುಟ್ಟ ಸ್ವಾಮಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಇಂತಹ ಭಯಾನಕ ಮೇಘಸ್ಫೋಟವನ್ನು ನಾವು ನೋಡಿಲ್ಲ. ಸುಮಾರು 20 ವರ್ಷಗಳ ಹಿಂದೆ ಈ ರೀತಿಯ ಧಾರಾಕಾರ ಮಳೆ ಕಂಡಿದ್ದೆವು ಎನ್ನುತ್ತಾರೆ.

ನೆರಳಿನ ಮರಗಳ ಮೇಲೆ ಲಂಬವಾಗಿ ಬೆಳೆಯುವ ಕಾಳುಮೆಣಸಿನ ಬಳ್ಳಿಗಳು ಕಾಫಿ ತೋಟಗಳಲ್ಲಿ ಬೆಳೆಗಾರರಿಗೆ ಆದಾಯದ ಆಧಾರವಾಗಿದೆ. ಈ ತಾಪಮಾನವು ಪಶ್ಚಿಮ ಘಟ್ಟಗಳ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ವಿಶಿಷ್ಟವಾಗಿದೆ. ಆದರೆ ಭಾರೀ ಮಳೆಯಿಂದಾಗಿ ತೇವಾಂಶ ಹೆಚ್ಚಿದ್ದು, ಕಾಫಿ ಬೆಳೆಗೆ ಬಾಧೆ ತೋರುವ ಸ್ಥಿತಿ ನಿರ್ಮಾಣವಾಗಿದೆ.ಚಿಕ್ಕಮಗಳೂರು:  ಎಡೆಬಿಡದೆ ಸುರಿದ ಮಳೆಗೆ ಮಲೆನಾಡು ಭಾಗದ ಕಾಫಿ ಬೆಳೆಗಾರರ ಬದುಕು ಅತಂತ್ರವಾಗಿದ್ದು, ಈಗಾಗಲೇ ಬೆಳೆಗಾರರು ಶೇ 30ರಷ್ಟು ತಮ್ಮ ಬೆಳೆ ಕಳೆದುಕೊಂಡಿದ್ದಾರೆ. ಕಾಫಿ ಎಸ್ಟೇಟ್‌ಗಳಲ್ಲಿ ಆಂತರಿಕ ಬೆಳೆಯಾಗಿ ಬೆಳೆದ ಕರಿಮೆಣಸು ಕೂಡ ಹಾನಿಯಾಗಿದೆ. ಇನ್ನೂ ಶೇಕಡಾ 80 ರಷ್ಟು ಕಾಳುಮೆಣಸಿನ ಬಳ್ಳಿಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ನಿನ್ನೆ ಸಂಜೆ ಆಲ್ದೂರು ಹೋಬಳಿ ವ್ಯಾಪ್ತಿಯ ದೊಡ್ಡಮಾಗರವಳ್ಳಿ ಮತ್ತು ಚಿಕ್ಕಮಾಗರವಳ್ಳಿಯಲ್ಲಿ ಭಾರಿ ಮಳೆಯಾಗಿದೆ. ಕಾಫಿ ಗಿಡಗಳು ಕೊಚ್ಚಿ ಹೋಗಿದ್ದು, ಹಲವು ತೋಟಗಳು ನೀರಿನಲ್ಲಿ ಮುಳುಗಡೆಯಾಗಿವೆ. ಸಮೀಪದ ಹೊಳೆಗೆ ಏಕಾಏಕಿ ನೀರು ನುಗ್ಗಿದ್ದರಿಂದ ಭತ್ತದ ಗದ್ದೆ ಹಾಗೂ ಕಾಫಿ ತೋಟ ಮುಳುಗಡೆಯಾಗಿದೆ ಎಂದು ರೈತ ಸುರೇಶ್ ಹೇಳುತ್ತಾರೆ.

ಕಾಫಿ ಬೆಳೆಗಾರ ಪುಟ್ಟ ಸ್ವಾಮಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಇಂತಹ ಭಯಾನಕ ಮೇಘಸ್ಫೋಟವನ್ನು ನಾವು ನೋಡಿಲ್ಲ. ಸುಮಾರು 20 ವರ್ಷಗಳ ಹಿಂದೆ ಈ ರೀತಿಯ ಧಾರಾಕಾರ ಮಳೆ ಕಂಡಿದ್ದೆವು ಎನ್ನುತ್ತಾರೆ.

ನೆರಳಿನ ಮರಗಳ ಮೇಲೆ ಲಂಬವಾಗಿ ಬೆಳೆಯುವ ಕಾಳುಮೆಣಸಿನ ಬಳ್ಳಿಗಳು ಕಾಫಿ ತೋಟಗಳಲ್ಲಿ ಬೆಳೆಗಾರರಿಗೆ ಆದಾಯದ ಆಧಾರವಾಗಿದೆ. ಈ ತಾಪಮಾನವು ಪಶ್ಚಿಮ ಘಟ್ಟಗಳ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ವಿಶಿಷ್ಟವಾಗಿದೆ. ಆದರೆ ಭಾರೀ ಮಳೆಯಿಂದಾಗಿ ತೇವಾಂಶ ಹೆಚ್ಚಿದ್ದು, ಕಾಫಿ ಬೆಳೆಗೆ ಬಾಧೆ ತೋರುವ ಸ್ಥಿತಿ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *