ವಯಸ್ಸಾದಂತೆ ಮುಖದಲ್ಲಿ ಮೂಡುವ ನೆರಿಗೆ ಹೋಗಲಾಡಿಸಲು ಇಲ್ಲಿದೆ ʼಮನೆ ಮದ್ದುʼ

ವಯಸ್ಸಾದಂತೆ ಮುಖದಲ್ಲಿ ಮೂಡುವ ನೆರಿಗೆ ಹೋಗಲಾಡಿಸಲು ಇಲ್ಲಿದೆ ʼಮನೆ ಮದ್ದುʼ

ವಯಸ್ಸು ನಲ್ವತ್ತರ ಗಡಿ ದಾಟುತ್ತಿದ್ದಂತೆ ಮುಖದ ಮೇಲೆ ನೆರಿಗೆಗಳು ಕಾಣಿಸಿಕೊಳ್ಳುವುದು ಸಹಜ. ಕೆಲವೊಮ್ಮೆ ಅದು 20-30ರ ಹರೆಯದಲ್ಲೇ ಮೂಡುವುದುಂಟು. ಇದಕ್ಕೆ ಮುಖ್ಯ ಕಾರಣ ಅನುವಂಶೀಯತೆ, ವಿಪರೀತ ಧೂಮಪಾನ ಹಾಗೂ ದೇಹದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚುವುದು ಆಗಿರಬಹುದು.

ಇದನ್ನು ಹೋಗಲಾಡಿಸುವ ಮನೆಮದ್ದುಗಳು ಇಲ್ಲಿವೆ ಕೇಳಿ.

ಒಂದು ತಟ್ಟೆಗೆ ಒಂದು ಚಮಚ ಜೇನು ಹಾಗೂ ಒಂದು ಚಮಚ ಕ್ಯಾರೆಟ್ ರಸ ಬೆರೆಸಿ. ಈ ಮಿಶ್ರಣವನ್ನು ನೆರಿಗೆ ಮೂಡಿರುವ ಭಾಗಕ್ಕೆ ಹಚ್ಚಿ. ಇಪ್ಪತ್ತು ನಿಮಿಷದ ಬಳಿಕ ಮುಖವನ್ನು ತೊಳೆಯಿರಿ.

ಬೆಚ್ಚಗಿನ ನೀರಿಗೆ ಅಡುಗೆ ಸೋಡಾವನ್ನು ಬೆರೆಸಿ. ಕಾಟನ್ ಬಟ್ಟೆಯಿಂದ ಅದನ್ನು ಮುಖಕ್ಕೆ ಲೇಪಿಸಿ. ಐದಾರು ಬಾರಿ ಹೀಗೆ ಮಾಡಿದ ಬಳಿಕ ನಿಮ್ಮ ಮುಖವನ್ನು ಚೆನ್ನಾಗಿ ಒರೆಸಿ ಕ್ಲೀನ್ ಮಾಡಿ. ಇದರಿಂದಲೂ ಮುಖದ ನೆರಿಗೆ ದೂರವಾಗುತ್ತದೆ.

ಜೇನುತುಪ್ಪಕ್ಕೆ ಕಾಲು ಚಮಚ ಗ್ಲಿಸರಿನ್ ಹಾಕಿಯೂ ಇದನ್ನು ಪ್ರಯತ್ನಿಸಬಹುದು. ಈ ಪೇಸ್ಟ್ ಅನ್ನು ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಮಲಗಿ ಬೆಳಗ್ಗೆದ್ದು ಮುಖ ತೊಳೆದರೆ ಸಾಕು, ಯಾವುದೇ ನೆರಿಗೆ ಮುಖದಲ್ಲಿ ಮೂಡಲು ಇದು ಬಿಡುವುದಿಲ್ಲ. ಇದನ್ನು ವಾರಕ್ಕೊಮ್ಮೆ ಪ್ರಯತ್ನಿಸಿ ನೋಡಿ. ನಿಮ್ಮ ನೆರಿಗೆ ಸಮಸ್ಯೆ ದೂರವಾಗಿ ಮುಖ ಕಾಂತಿ ಪಡೆದುಕೊಳ್ಳುತ್ತದೆ.

Leave a Reply

Your email address will not be published. Required fields are marked *