ಪ್ರಪಂಚದಾದ್ಯಂತ ಹಲವಾರು ಐತಿಹಾಸಿಕ ಮತ್ತು ಅಚ್ಚರಿಗೊಳಿಸುವ ಪ್ರವಾಸಿ ಸ್ಥಾನಗಳ ಬಗ್ಗೆ ಕೇಳಿರುತ್ತಿರಿ ಹಾಗೇ ನೋಡಿರುತ್ತಿರಿ ಕೂಡ. ಅದರಲ್ಲಿ ಕೆಲವೊಂದನ್ನು ಆರಿಸಿ ಉತ್ತಮವಾದ ಸ್ಥಳಗಳು ಎಂದು ಪರಿಗಣಿಸಿ, ಪ್ರಪಂಚದ 7 ಅದ್ಭುತಗಳು ಅಂದ್ರೆ 7 Wonders of World ಎಂದು ಹೆಸರಿಸಿದ್ದಾರೆ.
ನೀವು ಪ್ರಪಂಚದ 7 ಅದ್ಭುತಗಳ ಬಗ್ಗೆ ಕೇಳಿರುತ್ತಿರಾ. ಆದ್ರೆ ಕರ್ನಾಟಕದ 7 ಅದ್ಭುತಗಳ ಬಗ್ಗೆ ಎಂದಾದರು ಕೇಳಿದ್ದಿರ? ಅಥವಾ ಕರ್ನಾಟಕದ ಜನಪ್ರಸಿದ್ಧ ಪ್ರವಾಸೀ ಸ್ಥಾನಗಳ ಪಟ್ಟಿಗೆ ಯಾವ-ಯಾವ ಜಾಗಗಳು ಬರುತ್ತೆ ಗೊತ್ತಾ? ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ…
1. ಹಿರೇಬೆನಕಲ್ ರಾಕ್ ಗೋರಿಗಳು: ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 400 ಅಂತ್ಯಕ್ರಿಯೆಯ ಸ್ಮಾರಕಗಳನ್ನು ಹೊಂದಿರುವ ಇತಿಹಾಸಪೂರ್ವ ತಾಣವಿದು.
2. ಹಂಪಿ: ವಿಜಯನಗರ ಜಿಲ್ಲೆಯ ಪುರಾತನ ಅವಶೇಷಗಳು ಮತ್ತು ದೇವಾಲಯಗಳೊಂದಿಗೆ ಯುನೆಸ್ಕೋ ವಿಶ್ವ ಪರಂಪರೆಯ ತಾಣವಿದು.
3. ಗೋಲ್ ಗುಂಬಜ್: ಬಿಜಾಪುರದಲ್ಲಿ (ಈಗಿನ ವಿಜಯಪುರ) ವಿಶ್ವದ ಎರಡನೇ ಅತಿ ದೊಡ್ಡ ಗುಮ್ಮಟದೊಂದಿಗಿನ ಸಮಾಧಿ.
4. ಗೋಮಟೇಶ್ವರ ಪ್ರತಿಮೆ: ಶ್ರವಣಬೆಳಗೊಳದಲ್ಲಿ 57 ಅಡಿ ಎತ್ತರದ ಗೋಮಟೇಶ್ವರ ಮೂರ್ತಿ
5. ಮೈಸೂರು ಅರಮನೆ: ಇದನ್ನು ಕೆತ್ತಿದ್ದು ಮಹೋಗಾನಿ ಸೀಲಿಂಗ್ಗಳು, ಬಣ್ಣದ ಗಾಜು ಮತ್ತು ಗಿಲ್ಡೆಡ್ ಕಂಬಗಳನ್ನು ಹೊಂದಿರುವ ಮೈಸೂರಿನ ವಿಶ್ವಪ್ರಸಿದ್ಧ ಅರಮನೆ
6. ಜೋಗ ಜಲಪಾತ: ಶಿವಮೊಗ್ಗ ಜಿಲ್ಲೆಯಲ್ಲಿ 830 ಅಡಿ ಎತ್ತರದ ಜಲಪಾತ.
7. ನೇತ್ರಾಣಿ ದ್ವೀಪ: ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ ಅರೇಬಿಯನ್ ಸಮುದ್ರದಲ್ಲಿ ಹೃದಯ ಆಕಾರದ ದ್ವೀಪ