ನರಕ ಚತುರ್ದಶಿಯ ಈ ಕಥೆ ನೀವು ಕೇಳಿರಲು ಸಾಧ್ಯವಿಲ್ಲ..! ಈ ಆಚರಣೆ ಏಕೆ ಬಂತು ಗೊತ್ತಾ?

ನರಕ ಚತುರ್ದಶಿಯ ಈ ಕಥೆ ನೀವು ಕೇಳಿರಲು ಸಾಧ್ಯವಿಲ್ಲ..! ಈ ಆಚರಣೆ ಏಕೆ ಬಂತು ಗೊತ್ತಾ?

ದೀಪಗಳ ಹಬ್ಬ ದೀಪಾವಳಿಯ ಸಂಭ್ರಮದಲ್ಲಿದ್ದೇವೆ. ಹಿಂದೂಗಳಿಗೆ ಆತ್ಯಂತ ಮಹತ್ವದ, ಹೆಚ್ಚು ಆಧ್ಯಾತ್ಮಿಕ ಹಬ್ಬವೂ ಹೌದು. ದೀಪಗಳ ಮೂಲಕ ಜೀವನ ಬೆಳಗುವಂಯಗಲಿ, ಕತ್ತಲೆ ಕಳೆದು ಬೆಳಕು ಮೂಡಲಿ ಎಂಬ ಕಾರಣಕ್ಕೆ ಈ ದೀಪಾವಳಿ ಆಚರಿಸಲಾಗುತ್ತದೆ. ಅದರಲ್ಲೂ ನಾವು ದೀಪಾವಳಿ ಅಂದಾಕ್ಷಣ ಸಿಹಿ ತಿಂಡಿ, ಪಟಾಕಿಯನ್ನು ನೆನಪು ಮಾಡಿಕೊಳ್ಳಬಹುದು.

ಮನೆಯನ್ನ ದೀಪದಿಂದ ಅಲಂಕರಿಸುವುದರಿಂದ ಹಿಡಿದು ದೀಪಾವಳಿಯ ಒಂದೊಂದು ಪೂಜೆಗಳು ಕೂಡ ಒಂದೊಂದು ವಿಶೇಷತೆಗೆ ಕಾರಣವಾಗುತ್ತದೆ. ಹಾಗೆ ನರಕ ಚತುರ್ದಶಿಯಿಂದ ದೀಪಾವಳಿ ಆರಂಭಗೊಂಡು ಗೋಪೂಜೆ, ತುಳಸಿ ಪೂಜೆ ಮೂಲಕ ಕೊನೆಯಾಗುತ್ತದೆ. ಮೊದಲ ದಿನ ಲಕ್ಷ್ಮಿ ಪೂಜೆಯು ಅತ್ಯಂತ ವಿಶೇಷ ದಿನವಾಗಿ ಗುರುತಿಸಲ್ಪಟ್ಟಿದೆ.

ಹಿಂದೂ ದಂತ ಕತೆಯ ಪ್ರಕಾರ ಈ ದಿನದಂದು ಕೃಷ್ಣ ಪರಮಾತ್ಮ, ಕಾಳಿ ದೇವಿ, ಸತ್ಯಭಾಮ ದೇವತೆಗಳು ದುಷ್ಟ ನರಕಾಸುರನನ್ನು ಸೋಲಿಸಿ ವಿಜಯ ಸಾಧಿಸಿದ ದಿನದ ಆಚರಣೆಯೆ ಈ ನರಕ ಚತುರ್ದಶಿ ಎನ್ನಲಾಗುತ್ತದೆ. ಆದ್ರೆ ನಾವಿಂದು ಪುರಾಣಗಳಲ್ಲಿ ಹೇಳಲಾಗಿರುವ ನೀವು ಕೇಳಿರದಂತಹ ಒಂದು ವಿಭಿನ್ನ ಕಥೆ ಹೇಳುತ್ತೇವೆ ಕೇಳಿ.

ನರಕಾಸುರ ಎಂಬ ಒಬ್ಬ ದುಷ್ಟ ರಾಕ್ಷಸನಿದ್ದ. ಆತ ಹೆಣ್ಣು ಕುಲವನ್ನ ನಾಶ ಮಾಡುವಂತಹ ದುಷ್ಟ ಆಸೆಯನ್ನು ಹೊಂದಿದ್ದನಂತೆ. ಆತ ಕಣ್ಣಿಗೆ ಬಿದ್ದ ಹೆಣ್ಣು ಮಕ್ಕಳನ್ನು ಹೊತ್ತುತಂದು ತಾನಿದ್ದ ಕಡೆ ಕೂಡಿ ಹಾಕುತ್ತಿದ್ದ. ಆದ್ರೆ ಒಮ್ಮೆ ಈ ವಿಚಾರ ತಿಳಿಸದ ಸತ್ಯಭಾಮೆ ಆತನ ಮೇಲೆ ಯುದ್ಧಕ್ಕೆ ನಿಂತಳಂತೆ. ಸತ್ಯಭಾಮೆಯ ಬಲ ಅರಿಯದ ನರಕಾಸುರ ಯುದ್ಧ ಮಾಡಲು ನಿಂತಾಗ ಆತನಿಗೆ ಸೋಲಾಗುತ್ತದೆ. ಬಳಿಕ ಆತ ಕೂಡಿ ಹಾಕಿದ್ದ ಸುಮಾರು 16 ಸಾವಿರ ಹೆಣ್ಣುಮಕ್ಕಳನ್ನು ಆಕೆ ಕಾಪಾಡಿದಳು ಎಂಬ ಕಥೆ ಇದೆ.

ಆದ್ರೆ ಆ 16 ಸಾವಿರ ಹೆಣ್ಣು ಮಕ್ಕಳು ಹೊರಬಂದಾಗ ಸಮಸ್ಯೆಗಳ ಎದುರಿಸಿದರು. ಅವರು ಹಲವು ರೀತಿಯಲ್ಲಿ ಕೆಟ್ಟ ಮಾತುಗಳ ಕೇಳಬೇಕಾಯಿತು. ಅವರು ಮದುವೆಯಾಗದೆ ಉಳಿದರು. ಆದ್ರೆ ಸತ್ಯಭಾಮೆ ಕೊನೆಗೆ ಅವರೆಲ್ಲರು ತನ್ನ ಗಂಡ ಕೃಷ್ಣನನ್ನೇ ಗಂಡನನ್ನಾಗಿ ಸ್ವೀಕರಿಸಲಿ. ಯಾರೆ ಕೇಳಿದರು ನಾವು ಕೃಷ್ಣನ ಮಡದಿಯರೆಂದು ಉತ್ತರಿಸಲಿ ಎಂದಳು. ಹೀಗಾಗಿ ಕೃಷ್ಣನಿಗೆ 16 ಸಾವಿರ ಗೆಳತಿಯರು ಎಂಬ ಮಾತು ಚಾಲ್ತಿಗೆ ಬಂತು. ಹಾಗೆ ನರಕಾಸುರನ ಸಂಹಾರ ಮಾಡಿದ ದಿನವು ನರ್ಕ ಚತುರ್ದಶಿ ಎಂಬುದಾಗಿ ಆಚರಿಸಲ್ಪಟ್ಟಿತು. ಹಾಗೆ ದೇವಿ ಲಕ್ಷ್ಮಿಯನ್ನು ಪೂಜಿಸಲಾಯಿತು.

ಇನ್ನೊಂದು ಕಥೆಯಲ್ಲಿ ರಾಕ್ಷಸನಾದ ನರಕಾಸುರನು ಭೂಮಿತಾಯಿಯ ಮಗ. ಇವನು ಹಲವಾರು ರಾಜ್ಯಗಳನ್ನು ಆಳುತ್ತಿದ್ದನು. ಇವನ ಆಳ್ವಿಕೆಯಲ್ಲಿ ಅಧರ್ಮವೇ ತಾಂಡವವಾಡುತ್ತಿತ್ತು. ಭೂಮಿಯ ಮೇಲೆ ಅಸತ್ಯ, ದೌರ್ಜನ್ಯಕ್ಕೆ ಆತ ಸಾಕ್ಷಿಯಾಗಿದ್ದ. ಹಾಗೆ ಭೂಲೋಕ ಮಾತ್ರವಲ್ಲ ಸ್ವರ್ಗಲೋಕಕ್ಕೂ ಅಧಿಪತಿಯಾಗಬೇಕು ಎಂಬ ಆಸೆ ಹೊಂದಿದ್ದ. ಈ ಕಾರಣದಿಂದ ಯುದ್ಧಕ್ಕಾಗಿ ಸ್ವರ್ಗದ ಅಧಿಪತಿ ಇಂದ್ರ ದೇವನನ್ನು ಆಹ್ವಾನಿಸಿದ. ಆದ್ರೆ ಇಂದ್ರನಿಗೆ ಆತನ ಎದುರಿಸಲು ಸಾಧ್ಯವಾಗದೆ ವಿಷ್ಣುವಿನ ಸಹಾಯ ಕೇಳಿದ. ಆಗ ವಿಷ್ಣು ಕೃಷ್ಣಮ ಅವತಾರವೆತ್ತಿ ನರಕಾಸುರನ ಸಂಹಾರ ಮಾಡಿದ ಎಂಬ ಕಥೆ ಇದೆ. ಈ ದಿನ ನರಕ ಚತುರ್ದಶಿ ಎಂದು ಕರೆಯಲಾಯಿತು. ಇದು ಅಧರ್ಮದ ವಿರುದ್ಧ ಧರ್ಮದ ಜಯ ಎಂದು ಹೇಳಲಾಯಿತು.

Leave a Reply

Your email address will not be published. Required fields are marked *