ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ/ ನವೆಂಬರ್ 1 ರಂದು ಸಾಧಕರಿಗೆ ಸನ್ಮಾನ
ತುಮಕೂರು:- ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ 69 ಮಹನೀಯರಿಗೆ 2024ನೇ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ರಂಗಭೂಮಿ, ಜಾನಪದ, ಯಕ್ಷಗಾನ, ಪತ್ರಿಕೋದ್ಯಮ, ಸಂಗೀತ/ನೃತ್ಯ ಸಮಾಜ ಸೇವೆ. ಕ್ರೀಡೆ, ಸಾಹಿತ್ಯ, ಶಿಕ್ಷಣ, ಚಿತ್ರಕಲೆ/ಶಿಲ್ಪಕಲೆ, ಪರಿಸರ, ತಳಸಮುದಾಯದ ಸಂಘಟನೆ, ಕನ್ನಡಪರ ಸಂಘಟನೆ, ಛಾಯಾಗ್ರಹಣ, ಸಂಘ-ಸಂಸ್ಥೆ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಆಯಾ ಕ್ಷೇತ್ರದಲ್ಲಿ ಕನ್ನಡರಾಜ್ಯೋತ್ಸವವನ್ನು ನೀಡಲಾಗಿದೆ. ಜಿಲ್ಲಾಡಳಿತದಿಂದ ನವೆಂಬರ್ 1ರಂದು ಏರ್ಪಡಿಸಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಲಭಿಸಿರುವ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಗಿದೆ.
ರಂಗಭೂಮಿ ಕ್ಷೇತ್ರ:- ರಂಗಭೂಮಿ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ಲಕ್ಷ್ಮಿನಾರಾಯಣ್ ಯಾದವ್, ಕೆ.ಸಿ.ರಾಜಣ್ಣ, ಜಿ.ಎಲ್. ಮಹೇಶ್, ನಟರಾಜ್ ಹೊನ್ನವಳ್ಳಿ, ಜಿ.ತಿಮ್ಮಗಿರಿಗೌಡಯ್ಯ, ಎಸ್.ರಾಜಣ್ಣ, ರಾಜೇಶ್ವರಿ ಪಿ.ಆರ್., ರಾಜಣ್ಣ ಟಿ.ಪಿ., ಹೆಚ್.ಆರ್. ರಂಗಪ್ಪ, ಚಿಕ್ಕಪ್ಪಯ್ಯ, ರಾಮಕೃಷ್ಣಮೂರ್ತಿ, ರಂಗರಾಜು ಇವರಿಗೆ ಪ್ರಶಸ್ತಿ ಗರಿ ಲಭಿಸಿದೆ.
ಜಾನಪದ/ಯಕ್ಷಗಾನ:- ಜಾನಪದ/ಯಕ್ಷಗಾನ ಕ್ಷೇತ್ರದ ಸೇವೆಗಾಗಿ ಕದರಮ್ಮ, ಸಿ.ವಿ. ವೀರೇಶ್, ಎಂ.ಸಿ. ನರಸಿಂಹಮೂರ್ತಿ, ಎ.ಜಿ. ನಾಗರಾಜು, ಹುಚ್ಚಮ್ಮ, ಡಿ.ಸಿ. ಕುಮಾರ್ ಇವರಿಗೆ ಪ್ರಶಸ್ತಿ ಸಿಕ್ಕಿದೆ.
ಪತ್ರಿಕೋದ್ಯಮ ಕ್ಷೇತ್ರ:- ಪತ್ರಿಕೋದ್ಯಮದಲ್ಲಿನ ಸೇವೆಗಾಗಿ ಎಂ.ರಮೇಶ್, ಸಿ.ಟಿ. ಮೋಹನ್ರಾವ್, ಪರಮೇಶ್ ಹೆಚ್.ವಿ., ವೆಂಕಟಾಚಲ ಹೆಚ್.ವಿ., ಮಲ್ಲಿಕಾರ್ಜುನ ದುಂಡ, ಲೋಕೇಶ್, ಪಿ.ಎನ್. ಮಂಜುನಾಥ್ ಇವರಿಗೆ ಪ್ರಶಸ್ತಿ ಲಭಿಸಿದೆ.
ಸಂಗೀತ/ನೃತ್ಯ ಕ್ಷೇತ್ರ:- ಸಂಗೀತ ಮತ್ತು ನೃತ್ಯ ಕ್ಷೇತ್ರದಲ್ಲಿನ ಸಾಧನೆಯ ಹಿನ್ನೆಲೆಯಲ್ಲಿ ಜಿ.ಎಸ್.ಶ್ರೀಧರ, ವಿದೂಷಿ ವಾಣಿ ಸತೀಶ್, ಟಿ.ಜಿ. ಲೋಕೇಶ್ ಬಾಬು ಅವರಿಗೆ ಪ್ರಶಸ್ತಿ ಸಿಕ್ಕಿದೆ.
ಸಮಾಜ ಸೇವೆ:- ಸಮಾಜ ಸೇವೆ ಹಿನ್ನೆಲೆಯಲ್ಲಿ ಗಾಯಿತ್ರಿ ನಾರಾಯಣ್, ಎ.ಆರ್.ರೇಣುಕಾನಂದ, ಡಾ.ಮುಕುಂದ ಎಲ್., ಡಾ.ನಾಗಭೂಷಣ್, ವಿರೂಪಾಕ್ಷ ಡ್ಯಾಗೇರಹಳ್ಳಿ, ಎನ್.ಎಸ್.ಪಂಡಿತ್ ಜವಹರ್, ಆಶಾ ಕೆ.ಎಸ್., ರಂಗಸ್ವಾಮಿ ಅವರಿಗೆ ಪ್ರಶಸ್ತಿ ಲಭಿಸಿದೆ.
ಕ್ರೀಡೆ ಮತ್ತು ಸಾಹಿತ್ಯ ಸೇವೆ:- ಕ್ರೀಡೆ ಕ್ಷೇತ್ರದ ಸಾಧನೆಗೆ ಲೆಪ್ಟಿನೆಂಟ್ ಪ್ರದೀಪ್ ಎಸ್., ಮಹೇಶ್ ಬಿ.ಆರ್., ರುದ್ರೇಶ್ ಕೆ.ಆರ್. ಅವರಿಗೆ ಪ್ರಶಸ್ತಿ ಗರಿ ಸಂದಿದೆ. ಅಂತೆಯೇ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗೆ ಗಂಗಾಧರಯ್ಯ ಎಸ್., ಡಾ.ಕರೀಗೌಡ ಬೀಚನಹಳ್ಳಿ, ತುಂಬಾಡಿ ರಾಮಯ್ಯ, ಮಿರ್ಜಾ ಬಷೀರ್, ವೈ.ನರೇಶ್ ಬಾಬು, ಸಣ್ಣರಂಗಯ್ಯ ಅವರಿಗೆ ಪ್ರಶಸ್ತಿ ಸಿಕ್ಕಿದೆ.
ಶಿಕ್ಷಣ ಕ್ಷೇತ್ರ:- ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಪ್ರೊ.ಕೆ. ಜಯರಾಮ್, ಕರಿಯ ನಾಯ್ಕ, ಶ್ರೀನಿವಾಸಮೂರ್ತಿ, ಪ್ರೊ.ಟಿ.ಆರ್. ಲೀಲಾವತಿ, ಎನ್.ಬಿ. ಪ್ರದೀಪ್ ಕುಮಾರ್, ಪುಟ್ಟರಂಗಪ್ಪ ಅವರಿಗೆ ಲಭಿಸಿದೆ.
ಉಳಿದಂತೆ ಚಿತ್ರಕಲೆ ಹಾಗೂ ಶಿಲ್ಪಕಲೆಯ ವಿಭಾಗದಲ್ಲಿ ಎಂ.ಎಸ್. ಶಿವರುದ್ರಯ್ಯ, ವಿಷ್ಣುಕುಮಾರ್, ರವೀಶ್ ಕೆ.ಎಂ.,; ಕೃಷಿ ಮತ್ತು ಸಾವಯವ ಕೃಷಿ ಕ್ಷೇತ್ರದ ವಿಭಾಗದಲ್ಲಿ ಅರುಣಾ, ಸಿದ್ದಲಿಂಗಪ್ಪ ಹೊಲತಾಳು,; ಪರಿಸರ ವಿಭಾಗದಲ್ಲಿ ಬಿ.ವಿ. ಗುಂಡಪ್ಪ; ತಳಸಮುದಾಯದ ಸಂಘಟನೆ ವಿಭಾಗದಲ್ಲಿ ಹಂದಿಜೋಗಿ ರಾಜಪ್ಪ, ವೆಂಕಟೇಶಯ್ಯ, ಶಾಂತರಾಜು; ಕನ್ನಡಪರ ಸಂಘಟನೆ ವಿಭಾಗದಲ್ಲಿ ಟಿ.ಎಂ. ಮಹೇಶ್ಕುಮಾರ್, ಸಿ.ಬಿ. ರೇಣುಕಾಸ್ವಾಮಿ, ದೊಡ್ಡಯ್ಯ ಸಿ., ರಾಜೇಶ್ ಈ., ರಾಜೇಶ್ ಜಿ.ಎಲ್., ಕನ್ನಡ ಪ್ರಕಾಶ್; ಛಾಯಾಗ್ರಹಣ ಕ್ಷೇತ್ರದಲ್ಲಿ ಎನ್.ವೆಂಕಟೇಶ್ ಹಾಗೂ ಸಂಘ-ಸಂಸ್ಥೆಯ ವಿಭಾಗದಲ್ಲಿ ಕರ್ನಾಟಕ ಲೇಖಕಿಯರ ಸಂಘ ಆಯ್ಕೆಯಾಗಿದೆ.