ರೋರಿಂಗ್ ಸ್ಟಾರ್ ಶ್ರೀಮುರಳಿ ಮೂರು ವರ್ಷ ಕಾದಿದ್ದಕ್ಕೂ ಒಳ್ಳೆಯ ರಿಸಲ್ಟ್ ಸಿಕ್ಕಿದೆ. ಬೆಳಕಿನ ಹಬ್ಬ ದೀಪಾವಳಿಗೆ ಬೇರೆ ಭಾಷೆಯಲ್ಲೂ ಸಿನಿಮಾಗಳು ರಿಲೀಸ್ ಆಗಿದ್ದವು. ‘ಬಘೀರ’ ಕೂಡ ದೀಪಾವಳಿ ಹಬ್ಬದ ಹಿನ್ನಲೆ ರಿಲೀಸ್ ಆಗಿತ್ತು. ಎಲ್ಲ ಸಿನಿಮಾಗಳ ಮಧ್ಯ ‘ಬಘೀರ’ನದ್ದೆ ಹವಾ. ಕರ್ನಾಟಕದಲ್ಲಿ ಈ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ‘ಬಘೀರ’ ಸಿನಿಮಾಗೆ ಕರ್ನಾಟಕದ ಬಹುತೇಕ ಚಿತ್ರಮಂದಿರಗಳಲ್ಲಿ ಪಾಸಿಟಿವ್ ರೆಸಲ್ಟ್ ಸಿಗುತ್ತಿದೆ. ನಾಲ್ಕು ದಿನಗಳ ರಜೆಯನ್ನು ಈ ಸಿನಿಮಾ ಸರಿಯಾಗಿ ಬಳಸಿಕೊಂಡಿದ್ದು, ಬಾಕ್ಸಾಫೀಸ್ನಲ್ಲಿ ಒಂದೊಳ್ಳೆ ಮೊತ್ತವನ್ನು ಕಲೆ ಹಾಕಿದೆ. ಶ್ರೀಮುರಳಿ ಅವರು ಭರಾಟೆ ಸಿನಿಮಾದ ನಂತರ ಈ ಸಿನಿಮಾದಲ್ಲಿ ನಟಿಸಿದ್ದು, ಸರಿಸುಮಾರು 4 ವರ್ಷದ ನಂತರ ಅವರ ಸಿನಿಮಾ ತೆರೆ ಕಂಡರೂ ಸಕ್ಸಸ್ ಕಂಡಿದೆ. 4ನೇ ದಿನವೂ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದ್ದು, ಇಂಡಸ್ಟ್ರೀ ಟ್ರ್ಯಾಕರ್ sacnilk ಪ್ರಕಾರ, 3.15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿತರಕರ ವಲಯದಲ್ಲೂ 3.50 ಕೋಟಿ ರೂಪಾಯಿ ಕಲೆಕ್ಷನ್ ಆಗಿರುವ ಬಗ್ಗೆ ಲೆಕ್ಕ ಹಾಕಲಾಗಿದೆ. ಇನ್ನು ನಾಲ್ಕು ದಿನಗಳು ಕೂಡ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಒಟ್ಟು 4 ದಿನಗಳು ಅಂದ್ರೆ ಸಿನಿಮಾ ರಿಲಿಸ್ ಆದ ದಿನದಿಂದ ಇಲ್ಲಿಯವರೆಗೆ 13 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ‘ಬಘೀರ’ 4 ದಿನಗಳ ಕಲೆಕ್ಷನ್ ಹೀಗಿದೆ : ಮೊದಲ ದಿನ 3.25 ಕೋಟಿ ರೂ., ಎರಡನೇ ದಿನ 3.30 ಕೋಟಿ ರೂ., ಮೂರನೇ ದಿನ 3.50 ಕೋಟಿ ರೂ., ನಾಲ್ಕನೇ ದಿನ 3.15 ಕೋಟಿ ರೂ. ಒಟ್ಟು 13.15 ಕೋಟಿ ರೂ.
Related Posts
ಗಬ್ಬೆದ್ದು ನಾರುತ್ತಿರುವ ನಿಮ್ಮ ಶಾಸಕನ ಬಾಯಿ ಶುದ್ಧ ಮಾಡಿ: ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಪ್ರತಿ ಸಾರಿ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಭಾಷಣ ಬಿಗಿಯುವ ಬಿಜೆಪಿ ನಾಯಕರೇ, ಗಬ್ಬೆದ್ದು ನಾರುತ್ತಿರುವ ನಿಮ್ಮ ಶಾಸಕ ಮುನಿರತ್ನ ಅವರ ಬಾಯಿಯನ್ನು ಶುದ್ಧ ಮಾಡಿ…
ತುಮಕೂರಿನಲ್ಲಿಯೇ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಕನಸು ನನಸಾಗುವುದೇ? ಮರೆಯಾಗುವುದೇ?
pavitraತುಮಕೂರು:- ಬೆಂಗಳೂರಿಗೆ ಪರ್ಯಾಯವಾಗಿ ಬೆಳವಣಿಗೆ ಹೊಂದುತ್ತಿರುವ ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿಯೇ ರಾಜ್ಯದ ಬೆಂಗಳೂರಿನ ಎರಡನೇ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಈಗ ಸಾಕಷ್ಟು ಚರ್ಚೆಯಲ್ಲಿರುವ…
ಚಿತ್ರಹಿಂಸೆಗೆ ಒಳಗಾದವರ ಬೆಂಬಲಕ್ಕಾಗಿ, ಚಿತ್ರಹಿಂಸೆ ಈಗಲೇ ಕೊನೆಗೊಳಿಸಿ
ಚಿತ್ರಹಿಂಸೆ ಎಂದರೆ, ಯಾರನ್ನಾದರೂ ಶಿಕ್ಷಿಸುವ ಮತ್ತು ಅವರನ್ನು ನೋಯಿಸುವ ನೀಚ ಕ್ರಿಯೆಯಾಗಿದೆ. ಮಾನವ ಹಕ್ಕುಗಳ ನ್ಯಾಯಾಲಯದ ಪ್ರಕಾರ, ಚಿತ್ರಹಿಂಸೆಯು ಉದ್ದೇಶಪೂರ್ವಕ ಅಮಾನವೀಯ ಕೃತ್ಯವಾಗಿದ್ದು, ಅದು ಅತ್ಯಂತ ಗಂಭೀರ…