ಆನೆಗಳು ಸಂರಕ್ಷಿಸದಿದ್ದರೆ ಡೈನೋಸಾರ್ಗಳಂತೆ ಶೀಘ್ರದಲ್ಲೇ ನಾಶವಾಗುತ್ತವೆ. ಭವಿಷ್ಯದಲ್ಲಿ ನಮ್ಮ ಮುಂದಿನ ಪೀಳಿಗೆಗಳು ಅವುಗಳನ್ನು ವಸ್ತುಸಂಗ್ರಹಾಲಯಗಳಲ್ಲಿ ನೋಡಬೇಕಾಗಬಹುದು ಎಂದು ಕೇರಳ ಹೈಕೋರ್ಟ್ ಮಂಗಳವಾರ ವಿಷಾದ ವ್ಯಕ್ತಪಡಿಸಿದೆ.
“ಇನ್ ರಿ ಕ್ಯಾಪ್ಟಿವ್ ಎಲಿಫೆಂಟ್ಸ್ ವಿ ಯೂನಿಯನ್ ಆಫ್ ಇಂಡಿಯಾ” ಮತ್ತು ಸಂಬOಧಿತ ಪ್ರಕರಣಗಳ ಕುರಿತು ಹೇಳಿರುವ ಕೇರಳ ಹೈಕೋರ್ಟ್ ಸೆರೆಯಲ್ಲಿರುವ ಆನೆಗಳು ಸಾವನ್ನಪ್ಪಿರುವುದನ್ನು ನ್ಯಾಯಾಲಯ ಎತ್ತಿ ತೋರಿಸಿದೆ. ನ್ಯಾಯಮೂರ್ತಿಗಳಾದ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ಗೋಪಿನಾಥ್ ಪಿ. ಅವರ ವಿಭಾಗೀಯ ಪೀಠವು ಸೆರೆಯಲ್ಲಿರುವ ಆನೆಗಳ ಮರಣವನ್ನು ಎತ್ತಿ ತೋರಿಸಿದೆ ಮತ್ತು ಉತ್ಸವಗಳು ಮತ್ತು ಮೆರವಣಿಗೆಗಳ ಸಮಯದಲ್ಲಿ ಆನೆಗಳ ಮೇಲೆ ಕ್ರೌರ್ಯವನ್ನು ಉಂಟುಮಾಡುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತು.
“ಸೆರೆಯಲ್ಲಿರುವ ೬೦೦ ಆನೆಗಳಲ್ಲಿ, ಕನಿಷ್ಠ 154 ಆನೆಗಳು ಸಾವನ್ನಪ್ಪಿವೆ. 25 ರಿಂದ 30 ಪ್ರತಿಶತದಷ್ಟು ಸಾವುಗಳು ಸಂಭವಿಸಿವೆ. ಇದು ಮುಂದುವರಿದರೆ, ಮುಂದಿನ ಪೀಳಿಗೆಯು ಈ ಪ್ರಾಣಿಗಳನ್ನು ಇಂದು ನೀವು ಡೈನೋಸಾರ್ಗಳನ್ನು ಹೇಗೆ ನೋಡುತ್ತಿದ್ದೇವೆಯೋ ಹಾಗೆ ವಸ್ತುಸಂಗ್ರಹಾಲಯಗಳಲ್ಲಿ ಮಾತ್ರ ನೋಡಬೇಕಾಗುತ್ತದೆ. ಇದನ್ನು ಪ್ರತಿಪಾದಿಸುವವರಿಗೆ ಸಂಪ್ರದಾಯದ ಹೆಸರಿನಲ್ಲಿ ಇದನ್ನು ಮಾಡಲಾಗಿದೆ, ದಯವಿಟ್ಟು ಇದನ್ನು ನೆನಪಿಡಿ, ”ಎಂದು ನ್ಯಾಯಮೂರ್ತಿ ಗೋಪಿನಾಥ್ ಹೇಳಿದರು.
ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಆನೆಗಳನ್ನು ಬಳಸಿಕೊಂಡು ನಡೆಸುವ ಮೆರವಣಿಗೆ ಮುಂತಾದ ಆಚರಣೆಗಳು ನಿಜವಾದ ಸಾಂಸ್ಕೃತಿಕ ಅಥವಾ ಧಾರ್ಮಿಕ ಸಂಪ್ರದಾಯಗಳಿಗಿOತ ಹೆಚ್ಚಾಗಿ ವಾಣಿಜ್ಯ ಉದ್ದೇಶಗಳಿಗಾಗಿ ಉಪಯೋಗಿಸಲಾಗುತ್ತಿದೆ, ಎಂದು ಪೀಠವು ಟೀಕಿಸಿದೆ. ಪ್ರಾಣಿ ಹಿಂಸೆಯನ್ನು ತಡೆಗಟ್ಟುವ ಉದ್ದೇಶದಿಂದ ಜುಲೈ 2021 ರಲ್ಲಿ ಪ್ರಾರಂಭಿಸಲಾದ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಪಿಐಎಲ್ ಮೂಲಕ ಪೀಠವು ಈ ಸಮಸ್ಯೆಯನ್ನು ಮೇಲ್ವಿಚಾರಣೆ ಮಾಡುತ್ತಿದೆ.
ಹಿಂದಿನ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು ಆನೆಗಳ ಮಾಲೀಕರು, ಎನ್ಜಿಒಗಳು ಮತ್ತು ದೇವಾಲಯ ಸಮಿತಿಗಳು ಸೇರಿದಂತೆ ಮಧ್ಯಸ್ಥರಿಗೆ ಸರ್ಕಾರದ ನಿಯಮಗಳನ್ನು ಜಾರಿಗೆ ತರುವವರೆಗೆ ಆನೆಗಳ ಮೇಲಿನ ಕ್ರೌರ್ಯವನ್ನು ತಡೆಯಲು ನ್ಯಾಯಾಂಗ ಆದೇಶದಂತೆ ಹೊರಡಿಸಬಹುದಾದ ಮಾರ್ಗಸೂಚಿಗಳನ್ನು ಸೂಚಿಸುವಂತೆ ಕೇಳಿತ್ತು.
ಅದರಂತೆಯೇ ಅಮಿಕಸ್ ಕ್ಯೂರಿ ಆನೆಗಳನ್ನು ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಬಳಸಬೇಕೇ ಹೊರತು ಯಾವುದೇ ಖಾಸಗಿ ಕಾರ್ಯಕ್ರಮಗಳು, ಸಭೆಗಳು ಅಥವಾ ಉದ್ಘಾಟನೆಗಳಿಗೆ ಬಳಸದಂತೆ ಶಿಫಾರಸು ಮಾಡುವ ವರದಿಯನ್ನು ಸಲ್ಲಿಸಿದೆ. ಪ್ರಮುಖ ಮಾರ್ಗಸೂಚಿಗಳು ಅತಿಯಾದ ಕೆಲಸವನ್ನು ಕಡಿಮೆ ಮಾಡಲು ಮೆರವಣಿಗೆಗಳ ನಡುವೆ ಕಡ್ಡಾಯವಾಗಿ 24 ಗಂಟೆಗಳ ವಿಶ್ರಾಂತಿ ಮತ್ತು ವಾಹನದ ಮೂಲಕ 100 ಕಿಲೋಮೀಟರ್ಗಳ ಸಾರಿಗೆ ಮಿತಿ ಅಥವಾ ಬಳಲಿಕೆಯನ್ನು ತಡೆಗಟ್ಟಲು ದಿನಕ್ಕೆ 30 ಕಿಲೋಮೀಟರ್ ಕಾಲ್ನಡಿಗೆಯನ್ನು ಒಳಗೊಂಡಿರುತ್ತದೆ.
ಆಕ್ರಮಣಶೀಲತೆಯನ್ನು ಕಡಿಮೆ ಮಾಡಲು ಆನೆಗಳ ನಡುವೆ ಕನಿಷ್ಠ ಮೂರು ಮೀಟರ್ ಅಂತರವನ್ನು ಕಾಯ್ದುಕೊಳ್ಳುವಂತೆ ವರದಿಯು ಸೂಚಿಸಿದೆ ಮತ್ತು ಅನಗತ್ಯ ಒತ್ತಡವನ್ನು ಉಂಟುಮಾಡುವ ಕಾರಣದಿಂದ ದಂತವನ್ನು ಬೆಳೆಸುವ ಸ್ಪರ್ಧೆಗಳು ಮತ್ತು ಹೂವಿನ ಮಳೆಯಂತಹ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
ವಯಸ್ಸಿಗೆ ಸಂಬOಧಿಸಿದ ಆರೋಗ್ಯ ಕಾಳಜಿಗಳನ್ನು ಪರಿಗಣಿಸಿ 65 ವರ್ಷ ಮೇಲ್ಪಟ್ಟ ಆನೆಗಳಿಗೆ ಮೆರವಣಿಗೆಯಿಂದ ವಿನಾಯಿತಿ ನೀಡುವಂತೆ ಶಿಫಾರಸು ಮಾಡಲಾಗಿದೆ. ಹೆಚ್ಚುವರಿಯಾಗಿ, ಸಾರ್ವಜನಿಕ ಸುರಕ್ಷತಾ ಕ್ರಮಗಳು ಸೇರಿದಂತೆ ಕೆಲವು ಇತರ ಮಾರ್ಗಸೂಚಿಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಚಾರಣೆಯ ವೇಳೆ, ರಾಜ್ಯಕ್ಕೆ ಹೊಸ ಆನೆಗಳನ್ನು ಕರೆತರುವ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿತು.
“ನಾವು ಕೇರಳ ರಾಜ್ಯವನ್ನು ಆನೆ ಸ್ನೇಹಿಯನ್ನಾಗಿ ಮಾಡದ ಹೊರತು, ಯಾವುದೇ ಹೊಸ ಆನೆಯನ್ನು ತರುವ ಪ್ರಶ್ನೆಯೇ ಇಲ್ಲ. ಜನರು ಆನೆಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ನಮಗೆ ಮನವರಿಕೆಯಾಗದ ಹೊರತು, ನಾವು ಯಾವುದೇ ಹೊಸ ಆನೆಗಳನ್ನು ಇಲ್ಲಿಗೆ ತರಿಸಲು ಬಿಡುವುದಿಲ್ಲ” ಎಂದು ನ್ಯಾಯಮೂರ್ತಿ ನಂಬಿಯಾರ್ ಟೀಕಿಸಿದರು.
“ಮಾರ್ಗಸೂಚಿಗಳು ಪ್ರಸ್ತುತ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ಮಾತ್ರ ತಿಳಿಸುತ್ತವೆ. ಆದ್ದರಿಂದ, ಅಗತ್ಯ ಧಾರ್ಮಿಕ ಆಚರಣೆಯು ಕ್ರೌರ್ಯವನ್ನು ಉಂಟುಮಾಡುತ್ತಿದ್ದರೆ, ಅದನ್ನು ನಿರ್ಲಕ್ಷಿಸಲಾಗುವುದಿಲ್ಲ, ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವುದನ್ನು ಖಚಿತಪಡಿಸಿಕೊಳ್ಳಲು ಮಾರ್ಗಸೂಚಿಗಳು ಕನಿಷ್ಠವಾಗಿ ಕಾರ್ಯನಿರ್ವಹಿಸುತ್ತವೆ” ಎಂದು ನ್ಯಾಯಮೂರ್ತಿ ನಂಬಿಯಾರ್ ಹೇಳಿದರು.