ಬೆಂಗಳೂರು : ಉದ್ಯಾನ ನಗರಿಯ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ)ಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಲ್ಲಿ ‘ಮಲ್ಲಿಗೆ’ (ಕಾರಿಡಾರ್-2) ಬೆನ್ನಿಗಾನಹಳ್ಳಿ-ಮತ್ತಿಕೆರೆ ನಡುವೆ ಸಂಪರ್ಕ ಕಲ್ಪಿಸಲಿದ್ದು, ಈ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂಉಪ ನಗರ ರೈಲು ಯೋಜನೆ ಸೌಲಭ್ಯ ಸಿಗಲಿದೆ. ಈ ಮಾರ್ಗದ ಕುರಿತು ಅಪ್‌ಡೇಟ್ ಒಂದಿದೆ.
‘ಮಲ್ಲಿಗೆ’ ಕಾರಿಡಾರ್‌ನ ರೈಲು ನಿಲ್ದಾಣಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿತ್ತು. ಹೈದರಾಬಾದ್ ಮೂಲದ ಎನ್‌ಸಿಸಿ ಲಿಮಿಟೆಡ್ ಕಡಿಮೆ ವೆಚ್ಚದ ಟೆಡರ್ ಸಲ್ಲಿಕೆ ಮಾಡಿದ ಕಂಪನಿಯಾಗಿದೆ. ಮಾಹಿತಿಗಳ ಪ್ರಕಾರ ಲಿಮಿಟೆಡ್ 556 ಕೋಟಿ ರೂ. ಮೊತ್ತದ ಬಿಡ್ ಸಲ್ಲಿಸಿದೆ.
ನಿಲ್ದಾಣಗಳು: ‘ಮಲ್ಲಿಗೆ’ ಕಾರಿಡಾರ್ ಒಟ್ಟು 24 ಕಿ. ಮೀ. ಜಾಲವನ್ನು ಹೊಂದಿದೆ. ಇದರಲ್ಲಿ 14 ನಿಲ್ದಾಣಗಳಿವೆ. ಬೆನ್ನಿಗಾನಹಳ್ಳಿ, ಕಸ್ತೂರಿ ನಗರ, ಸೇವಾ ನಗರ, ಬಾಣಸವಾಡಿ, ನಾಗವಾರ, ಕನಕ ನಗರ, ಹೆಬ್ಬಾಳ, ಮತ್ತಿಕೆರೆ ನಿಲ್ದಾಣಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿತ್ತು. ಪ್ರವೇಶ ಮತ್ತು ನಿರ್ಗಮನ ದ್ವಾರ ರಚನೆ, ಮೇಲ್ಸೇತುವೆ ನಿರ್ಮಾಣ, ಒಳ ಚರಂಡಿ ವ್ಯವಸ್ಥೆ ಸೇರಿದಂತೆ ವಿವಿಧ ಕಾಮಗಾರಿಗಳು ಇದರಲ್ಲಿ ಸೇರಿದ್ದವು.
ಈ ಯೋಜನೆ ಅನುಷ್ಠಾನಗೊಳಿಸುತ್ತಿರುವ ಕೆ-ರೈಡ್ ಒಟ್ಟು ಎರಡು ಪ್ಯಾಕೇಜ್‌ಗಳಲ್ಲಿ ಯೋಜನೆಯ ಟೆಂಡರ್ ಕರೆಯಲಿದೆ. ಬೆನ್ನಿಗಾನಹಳ್ಳಿ-ಮತ್ತಿಕೆರೆ ಮತ್ತು ಯಶವಂತಪುರ-ಚಿಕ್ಕಬಾಣಾವರ ಎಂದು ಯೋಜನೆಯನ್ನು ವಿಭಾಗಿಸಲಾಗಿದೆ. ಯಶವಂತಪುರ-ಚಿಕ್ಕಬಾಣಾವರದ ಟೆಂಡರ್ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ