ಸರಣಿ ಅಪಘಾತ ಬೆಂಗಳೂರಿನಲ್ಲಿ ಎರಡು ಸಾವು

ಸರಣಿ ಅಪಘಾತ ಬೆಂಗಳೂರಿನಲ್ಲಿ ಎರಡು ಸಾವು

ಸರಣಿ ಆಕ್ಟಿಡೆಂಟ್ ಬೆಂಗಳೂರಿನ ಏರ್‌ಪೋರ್ಟ್ ರಸ್ತೆಯಲ್ಲಿ ಬಿಎಂಟಿಸಿ ಬಸ್, ಟ್ರಕ್ ಮತ್ತು ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿದೆ. ಬೆಂಗಳೂರಿನ ಏರ್‌ಪೋರ್ಟ್ ರಸ್ತೆಯಲ್ಲಿ ನಡೆದ ವಾಹನಗಳ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸಿಮೆಂಟ್ ಲಾರಿ, ಕಾರು ಮತ್ತು ಬಿಎಂಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಸೋಮವಾರ ತಡರಾತ್ರಿ ವಾಹನಗಳ ಅಪಘಾತ ಸಂಭವಿಸಿದ್ದು, ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಮತ್ತು ಹಲವರಿಗೆ ಗಾಯಗಳಾಗಿವೆ.

ಯಲಹಂಕ ಮೇಲ್ಸೇತುವೆ ಬಳಿ ಈ ಘಟನೆ ನಡೆದಿದ್ದು, ಚೈನ್ ಡಿಕ್ಕಿಯಿಂದ ಸಂಚಾರ ಹದಗೆಟ್ಟಿದೆ. ಮೃತರನ್ನು ೪೨ ವರ್ಷದ ಟ್ರಕ್ ಚಾಲಕ ಕುಲದೀಪ್ ಮತ್ತು ೪೦ ವರ್ಷದ ಇನ್ನೋವಾ ಕಾರು ಚಾಲಕ ಜಗದೀಶ್ ಎಂದು ಗುರುತಿಸಲಾಗಿದೆ. ಸಿಮೆಂಟ್ ಲಾರಿಯೊಂದು ಅತಿವೇಗದಲ್ಲಿ ಫ್ಲೈಓವರ್ ಬಳಿ ಬಂದು ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಅಪಘಾತÀವಾಗಿದೆ. ಡಿಕ್ಕಿಯ ನಂತರ ಇಬ್ಬರೂ ಚಾಲಕರು ತಮ್ಮ ವಾಹನಗಳನ್ನು ನಿಲ್ಲಿಸಿ ರಸ್ತೆಯಲ್ಲೇ ತೀವ್ರ ವಾಗ್ವಾದ ನಡೆಸುತಿದ್ದಾಗ, ವಿಮಾನ ನಿಲ್ದಾಣದ ರಸ್ತೆಯಲ್ಲಿ ಸಾಗುತ್ತಿದ್ದ ಬಿಎಂಟಿಸಿ ವೋಲ್ವೋ ಬಸ್ ನಿಲ್ಲಿಸಿದ್ದ ವಾಹನಗಳ ಬಳಿಗೆ ಬಂದರೂ ಸಕಾಲದಲ್ಲಿ ಬ್ರೇಕ್ ಹಾಕಲು ಸಾಧ್ಯವಾಗದೆ ಸಿಮೆಂಟ್ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ಬಲವು ಪ್ರಯಾಣಿಕರಲ್ಲಿ ತೀವ್ರ ಗಾಯಗಳಿಗೆ ಕಾರಣವಾಯಿತು. ಅವರಲ್ಲಿ ಕೆಲವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಯಲಹಂಕ ಸಂಚಾರ ಪೊಲೀಸರು ಅಪಘಾತದ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಹೆಚ್ಚಿನ ವಿವರಗಳನ್ನು ನಿರ್ಧರಿಸಲು ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ಈಶಾನ್ಯ ಬೆಂಗಳೂರಿನ ಉಪ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *