Rani Chennamma Express Train: ಡೀಸೆಲ್ ಇಂಜಿನ್‌ನೊಂದಿಗೆ ಕೊನೆಯ ಬಾರಿ ಸಂಚರಿಸಿದ ರೈಲು

Rani Chennamma Express Train: ಡೀಸೆಲ್ ಇಂಜಿನ್ನೊಂದಿಗೆ ಕೊನೆಯ ಬಾರಿ ಸಂಚರಿಸಿದ ರೈಲು

ಬೆಂಗಳೂರು, ನವೆಂಬರ್ 12: ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ದಶಕಗಳಿಂದ ದಕ್ಷಿಣದ ಕರ್ನಾಟಕ ಬೆಂಗಳೂರಿನಿಂದ ಉತ್ತರ ಕರ್ನಾಟಕ ಮಾರ್ಗವಾಗಿ ಮಹಾರಾಷ್ಟ್ರ ತಲುಪುತ್ತಿದ್ದ ಫೇಮಸ್ ರೈಲಾಗಿದ್ದ ‘ರಾನಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲು’ (Rani Chennamma Express Train 16589) ತನ್ನ ಕೊನೆಯ ಪ್ರಯಾಣ ಮುಗಿಸಿದೆ. ಬೆಳಗಾವಿಯಲ್ಲಿ ನವೆಂಬರ್ 11ರಂದು ಕೊನೆಯದಾಗಿ ಸಂಚರಿಸಿದೆ ಎಂದು ರೈಲ್ವೆ ಮೂಲಗಳು ತಿಳಿಸಿದೆ.

ಈ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲು ಕೆಸ್‌ಆರ್ ಬೆಂಗಳೂರು ನಿಲ್ದಾಣದಿಂದ ತುಮಕೂರು, ಅರಸಿಕೆರೆ, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಮಿರಜ್, ಸಾಂಗ್ಲಿಗೆ ನಿತ್ಯ ಒಡಾಡುವ ರೈಲಾಗಿತ್ತು. ಈ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದ ಪ್ರಯಾಣಿಕರ ಪ್ರಯಾಣದ ಅವಿಭಾಜ್ಯ ಅಂಗವೇ ಆಗಿತ್ತು 1995 ರ ಆಗಸ್ಟ್ 15ರಂದು ತನ್ನ ಮೊದಲೇ ಸೇವೆ ನೀಡಿದ್ದ ಈ ರಾಣಿಚೆನ್ನಮ್ಮ ರೈಲು ಸದ್ಯ ಡೀಸೆಲ್ ಇಂಜಿನ್ ಸಹಿತ ಕೊನೆಯ ಪ್ರಯಾಣವನ್ನು ಮುಗಿಸಿದೆ. ಇಂದು ನವೆಂಬರ್ 12ರಿಂದ ಈ ರೈಲು ವಿದ್ಯುತ್ ಸಹಿತ ಸಂಚಾರಗೊಳ್ಳಲಿದೆ. ಈ ಮೂಲಕ ಹಳೆಯ ಡೀಸೆಲ್ ಪದ್ಧತಿಯಿಂದ ವಿದ್ಯುತ್ ಚಾಲಿತ ರೈಲಾಗಿ ಬದಲಾಗಲಿದೆ.

Leave a Reply

Your email address will not be published. Required fields are marked *