ಪಂಚೇಂದ್ರಿಯಗಳಲ್ಲಿ ಒಂದಾದ ಮೂಗು ಸುವಾಸನೆಯನ್ನು ಗ್ರಹಿಸುತ್ತದೆ. ಕೆಲವೊಮ್ಮೆ ನಮ್ಮ ಮೂಗಿಗೆ ಯಾವುದೇ ರೀತಿಯ ಪರಿಮಳ ಬರುವುದಿಲ್ಲ. ಹಾಗಂತ ಇದು ಇವತ್ತು ನಾಳೆ ಸರಿ ಹೋಗುತ್ತೆ ಅಂತ ಕೂರಬೇಡಿ. ಮೂಗಿನಿಂದ ವಾಸನೆಯನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ ಎನ್ನುವುದಕ್ಕೆ ಹಲವಾರು ರೀತಿಯ ಕಾರಣಗಳಿರುತ್ತವೆ. ಸಾಮಾನ್ಯವಾಗಿ ಒಂದು ನಿರ್ದಿಷ್ಟ ಕಾಯಿಲೆಯಿಂದಾಗಿ ಕೆಲವರು ಯಾವುದೇ ರೀತಿಯ ವಾಸನೆ ಅಥವಾ ಪರಿಮಳವನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ನೋಡುವುದಾದರೆ ಶೀತವಾದಾಗ ಮೂಗು ಕಟ್ಟಿಕೊಳ್ಳುವುದರಿಂದ ಹಿಡಿದು ಕೋವಿಡ್ ಸಮಯದಲ್ಲಿ ಜನರು ಯಾವುದರ ವಾಸನೆ ಗ್ರಹಿಸಲು ಆಗದಿರುವಂತಹ ರೋಗಲಕ್ಷಣಗಳನ್ನು ನೋಡಿದ್ದೀವಿ.. ಒಂದು ಸಂಶೋಧನೆಯ ಪ್ರಕಾರ ಮನುಷ್ಯರು 139 ವೈದ್ಯಕೀಯ ಪರಿಸ್ಥಿತಿಗಳಲ್ಲಿ ಪರಿಮಳ ಮತ್ತು ವಾಸನೆಯನ್ನು ಗ್ರಹಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ. ಸಂಶೋಧನೆ ಹೇಳುವುದು ಏನೆಂದರೆ 139 ವೈದ್ಯಕೀಯ ಪರಿಸ್ಥಿತಿಗಳಲ್ಲಿ ಆ ಸಂದರ್ಭದಲ್ಲಿ ರೋಗಿಯು ಯಾವುದೇ ರೀತಿಯ ವಾಸನೆಯನ್ನು ಗಮನಿಸುವುದಿಲ್ಲ ಈ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡರೂ ಇದು ವಿವಿಧ ನರವೈಜ್ಞಾನಿಕ ಮತ್ತು ದೈಹಿಕ ಕಾಯಿಲೆಗಳ ಆರಂಭಿಕ ಲಕ್ಷಣಗಳಾಗಿರಬಹುದು ಇದು ವ್ಯಕ್ತಿಯ ಸ್ಮರಣಶಕ್ತಿಗೆ ಸಂಬಂಧಿಸಿದೆ ಎಂದು ಕಂಡುಬಂದಿದೆ. ಅಲ್ಪ ಅವಧಿಯಲ್ಲಿ ವಾಸನೆ ಅಥವಾ ಪರಿಮಳದ ಗ್ರಹಿಕೆಯನ್ನು ಕಳೆದುಕೊಳ್ಳುವುದು ಅಪಾಯಕಾರಿ ಸಂಕೇತವಲ್ಲ ಆದರೆ ವ್ಯಕ್ತಿಯಲ್ಲಿ ಆ ರೋಗಲಕ್ಷಣಗಳು ದೀರ್ಘಕಾಲದ ವರೆಗೆ ಅನುಭವಕ್ಕೆ ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಬೇಕು.
ನೀವು ಪರಿಮಳವನ್ನು ಗ್ರಹಿಸಲು ಸಾಧ್ಯವಾಗುತ್ತಿಲ್ಲವಾ ಹಾಗಿದ್ರೆ ಎಚ್ಚರ!
