ಐತಿಹಾಸಿಕ ಸ್ಥಳ; ನಾಮದ ಚಿಲುಮೆಗೆ ಈ ಹೆಸರು ಬರಲು ಕಾರಣವೇನು ಗೊತ್ತಾ?

ಐತಿಹಾಸಿಕ ಸ್ಥಳ; ನಾಮದ ಚಿಲುಮೆಗೆ ಈ ಹೆಸರು ಬರಲು ಕಾರಣವೇನು ಗೊತ್ತಾ?

ನಮಸ್ಕಾರ ವಿಕ್ಷಕರೇ, ಇವತ್ತಿನ ಈ ವಿಡಿಯೋದಲ್ಲಿ ನಾವು ನಮ್ಮ ತುಮಕೂರಿನ ನಾಮದ ಚಿಲುಮೆಯ ಬಗ್ಗೆ ಒಂದಷ್ಟು ಇಂಟ್ರೇಸ್ಟಿಂಗ್ ಫ್ಯಕ್ಟ್ ಗಳನ್ನ ತಿಳಿದುಕೊಳ್ಳೋಣ. ಈ ಸ್ಥಳವು ದಟ್ಟವಾದ ಕಾಡು ಮತ್ತು ಸುಂದರವಾದ ಜಿಂಕೆ ಸಫಾರಿಯನ್ನು ಹೊಂದಿದ್ದು, ಇದು ಸಾಕಷ್ಟು ವಿನೋದಮಯವಾಗಿದೆ. ನಾಮದ ಚಿಲುಮೆ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದ್ದು, ಚಿಕ್ಕದಾದ ನೀರಿನ ಹರಿವು ಹರಿಯುತ್ತಿದೆ, ಈ ನೀರ ತ್ರೇತ್ರಯುಗದಿಂದಲೂ ಹರಿಯುತ್ತಿದೆ ಎಂದು ಹೇಳಲಾಗುತ್ತದೆ, ರಾಮ – ಸೀತಾ ವನವಾಸದ ಸಮಯದಲ್ಲಿ ರಾಮನು ಹಣಗೆ ತಿಲಕವನ್ನು ಇಡಲು ಸುತ್ತ-ಮುತ್ತಲು ಎಲ್ಲು ನೀರು ಕಾಣದ ಸಮಯದಲ್ಲಿ ತಾನಿದ್ದ ಸ್ಥಳದಲ್ಲೆ ಬಂಡೆಯ ಮೇಲೇ ಬಾಣವನ್ನು ಬಿಡುತ್ತಾನೆ, ಆಗ ಬಂಡೆಯಿಂದ ನೀರು ಚುಮ್ಮುತ್ತೆ. ಅದೇ ನೀರಿನ ಸಹಾಯದಿಂದ ರಾಮನು ತನ್ನ ಹಣೆಗೆ ನಾಮವನ್ನು ಇಟ್ಟುಕೊಂಡ ಆದ್ದರಿಂದಲೇ ಈ ಜಾಗಕ್ಕೆ ನಾಮದ ಚಿಲುಮೇ ಅನ್ನೊ ಹೆಸರು ಬಂತು. ಆದ್ರೆ ಇಂದಿಗು ಕೂಡ ಈ ಹರಿವಿನ ಮೂಲ ತಿಳಿದಿಲ್ಲ, ಸ್ಥಳೀಯರು ಮತ್ತು ಸಂದರ್ಶಕರು ನೀರನ್ನು ಪವಿತ್ರವೆಂದು ಪರಿಗಣಿಸುತ್ತಾರೆ. ನೀವೇನಾದ್ರು ಈ ಜಾಗಕ್ಕೆ ಭೇಟಿ ಕೊಟ್ರೆ ಸಾಕ್ಷಾತ್ ಶ್ರೀ ರಾಮನು ಸೃಷ್ಟಿಸಿದ ಚಿಲುಮೆಯಿಂದ ಚಿಮ್ಮುತ್ತಿರುವ ನೀರನ್ನು ಸವಿಯೋದನ್ನ ಮರಿಯಬೇಡಿ.

Leave a Reply

Your email address will not be published. Required fields are marked *