ಕೆಸೆಟ್ ಪರೀಕ್ಷೆ ಯಶಸ್ವಿ, ಕೀ-ಉತ್ತರಗಳ ಬಿಡುಗಡೆ ಅಪ್ಡೇಟ್, ಡೌನ್ಲೋಡ್ ಹೇಗೆ..?

ಕೆಸೆಟ್ ಪರೀಕ್ಷೆ ಯಶಸ್ವಿ, ಕೀ-ಉತ್ತರಗಳ ಬಿಡುಗಡೆ ಅಪ್ಡೇಟ್, ಡೌನ್ಲೋಡ್ ಹೇಗೆ..?

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವ ಬಹು ನಿರೀಕ್ಷೆಯ ಈ ವರ್ಷದ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET Exam 2024) ಇದೇ ನವೆಂಬರ್ 24ರಂದು ಭಾನುವಾರ ಸುಸೂತ್ರವಾಗಿ ನಡೆಯಿತು. ಸ್ನಾತಕೋತ್ತರ ಪದವೀಧರರು ಇಷ್ಟದ ವಿಷಯಗಳಲ್ಲಿ ಎರಡು ಪ್ರಶ್ನೆ ಪ್ರತ್ರಿಕೆಗೆ ಉತ್ತರಿಸಿದ್ದಾರೆ. ಪರೀಕ್ಷಾರ್ಥಿಗಳು ಕೀ ಉತ್ತರ ಎಲ್ಲಿ ಪರಿಶೀಲಿಸಬೇಕು? ಕೀ ಉತ್ತರ ಬಿಡುಗಡೆ ದಿನಾಂಕ, ಲಿಂಕ್ ಅಪ್ಡೇಟ್ ಮಾಹಿತಿ ಇಲ್ಲಿದೆ.

ಇಂದು ಅಭ್ಯರ್ಥಿಗಳು ಒಟ್ಟು 300 ಅಂಕಗಳ ಪತ್ರಿಕೆ 1 ಮತ್ತು 2 ರ KSET 2024 ಪ್ರವೇಶ ಪರೀಕ್ಷೆ ಬರೆದಿದ್ದಾರೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿವೆ. ಹಾಜರಾಗಿದ್ದ ಅಭ್ಯರ್ಥಿಗಳ ಪ್ರವೇಶ ಪರೀಕ್ಷೆಯು ಕಠಿಣವಾಗಿರದೇ ಮಧ್ಯಮ ರೀತಿಯಲ್ಲಿತ್ತು. ಎಲ್ಲ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ್ದಾಗಿ ಕೆಲವು ತಿಳಿಸಿದ್ದಾರೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಕೀ ಉತ್ತರ ಹಾಗೂ ಫಲಿತಾಂಶ ಕುರಿತು ಉತ್ಸುಕರಾಗಿದ್ದಾರೆ.

ಪರೀಕ್ಷೆ ಬರೆದು ಕೇಂದ್ರದಿಂದ ಹೊರ ಬಂದ ಕೆಸೆಟ್ ಆಕಾಂಕ್ಷಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ನಲ್ಲಿ KSET 2024 Key Answer link ಕುರಿತು ತಡಕಾಡಿದರು. ಅದರ ಅಪ್ಡೇಟ್ ಅನ್ನು ಪರಿಶೀಲಿಸಿದ್ದಾರೆ. ಕೀ ಉತ್ತರಗಳ ಪಿಡಿಎಫ್ ಡೌನ್ಲೋಡ್ ಬಗ್ಗೆ, ಹಿಂದಿನ ವರ್ಷದ ಕೀ ಉತ್ತರಗಳನ್ನು ಪರಿಶೀಲಿಸಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇದೇ ನವೆಂಬರ್ ಕೊನೆ ವಾರದಲ್ಲಿ ಕೆಸೆಟ್ 2024 ಪರೀಕ್ಷೆಯ ಕೀ ಉತ್ತರ ಪ್ರಕಟಿಸಲಿದೆ. ಕೀ ಉತ್ತರಗಳು ಬಿಡುಗಡೆಯಾದ ನಂತರ ಅಭ್ಯರ್ಥಿಗಳು ಲಾಗಿನ್ ಐಡಿ, ಪಾಸ್ವರ್ಡ್ ಸಮೇತ ಈ ಲಿಂಕ್ ಮೇಲೆ cetonline.karnataka.gov.in/kea/kset2024 ಕ್ಲಿಕ್ ಮಾಡಿ ಲಾಗಿನ್ ಆಗಬೇಕು. ಅಧಿಕೃತ ವೆಬ್ಸೈಟ್ ತೆರೆದುಕೊಳ್ಳುತ್ತಿದ್ದಂತೆ KSET 2024 Key Answer ಲಿಂಕ್ ಆಯ್ಕೆ ಮಾಡಿಕೊಂಡು ನೀವು ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದು.

ನೀವು ಈ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಂಡ ಬಳಿಕ ಅದಕ್ಕೆ ಸಂಬಂಧಿಸಿದ ಆಕ್ಷೇಪಣೆಗಳು ಇದ್ದರೆ, ಸಲ್ಲಿಕೆಗೆ ಪ್ರಾಧಿಕಾರ ಅವಕಾಶ ನೀಡಲಿದೆ. ಆಕ್ಷೇಪಣೆ ಬಂದ ಪರಿಶೀಲಿಸಲಿದೆ. ಬಳಿಕ ತಾತ್ಕಾಲಿಕ ಮತ್ತು ಅಂತಿಮ ಅಂಕಪಟ್ಟಿ ಬಿಡುಗಡೆ ಮಾಡಲಿದೆ. ಆದ್ದರಿಂದ ಅಭ್ಯರ್ಥಿಗಳು ನವೆಂಬರ್ ಕೊನೆ ವಾರದ ಬರುತ್ತಿದ್ದಂತೆ KEA website ಗಮನಿಸುತ್ತಿರಬೇಕು.

KSET 2024: ಕೆಸೆಟ್ ಪರೀಕ್ಷೆ ಕೀ ಉತ್ತರ ಡೌನ್ಲೋಡ್ ಹೇಗೆ? * ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್ಸೈಟ್ಗೆ karnataka.gov.in/kea/kset2024 ಭೇಟಿ ನೀಡಬೇಕು. * ಮುಖಪುಟದಲ್ಲಿ KSET 2024 ಆಯ್ಕೆ ಮಾಡಿಕೊಳ್ಳಬೇಕು. * ಬಳಿಕ ಪರದೆ ಮೇಲೆ ಕಾಣುವವ KSET 2024 ಕೀ ಉತ್ತರಗಳ ಪಿಡಿಎಫ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

* ಲಿಂಕ್ ಅನ್ನು ಕ್ಲಿಕ್ ಮಾಡಿದ ಬಳಿಕ ಕೀ ಉತ್ತರ ಪುಟ ತೆರೆದುಕೊಳ್ಳುತ್ತದೆ * ಅಲ್ಲಿ ಅಗತ್ಯ ಇರುವ ವಿವಿರ ನಮೂದಿಸಿ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬೇಕು. * ನೀವು ಡೌನ್ಲೋಡ್ ಮಾಡಿಕೊಂಡ ಪ್ರತಿ ಭವಿಷ್ಯದ ಅಗತ್ಯಕ್ಕಾಗಿ ಝರಾಕ್ಸ್ ಇಟ್ಟುಕೊಳ್ಳಬಹುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಪ್ರತಿ ವರ್ಷ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ KSET ಪ್ರವೇಶ ಪರೀಕ್ಷೆ ನಡೆಸುತ್ತದೆ. ಹಿಂದಿನ ಕೆಎಸ್ಇಟಿಯಲ್ಲಿ

ಅರ್ಹತೆ ಪಡೆದ ಅಭ್ಯರ್ಥಿಗಳು ಮತ್ತದೇ ವಿಷಯ ಆಯ್ಕೆ ಮಾಡಿಕೊಂಡು ಕೆಸೆಟ್ ಎದುರಿಸಲು ಅವಕಾಶ ಇಲ್ಲ ಎಂದು ಪ್ರಾಧಿಕಾರ ಅಧಿಸೂಚನೆಯಲ್ಲಿ ತಿಳಿಸಲಾಗಿದೆ..

Leave a Reply

Your email address will not be published. Required fields are marked *