ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ ಗಂಗವಾರ ಚೌಡಪ್ಪನಹಳ್ಳಿ ಗ್ರಾಮದ ತಬ್ಬಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಅಲಂಕಾರ ಪೂಜೆ ಮಾಡಲಾಯಿತು.
ತಾಲ್ಲೂಕಿನ ಗಂಗವಾರ ಚೌಡಪ್ಪನಹಳ್ಳಿಯಲ್ಲಿನ ಇತಿಹಾಸವುಳ್ಳ ಪುರಾತನ ದೇವಾಲಯಗಳಲ್ಲೊಂದಾದ ತಬ್ಬಲಿಂಗೇಶ್ವರ ದೇವಾಲಯದಲ್ಲಿ ಕಡೇ ಕಾರ್ತೀಕ ಸೋಮವಾರದ ಅಂಗವಾಗಿ ಶಿವಲಿಂಗಕ್ಕೆ ವಿಶೇಷ ಹೂವಿನ ಅಲಂಕಾರ, ಪೂಜೆ ಮಾಡಲಾಗಿತ್ತು ಆಗಮಿಸಿದ ಭಕ್ತಾದಿಗಳಿಗೆ ದೇವಾಲಯ ಸಮಿತಿಯು ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ದೇವಾಲಯ ಸಮಿತಿ ಅಧ್ಯಕ್ಷ ಭೈರೇಗೌಡ ಮಾತನಾಡಿ, ಚೋಳರ ಕಾಲದಲ್ಲೇ ನಿರ್ಮಾಣ ವಾದ ನೀಲಕಂಠೇಶ್ವರ ಲಿಂಗ ಇದಾಗಿದ್ದು ಆ ಸಮಯದಲ್ಲಿ ಜನ ವಾಸವಾಗಿದ್ದರು ಕಾಲ ಕ್ರಮೇಣ ಇದು ಊರೇ ಕಾಲಿಯಾದಾಗ ಕಾಡಾಗಿ ಮಾರ್ಪಾಟಾಯಿತು ಆಗ ಕರಿ ಮೇಯಿಸಲು ಬರುತ್ತಿದ್ದ ಮಕ್ಕಳಾಗಲಿ ದೊಡ್ಡವರಾಗಲಿ ಈ ಶಿವನ ಲಿಂಗವನ್ನು ತಬ್ಬಿಕೊಂಡರೆ ಪೂರ್ಣವಾಗಿ ಕೈ ಅಳತೆಗೆ ದೊರಕುತ್ತಿತ್ತು ಆದ್ದರಿಂದ ತಬ್ಬಲಿಂಗೇಶ್ವರ ಎಂದು ಕರೆಯುತ್ತಾರೆ. ಇದನ್ನು ಕಳೆದ ೧೬ ವರ್ಷಗಳ ಹಿಂದೆ ದೇವಾಲಯ ಅಭಿವೃದ್ಧಿ ಸಮಿತಿ ರಚಿಸಿ ಅಭಿವೃದ್ಧಿ ಕೆಲಸಗಳು ರಥೋತ್ಸವ ಜಾತ್ರೆ ಶಿವರಾತ್ರಿಯಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ ಇಂದು ಪಕ್ಕದ ಜಿಲ್ಲೆ ತಾಲ್ಲೂಕಿನಿಂದ ೨೫ ಸಾವಿರ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ದೇವಾಲಯದ ಗೌರವಾಧ್ಯಕ್ಷರಾದ ಹೊಸಕೋಟೆ ಜಯರಾಜ್ ಮಾತನಾಡಿ, ನಾವು ಕಳೆದ ೩೦ ವರ್ಷಗಳಿಂದಲೂ ದೇವಾಲಯ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುತ್ತಿದೇನೆ ಹಾಗೂ ಸುತ್ತ ಮುತ್ತಲಿನ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಕಾರಣ ಇಲ್ಲಿನ ನಂಬಿಕೆ ಯಾರೇ ಯಾವುದೇ ಕಷ್ಟ ಎಂದು ಬಂದರೆ ಪ್ರಾರ್ಥಿಸಿದರೆ ಕಷ್ಟಗಳೆಲ್ಲವನ್ನು ದೂರ ಮಾಡುವ ನಂಬಿಕೆ ಇದೆ. ಭಕ್ತಾದಿಗಳು ಮನೆ ದೇವರಿಗಿಂತ ಹೆಚ್ಚಾಗಿ ಸೇವೆ ಮಾಡುತ್ತಿದ್ದಾರೆ ಇನ್ನು ಹೆಚ್ವು ಭಕ್ತರು ಆಗಮಿಸಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು.
ಈ ದೇವಾಲಯಕ್ಕೆ ಸಚಿವರಾದ ಕೃಷ್ಣಭೈರೇಗೌಡ, ಕೆ.ಹೆಚ್.ಮುನಿಯಪ್ಪ, ಬಯಪ್ಪ ಅಧ್ಯಕ್ಷ ಶಾಂತಕುಮಾರ್, ಇನ್ನು ಹಲವು ಗಣ್ಯರು ಆಗಮಿಸಿ ಸ್ವಾಮಿಯವರ ದರ್ಶನ ಪಡೆದರು.