ಅಲ್ಲಿಗೆ ಯಾರಾದ್ರೂ ಹೋಗಿ ಭೇಟಿ ಕೊಟ್ಟಿದ್ದೀರಾ..? ಒಂದು ಹನಿ ಕಣ್ಣಿರು ಹಾಕಿದ್ದೀರಾ..?

ಪಟ್ಟು ಸಡಿಲಿಸಿದ ಡಿಕೆಶಿ! ಕೊನೆಗೂ ಬಿಜೆಪಿ ಶಾಸಕನ ಕ್ಷೇತ್ರಕ್ಕೆ ಅನುದಾನ ಬಿಡುಗಡೆ

ಬೆಂಗಳೂರು : ಕರ್ನಾಟಕ ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆ ಆಗಿದೆ. ನಾನು ಬಳ್ಳಾರಿ ಆಸ್ಪತ್ರೆಗೆ ಭೇಟಿ ಮಾಡಿದೆ. ಬಾಣಂತಿಯರಿಗೆ ಕೊಟ್ಟ ಮೆಡಿಸಿನ್ ನಿಂದ ಸತ್ತಿದ್ದಾರೆ. ಕೊಟ್ಟ ತಕ್ಷಣ ಕಿಡ್ನಿ ಪೇಲ್ ಆಗಿದೆ. ಹಾಗಾಗಿ ಅವರು ಸತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 8 ತಿಂಗಳಲ್ಲಿ 28 ಬಾಣಂತಿಯರು ಸತ್ತಿದ್ದಾರೆ. ಮಹಿಳೆಯರಿಗೆ 2000 ಕೊಡೋದು ಇರಲಿ, ಅವರ ಸಾವಿಗೆ ನ್ಯಾಯ ಕೊಡಿಸಿ ಅಂತ ಜನ ಕೇಳ್ತಾ ಇದ್ದರೆ. ವಿರೋಧ ಪಕ್ಷದ ನಾಯಕನಾಗಿ ನಾನು ಕೇಳ್ತಾ ಇದೀನಿ ಎಂದು ಪ್ರಶ್ನೆ ಮಾಡಿದ್ದಾರೆ.

ಅಲ್ಲಿಗೆ ಯಾರಾದ್ರೂ ಹೋಗಿ ಭೇಟಿ ಕೊಟ್ಟಿದ್ದೀರಾ..? ಒಂದು ಹನಿ ಕಣ್ಣಿರು ಹಾಕಿದ್ದೀರಾ..? ನಿಮ್ಮ ಸಾವಿಗೆ ನ್ಯಾಯ ಕೊಡಿಸ್ತೀನಿ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದೀರಾ..? ನಿಮ್ಮ ಪಾಡಿಗೆ ನೀವು ಸಮಾವೇಶ ಮಾಡ್ಕೊಂಡು ಇದ್ದೀರಾ. ಇಂತ 100 ಸಮಾವೇಶ ಮಾಡಿದ್ರು ನಿಮ್ಗೆ ಅವರ ಶಾಪ ತಟುತ್ತೆ ಇಂತ ಸರ್ಕಾರ ಇದ್ರೆ ಎಷ್ಟು ಸತ್ರೆ ಎಷ್ಟು ಎಂದು ಸಿಎಂ ವಿರುದ್ಧ ಆರ್ ಅಶೋಕ್ ವಾಗ್ದಾಳಿ ಮಾಡಿದ್ದಾರೆ.

ಜಿಲ್ಲಾ ಮಂತ್ರಿ ಹೋಗಿಲ್ಲ, ದಿನೇಶ್ ಗುಂಡೂರಾವ್ ಹೋಗಿಲ್ಲ, ಸಿಎಂ ಸಿದ್ದರಾಮಯ್ಯ ಹೋಗಿಲ್ಲ ಈ ಸರ್ಕಾರ ತುಂಬಾ ದಿನ ಇರಲ್ಲ. 20 ಸಮಾವೇಶ ಆಗಿದೆ ದುಡ್ಡು ಎಲ್ಲಿಂದ ಬಂತು..? ಸಿಎಂ ಕಾಟಾಚಾರಕ್ಕೆ ಮೀಟಿಂಗ್ ಮಾಡಿದ್ದಾರೆ ಅಷ್ಟೇ. ಅವ್ರು ಮೀಟಿಂಗ್ ಮಾಡಿದ ಮೇಲೂ ಕೂಡ ಜನ ಸಾಯ್ತಾ ಇದ್ದರೆ ಅಂದ್ರೆ ಏನ್ ಹೇಳ್ಬೇಕು. ನಾನು ಚಿಕ್ಕಪುಟ್ಟ ಅವರ ರಾಜೀನಾಮೆ ಕೇಳಲ್ಲ. ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡ್ಬೇಕು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *