Cyclone Allert || ಇನ್ನು ಮುಗಿಯದ ಮಳೆಯ ಅಬ್ಬರ

Cyclone Allert || ಇನ್ನು ಮುಗಿಯದ ಮಳೆಯ ಅಬ್ಬರ

ದಕ್ಷಿಣ ಭಾರತದಲ್ಲಿ ಇನ್ನು ಸೈಕ್ಲೋನ್‌ನ ಅವಾಂತರಗಳು ಇನ್ನು ಮುಗಿದಂತೆ ಕಾಣುತ್ತಿಲ್ಲ. ಮಳೆಗಾಲ ಮುಕ್ತಾಯವಾಗಿದ್ದರೂ ಕೂಡ ಇನ್ನೂ ಮಳೆಯ ಅಬ್ಬರ ನಿಂತಿಲ್ಲ. ದೇಶದ ಕೆಲವೆಡೆ ಈಗಲೂ ಭಾರೀ ಮಳೆಯಾಗುತ್ತಿದೆ. ಮತ್ತೊಂದೆಡೆ ನಿಧಾನವಾಗಿ ಚಳಿಯೂ ದೇಶದ ಅನೇಕ ಭಾಗಗಳನ್ನು ಆವರಿಸಿದೆ. ಹೀಗಾಗಿ ಇಂದು ಎಲ್ಲೆಲ್ಲಿ ಎಲ್ಲೆಲ್ಲಿ ಮಳೆಯಾಗಲಿದೆ? ಫೆಂಗಲ್ ಚಂಡಮಾರುತದ ಬೆನ್ನಲ್ಲೇ ಇದೀಗ ಮತ್ತೊಂದು ಹೊಸ ಚಂಡಮಾರುತ ಭೀತಿ ಉಂಟಾಗಿದೆ. ಹೀಗಾಗಿ ಕರ್ನಾಟಕ ಸೇರಿದಂತೆ ಇತರ ಪ್ರದೇಶಗಳ ಹವಾಮಾನ ವರದಿ ಈ ಸುದ್ದಿಯಲ್ಲಿದೆ.

ಭಾರತದ ವಿವಿಧ ಭಾಗಗಳಲ್ಲಿ ಹವಾಮಾನ ನಿರಂತರವಾಗಿ ಬದಲಾಗುತ್ತಲೇ ಇದೆ. ಬಂಗಾಳಕೊಲ್ಲಿಯು ಈ ಹವಾಮಾನ ವೈಪರೀತ್ಯದ ಕೇಂದ್ರವಾಗಿ ಉಳಿದಿದೆ. ಕಳೆದ ವಾರ ತಮಿಳುನಾಡು, ಕರ್ನಾಟಕ ಮತ್ತು ಪುದುಚೇರಿಯಲ್ಲಿ ಫೆಂಗಾಲ್ ಚಂಡಮಾರುತ ಭಾರೀ ಅವಾಂತರ ಸೃಷ್ಟಿಸಿತ್ತು. ಇದೀಗ ಭಾರತೀಯ ಹವಾಮಾನ ಇಲಾಖೆ ಮತ್ತೊಂದ ಹೊಸ ಚಂಡಮಾರುತದ ಎಚ್ಚರಿಕೆಯನ್ನು ನೀಡಿದೆ.

ಹೌದು.. ಬಂಗಾಳಕೊಲ್ಲಿಯಲ್ಲಿ ನಿರಂತರವಾಗಿ ಹವಾಮಾನ ವೈಪರೀತ್ಯ ಉಂಟಾಗುತ್ತಿದ್ದು, ಇದರ ಪರಿಣಾಮ ಮುಂದಿನ ೩ರಿಂದ ೪ ದಿನಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಕಾಣಿಸಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಡಿಸೆಂಬರ್ ೧೨ ರಿಂದ ೧೩ ರ ನಡುವೆ ಕೆಲವು ರಾಜ್ಯಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ. ಮತ್ತೊಂದೆಡೆ, ಹವಾಮಾನ ವೈಪರೀತ್ಯದ ಪರಿಣಾಮದಿಂದ ಭಾನುವಾರ ಸಂಜೆ ದೆಹಲಿ ಎನ್‌ಸಿಆರ್‌ನಲ್ಲಿ ಮಳೆಯಾಗಿದೆ.

ಕಳೆದ ವಾರ ಬಂಗಾಳಕೊಲ್ಲಿಯಲ್ಲಿ ಎದ್ದಿದ್ದ ಫೆಂಗಾಲ್ ಚಂಡಮಾರುತ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಾಕಷ್ಟು ಹಾನಿಯನ್ನುಂಟು ಮಾಡಿತ್ತು. ವಿಶೇಷವಾಗಿ ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಭಾರೀ ಸಂಕಷ್ಟ ಉಂಟಾಗಿತ್ತು. ಇದರಿಂದ ದೊಡ್ಡ ಪ್ರಮಾಣದಲ್ಲಿ ಹಾನಿಯೂ ಆಗಿದೆ. ಇದೀಗ ಮತ್ತೊಮ್ಮೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಚಂಡಮಾರುತದ ಭೀತಿ ಮತ್ತಷ್ಟು ಹೆಚ್ಚಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಹವಾಮಾನ ವೈಪರೀತ್ಯದಿಂದ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಹವಾಮಾನ ತಜ್ಞರು ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ, ಬಂಗಾಳಕೊಲ್ಲಿಯಲ್ಲಿ ಅನೇಕ ಚಂಡಮಾರುತಗಳು ಹುಟ್ಟಿಕೊಂಡಿವೆ. ಇದು ಪಶ್ಚಿಮ ಬಂಗಾಳ, ಒಡಿಶಾ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ವ್ಯಾಪಕ ಪರಿಣಾಮ ಬೀರಿದೆ. ಕೇರಳದಲ್ಲೂ ಧಾರಾಕಾರ ಮಳೆ ದಾಖಲಾಗಿದೆ.

ಋತುಮಾನದ ಪರಿಸ್ಥಿತಿಗಳನ್ನು ಗಮನಿಸಿಕೊಂಡು Iಒಆ ಮಳೆಯ ಎಚ್ಚರಿಕೆಯನ್ನು ನೀಡಿದ್ದು, ಹವಾಮಾನಶಾಸ್ತ್ರಜ್ಞರ ಪ್ರಕಾರ, ಡಿಸೆಂಬರ್ ೧೨ ರಂದು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಭಾರೀ ಮಳೆಯಾಗಬಹುದು. ಇದಲ್ಲದೆ ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ, ರಾಯಲಸೀಮಾ, ದಕ್ಷಿಣ ಕರ್ನಾಟಕ, ಕೇರಳ ಮತ್ತು ಮಾಹೆಯಲ್ಲಿ ಧಾರಾಕಾರ ಮಳೆಯಾಗಬಹುದು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಸಾರ್ವಜನಿಕರ ಜತೆಗೆ ಸ್ಥಳೀಯ ಆಡಳಿತಕ್ಕೂ ಐಎಂಡಿ ಎಚ್ಚರಿಕೆ ನೀಡಿದೆ.

ಹವಾಮಾನ ಇಲಾಖೆ ಡಿಸೆಂಬರ್ ೧೩ ರಂದು ಕೂಡ ಮಳೆಯ ಎಚ್ಚರಿಕೆಯನ್ನು ನೀಡಿದ್ದು, ಡಿಸೆಂಬರ್ ೧೩, ೨೦೨೪ ರಂದು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಧಾರಾಕಾರ ಮಳೆಯಾಗಬಹುದು. ಜೊತೆಗೆ ಕೇರಳ, ಮಾಹೆ, ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದಲ್ಲೂ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಫೆಂಗಾಲ್ ಚಂಡಮಾರುತದಿAದಾಗಿ ತಮಿಳುನಾಡು, ಕರ್ನಾಟಕ, ಮತ್ತು ಪುದುಚೇರಿಯಲ್ಲಿ ಕೆಲವು ದಿನಗಳ ಹಿಂದೆ ಮಳೆಯು ಹಾನಿಯನ್ನುಂಟುಮಾಡಿದೆ. ಇದೀಗ ಮತ್ತೊಂದು ಹೊಸ ಚಂಡಮಾರುತದ ಪರಿಣಾಮ ಭಾರೀ ಮಳೆಯಾಗವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *