ತುಮಕೂರು || ಅದ್ದೂರಿಯಾಗಿ ವಿಸರ್ಜನೆಗೊಂಡ ತಿಪಟೂರು ಶ್ರೀಸತ್ಯಗಣಪತಿ

ತುಮಕೂರು || ಅದ್ದೂರಿಯಾಗಿ ವಿಸರ್ಜನೆಗೊಂಡ ತಿಪಟೂರು ಶ್ರೀಸತ್ಯಗಣಪತಿ

ತಿಪಟೂರು : ಕಲ್ಪತರು ನಾಡಿನ ನಾಡಹಬ್ಬ,ಐತಿಹಾಸಿಕ ಪ್ರಸಿದ್ದ ತಿಪಟೂರು ಶ್ರೀಸತ್ಯಗಣಪತಿ ವಿಸರ್ಜನ ಮಹೋತ್ಸವ ಅದ್ದೂರಿಯಾಗಿ ವೈಭವದಿಂದ ನಡೆಯಿತು,ಗಣೇಶ ಚತುರ್ಥಿಯಂದು,ಸಕಲ ಪೂಜಾಕೈಂಕರರ್ಯಗಳೊಂದಿಗೆ ಶಿಲ್ಪಗಳಿಂದ ತಯಾರಾಗಿ ಪ್ರತಿಷ್ಠಾಪನೆಗೊಂಡಿದ ಶ್ರೀಸತ್ಯಗಣಪತಿ 90 ದಿನಗಳ ಕಾಲ ಪೂಜಿಸಲ್ಪಟ್ಟು,95ನೇ ವರ್ಷದ ಶ್ರೀಸತ್ಯಗಣಪತಿ ವಿಸರ್ಜನಾ ಮಹೋತ್ಸವ ವೈಭವಯುತವಾಗಿ ನಡೆಯಿತು, ಶ್ರೀಸತ್ಯಗಣಪತಿಯನ್ನ ತಿಪಟೂರು ಅಮಾನೀಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.

ಶ್ರೀಸತ್ಯಗಣಪತಿ ಜಾತ್ರೆ, ಮೈಸೂರು ದಸರ, ಬೆಂಗಳೂರು ಕರಗ,ಸೇರಿದಂತೆ ರಾಜ್ಯದ ಹಲವಾರು ವಿಶೇಷ ಜಾತ್ರಾ ಮಹೋತ್ಸವಗಳಂತೆ.ಹೆಸರುವಾಸಿಯಾಗಿರುವ ತಿಪಟೂರು ಶ್ರೀಸತ್ಯಗಣಪತಿ ಜಾತ್ರೆ,ಕಲ್ಪತರು ನಾಡಹಬ್ಬವಾಗಿದೆ,ದೇಶ ಹಾಗೂ ವಿವಿಧ ಭಾಗಗಳಿಂದ ಜಾತ್ರೆಗೆ ಭಕ್ತಸಮೂಹವೇ ಸೇರಿದ ಜಾತ್ರೆಯಲ್ಲಿ 2ದಿನಗಳ ಕಾಲ ವೈಭವದಿಂದ ನಡೆಯಿತು,

ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ವಿಶೇಷಪೂಜೆಯೊಂದಿಗೆ ಆರಂಭವಾದ ಉತ್ಸವ,ದೊಡ್ಡಪೇಟೆ.ಕನ್ನಿಕಾಪರಮೇಶ್ವರಿ ದೇವಾಲಯ ರಸ್ತೆ, ಕಾರೋನೇಷನ್ ರಸ್ತೆ, ಎಲೆ ಆಸರ,ರೈಲ್ವೆ ಸ್ಟೇಷನ್ ರೋಡ್. ಗಾಂಧೀ ನಗರ,ಬಿ.ಹೆಚ್ ರಸ್ತೆ ಕೆ.ಆರ್ ಬಡಾವಣೆ ಸೇರಿದಂತೆ ವಿವಿಧ ಬೀದಿಗಳಲ್ಲಿ ಅದ್ದೂರಿಯಾಗಿ ,ಮೆರವಣಿಗೆ ನಡೆಸಲಾಯಿತು.

ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ವಿಶೇಷಪೂಜೆಯೊಂದಿಗೆ ಆರಂಭವಾದ ಉತ್ಸವ,ದೊಡ್ಡಪೇಟೆ.ಕನ್ನಿಕಾಪರಮೇಶ್ವರಿ ದೇವಾಲಯ ರಸ್ತೆ, ಕಾರೋನೇಷನ್ ರಸ್ತೆ, ಎಲೆ ಆಸರ,ರೈಲ್ವೆ ಸ್ಟೇಷನ್ ರೋಡ್. ಗಾಂಧೀ ನಗರ,ಬಿ.ಹೆಚ್ ರಸ್ತೆ ಕೆ.ಆರ್ ಬಡಾವಣೆ ಸೇರಿದಂತೆ ವಿವಿಧ ಬೀದಿಗಳಲ್ಲಿ ಅದ್ದೂರಿಯಾಗಿ ,ಮೆರವಣಿಗೆ ನಡೆಸಲಾಯಿತು.

ಶ್ರೀ ಸತ್ಯಗಣಪತಿ ಉತ್ಸವ ಸಾಗುವ ಮಾರ್ಗಗಳಲ್ಲಿ,ವಿವಿಧ ಸಂಘಸಂಸ್ಥೆಗಳು.ವರ್ತಕರು.ಭಕ್ತರು ವಿವಿಧ ಬಗೆಯ ತರಹೇವಾರಿ ,ಹೂವಿನ ಹಾರಗಳು ಸ್ವಾಮಿಯವರಿಗೆ ಅರ್ಪಿಸಿದರು ಕಡುಬು,ಕಜ್ಜಾಯ, ಸೇರಿದಂತೆ ವಿವಿಧ ಬಗೆಯ ಖಾದ್ಯಗಳ ಹಾರದ ಜೊತೆಗೆ, ಭಕ್ಷ್ಯ. ಭೋಜನಗಳಲ್ಲಿ ಅರ್ಪಿಸಿ ಪೂಜೆಸಲ್ಲಿಸಿದರು.ಉತ್ಸವ ಸಾಗಿದ ಮಾರ್ಗಗಳಲ್ಲಿ ಉಚಿತ ಪ್ರಸಾದ ಫಾನಕ,ಫಲಹಾರ ಮಜ್ಜಿಗೆ ನೀರು,ವಿತರಿಸಿ ಭಕ್ತಿ ಸಮರ್ಪಿಸಿದರು.

ಉತ್ಸವದಲ್ಲಿ ಸಂಸ್ಕೃತಿಕ ಕಲಾತಂಡಗಳು.ಕೇರಳದ ಚಂಡೇವಾದ್ಯ, ಚಿಟ್ಟಿಮೇಳ, ಕರಡೇವು ವಾದ್ಯ, ನಾದಸ್ವರ,ಲಿಂಗದ ವೀರರ ಕುಣಿತ. ನಾಸೀಕ್ ಡೋಲ್.ಅಣ್ಣಮ್ಮನ ತಮಟೆವಾದ್ಯ,ಸೇರಿದಂತೆ ಹಲವಾರು ಕಲಾತಂಡಗಳು ಹಾಗೂ ಕಣ್ಮನಕೊರೈಸುವ,ಡಿಜೆ. ಜಾತ್ರೆಗೆ ಮೆರಗುನೀಡಿದವು. ಇಡೀ ತಿಪಟೂರು ನಗರವೇ ಮದುವಣಗಿತ್ತಿಯಂತೆ ಸಿಂಗಾರಗೊಂಡು, ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಿತು.ರಾಜಬೀದಿಗಳಲ್ಲಿ ಅದ್ದೂರಿಯಾಗಿ ಉತ್ಸವ ನಡೆದು ಶ್ರೀಸತ್ಯಗಣಪತಿಯನ್ನ ತಿಪಟೂರು ಅಮಾನೀಕೆರೆಯಲ್ಲಿ ವಿಸರ್ಜನೆ ನೆರವೇರಿಸಲಾಯಿತು.

ಶ್ರೀ ಸತ್ಯಗಣಪತಿ ಸೇವಾಟ್ರಸ್ಟ್ ಅಧ್ಯಕ್ಷರಾದ ಶ್ರೀಕಂಠ.ವಿಸರ್ಜನಾ ಮಹೋತ್ಸವದ ಪೂಜಾ ವಿಧಿವಿಧಾನಗಳನ್ನ ನೆರವೇರಿಸಿದರು

ಜಾತ್ರೆಯ ಅಂಗವಾಗಿ ಶಾಸಕ ಕೆ.ಷಡಕ್ಷರಿ .ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಮಾಜಿ ಶಾಸಕ ಬಿ ನಂಜಾಮರಿ.ನಿವೃತ್ತಪೊಲೀಸ್ ಅಧಿಕಾರಿ ಲೋಕೇಶ್ವರ್ ನಗರಸಭೆ ಅಧ್ಯಕ್ಷರಾದ ಯಮುನಾ ಧರಣೇಶ್.ಉಪಾಧ್ಯಕ್ಷರಾದ ಮೇಘನಾ ಭೂಷಣ್ .

ತುಮಕೂರು ಜಿಲ್ಲಾಪೋಲಿಸ್ ವರಿಷ್ಠಾಧಿಕಾರಿ ಅಶೋಕ್ .ಅಡಿಷನಲ್ ಎಸ್ಪಿ ಮರಿಯಪ್ಪ.ತಿಪಟೂರು ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ,ತಹಸೀಲ್ದಾರ್ ಪವನ್ ಕುಮಾರ್.ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ,ಖ್ಯಾತ ವೈದ್ಯರಾದ ಡಾ//ಶ್ರೀಧರ್ ಯುವಮುಖಂಡ ನಿಖಿಲ್ ರಾಜಣ್ಣ.ಪ್ರಸನ್ನಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ,ಪೂಜೆಸಲ್ಲಿಸಿದರು.

Leave a Reply

Your email address will not be published. Required fields are marked *