ಬೆಂಗಳೂರು || Ferrari: ನಮ್ಮ ಬೆಂಗಳೂರಿಗೆ ಬಂತು ಸೂಪರ್‌ ಕಾರ್‌ ಫೆರಾರಿ ಶೋರೂಂ, ಯಾವ ಏರಿಯಾದಲ್ಲಿ ಗೊತ್ತಾ?

ಬೆಂಗಳೂರು || Ferrari: ನಮ್ಮ ಬೆಂಗಳೂರಿಗೆ ಬಂತು ಸೂಪರ್‌ ಕಾರ್‌ ಫೆರಾರಿ ಶೋರೂಂ, ಯಾವ ಏರಿಯಾದಲ್ಲಿ ಗೊತ್ತಾ?

ಲಕ್ಷಾಂತರ ಜನರ ಕನಸಿನ ಕಾರು ಅಂದ್ರೆ ಅದರಲ್ಲಿ ಫೆರಾರಿ (Ferrari) ಕೂಡ ಒಂದು. ಅದರಲ್ಲೂ ಯುವಜನರಿಗೆ ಈ ಫೆರಾರಿ ಹೆಸರು ಕೇಳಿದ್ರೇನೆ ಒಂದು ರೀತಿ ಮೈಯೆಲ್ಲಾ ರೋಮಾಂಚನಗೊಳ್ಳುತ್ತೆ. ಇಲ್ಲಿವರೆಗೆ ಬೆಂಗಳೂರಿನ ರಸ್ತೆಗಳಲ್ಲಿ ಹಲವು ಫೆರಾರಿ ಕಾರುಗಳು ಸದ್ದು ಮಾಡುತ್ತಿದ್ದರೂ ಅಧಿಕೃತವಾಗಿ ಶೋರೂಂ ಇರಲಿಲ್ಲ. ಇದೀಗ ಜಾಗತಿಕ ಬ್ರ್ಯಾಂಡ್‌ ಆಗಿರುವ ಈ ಫೆರಾರಿ ನಮ್ಮ ಸಿಲಿಕಾನ್‌ ಸಿಟಿಯಲ್ಲೂ ತನ್ನ ಶೋರೂಂ ತೆರೆಯುತ್ತಿದೆ. ಇದನ್ನು ದಕ್ಷಿಣ ಭಾರತದ ಮೊದಲ ಫೆರಾರಿ ಶೋರೂಂ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಹೌದು, ದಕ್ಷಿಣ ಭಾರತದಲ್ಲೂ ಯಾವುದೇ ಫೆರಾರಿ ಶೋರೂಂಗಳು ಇರಲಿಲ್ಲ. ಮುಂಬೈ ಹಾಗೂ ನವದೆಹಲಿಯಲ್ಲಿ ಮಾತ್ರವೇ ಇಲ್ಲಿವರೆಗೆ ಫೆರಾರಿ ತನ್ನ ಡೀಲರ್‌ಗಳನ್ನು ಹೊಂದಿತ್ತು. ಇದೀಗ ಭಾರತದ ಸಿಲಿಕಾನ್‌ ವ್ಯಾಲಿ ಆಗಿರುವ ನಮ್ಮ ಬೆಂಗಳೂರಿಗೂ ಫೆರಾರಿ ಕಾಲಿಟ್ಟಿದೆ. ಈ ವಿಚಾರ ಕೇಳಿ ಕಾರುಪ್ರಿಯರೆಲ್ಲ ನಮ್ಮೂರಿಗೂ ಬಂತು ಫೆರಾರಿ..ಎಂದು ಭುಜ ತಟ್ಟಿಕೊಳ್ಳುತ್ತಿದ್ದಾರೆ.

ಈವರೆಗೆ ಫೆರಾರಿ ಕಾರುಗಳನ್ನು ಹೊರ ರಾಜ್ಯಗಳಲ್ಲಿರುವ ಡೀಲರ್‌ಗಳು ಅಥವಾ ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಇನ್ನು ಮುಂದೆ ಬೆಂಗಳೂರಿನಲ್ಲೇ ಶೋರೂಂ ಇರಲಿದ್ದು, ಇದರಿಂದ ಬೆಂಗಳೂರಿನ ತೂಕ ಮತ್ತಷ್ಟು ಹೆಚ್ಚಾಗಿದೆ ಎನ್ನುತ್ತಿದೆ ಆಟೋಮೊಬೈಲ್‌ ಕ್ಷೇತ್ರ. ಈಗಾಗಲೇ ಬಹುತೇಕ ಎಲ್ಲ ಐಷಾರಾಮಿ ಹಾಗೂ ದುಬಾರಿ ಕಾರುಗಳ ಶೋರೂಂ ಬೆಂಗಳೂರಿಗೆ ಬಂದಿವೆ. ಇನ್ನು ಫೆರಾರಿಪ್ರಿಯರಿಗೂ ನಮ್ಮೂರಲ್ಲಿ ಫೆರಾರಿ ಶೋರೂಂ ಇಲ್ಲವಲ್ಲಾ? ಎನ್ನುವ ಚಿಂತೆಯಲ್ಲಿದ್ದರು. ಈಗ ಕೊನೆಗೂ ಅವರ ಆಸೆಯನ್ನು ಫೆರಾರಿ ಈಡೇರಿಸಿದೆ.

ಈ ಹಿಂದೆಯೇ ಫೆರಾರಿ ಶೋರೂಂ ಬೆಂಗಳೂರಿಗೆ ಬರುತ್ತಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದನ್ನು ಹಲವರು ನಂಬಿರಲಿಲ್ಲ. ಆದರೆ, ಅಧಿಕೃತವಾಗಿ ಈಗಾಗಲೇ ಬೆಂಗಳೂರಿನಲ್ಲಿ ಫೆರಾರಿಯ ಶೋರೂಂ ಬಂದಾಗಿದೆ. ಇಷ್ಟಕ್ಕೂ ಫೆರಾರಿಯ ಶೋರೂಂ ಎಲ್ಲಪ್ಪಾ ಇರೋದು ಅ ಕನಸಿನ ಮನೆ ಎಲ್ಲಪ್ಪಾ ಇರೋದು ಅಂತ ಜನ ತಲೆಕೆಡಿಸಿಕೊಂಡಿದ್ದಾರೆ. ಬೆಂಗಳೂರಿನ ಮೋಸ್ಟ್‌ ಡೆವಲಪಿಂಗ್‌ ಏರಿಯಾ ಆಗಿರುವ ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲೇ ಫೆರಾರಿ ಶೋರೂಂ ನಿರ್ಮಾಣವಾಗಿದೆ.

ಏರ್‌ಪೋರ್ಟ್‌ ರಸ್ತೆ ಸದ್ಯ ಬೆಂಗಳೂರಿನ ಹಾಟ್‌ಸ್ಪಾಟ್‌ ಆಗಿದ್ದು, ಇಲ್ಲೇ ಫೆರಾರಿ ಬ್ರ್ಯಾಂಡ್‌ ಪಾದಾರ್ಪಣೆ ಮಾಡಿದೆ. ಇದಕ್ಕೆ ಸಂಬಂಧಿಸಿದ ಕೆಲವು ವಿಡಿಯೋಗಳನ್ನು ಬೆಂಗಳೂರಿಗರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕಂಡು ಎಲ್ಲರೂ ಒಮ್ಮೆ ಹುಬ್ಬೇರಿಸಿ ನೋಡುತ್ತಿದ್ದಾರೆ. ನಮ್‌ ಬೆಂಗ್ಳೂರಿಗೂ ಫೆರಾರಿ ಬಂತು ಕಣ್ರೋ…ಎಂದು ಖುಷ್‌ ಆಗಿ ವಿಡಿಯೋ ಹಂಚಿಕೊಂಡಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಈಗಾಗಲೇ ಹಲವು ಫೆರಾರಿ ಕಾರುಗಳು ಸದ್ದು ಮಾಡುತ್ತಿವೆ. ವೀಕೆಂಡ್‌ ಬಂದರಂತೂ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಏರ್ಪೋರ್ಟ್‌ ರೋಡ್‌ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಂಚರಿಸುತ್ತಾ ಎಲ್ಲರ ಚಿತ್ತ ಸೆಳೆಯುತ್ತಿವೆ. ಇನ್ನು ಬೆಂಗಳೂರಿಗೇ ಫೆರಾರಿ ಶೋರೂಂ ಬಂದಿರುವುದರಿಂದ ಸಿಲಿಕಾನ್‌ ಸಿಟಿಯ ಶ್ರೀಮಂತರು ಫೆರಾರಿ ಕಾರುಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಜೀವನದಲ್ಲಿ ಒಂದ್‌ ಸಲ ಆದ್ರೂ ಫೆರಾರಿ ಕಾರನ್ನು ತಗೋಬೇಕು. ಅದರಲ್ಲಿ ಒಂದು ರೌಂಡ್‌ ಹಾಕಬೇಕು. ಜನ ಅದನ್ನು ಕಣ್‌ ಬಿಟ್ಕೊಂಡು ನೋಡಬೇಕು ಅನ್ನೋದು ಎಷ್ಟೋ ಜನರ ಕನಸು ಅಂದ್ರೆ ತಪ್ಪಾಗಲಾರದು. ಅಷ್ಟರ ಮಟ್ಟಿಗೆ ಕ್ರೇಜ್‌ ಹುಟ್ಟಿಸಿದೆ ಫೆರಾರಿ. ಇನ್ನು ಶೋರೂಂ ಬಂದಿರುವುದರಿಂದ ʼಅದನ್ನ ತಗೋತಿವೋ ಇಲ್ವೋ ಗೊತ್ತಿಲ್ಲ. ಆದರೆ ನಮ್ಮೂರಲ್ಲೇ ಫೆರಾರಿ ಶೋರೂಂ ಇದೆ ಅನ್ನೋದೆ ಒಂಥರಾ ಥ್ರಿಲ್‌ ಕೊಡುತ್ತೆ..ʼ ಎಂದೂ ಹಲವರು ತಮ್ಮ ಕನಸು ಬಿಚ್ಚಿಟ್ಟಿದ್ದಾರೆ.

Leave a Reply

Your email address will not be published. Required fields are marked *