ಬಿಗ್ ಬಾಸ್ ಕನ್ನಡ ಸೀಜನ್ 11 ಇನ್ನೇನು ಅಂತಿಮ ವಾರಗಳತ್ತ ಸಾಗುತ್ತಿದೆ. ಹತ್ತು ಸೀಜನ್‌ಗಳನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್ ಬಾಸ್ ಕನ್ನಡ ಇದೀಗ ಸೀಜನ್ 11ಅನ್ನು ಕೂಡ ಯಶಸ್ವಿಯಾಗಿಸುವತ್ತ ದಾಪುಗಾಲು ಹಾಕುತ್ತಿದೆ. ಟಿಆರ್‌ಪಿನಲ್ಲೂ ಅಗ್ರಸ್ಥಾನ ಉಳಿಸಿಕೊಂಡು ಹೋಗುತ್ತಿರುವ ಬಿಗ್ ಬಾಸ್ ಕನ್ನಡದ ಈ ಬಾರಿಯ ವಿಜೇತರು ಯಾರಾಗಬಹುದು, ಟಾಪ್ ಐದು ಸ್ಥಾನದಲ್ಲಿ ಯಾರಿರಬಹುದು ಎನ್ನುವುದನ್ನು ಊಹಿಸಲು ಕಷ್ಟವಾಗುತ್ತಿದೆ.
ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಹೆಚ್ಚು ಎನ್ನುವಂತೆ ಆಡುತ್ತಿದ್ದಾರೆ. ಅತ್ತ ಮನೆಯೊಳಗೆ ಗೆಲುವಿಗಾಗಿ ಸ್ಪರ್ಧಿಗಳು ಹೋರಾಡುತ್ತಿದ್ದಾರೆ. ಇತ್ತ ಹೊರಗೆ ಸ್ಪರ್ಧಿಗಳ ಅಭಿಮಾನಿಗಳು ಹಾಗೂ ಆಪ್ತರು ಅವರನ್ನು ಗೆಲ್ಲಿಸಲು ಸಾಮಾಜಿಕ ಜಾಲತಾಣದಲ್ಲಿ ಸಖತ್ ಪ್ರಚಾರ ನಡೆಸುತ್ತಿದ್ದಾರೆ. ತಮಗೆ ಇಷ್ಟವಾದ ಸ್ಪರ್ಧಿಯನ್ನು ಗೆಲ್ಲಿಸಬೇಕು ಎಂದು ಈ ರೀತಿ ಪ್ರಚಾರ ಮಾಡುವ ಭರದಲ್ಲಿ ಉಳಿದ ಸ್ಪರ್ಧಿಗಳನ್ನು ಟ್ರೋಲ್ ಮಾಡುವುದು ಸಾಮಾನ್ಯವಾಗಿದೆ. ಜೊತೆಗೆ ಅಪಪ್ರಚಾರ ಕೂಡ ಮಾಡಲಾಗುತ್ತಿದೆ.
ಹೌದು ಸದ್ಯ ಬಿಗ್ ಬಾಸ್ ಕನ್ನಡ ಸೀಜನ್ 11ರ ಸ್ಟ್ರಾಂಗ್ ಸ್ಪರ್ಧಿಯಾಗಿರುವ ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ವಿರುದ್ಧ ಕಳೆದ ಕೆಲವು ದಿನಗಳಿಂದ ಅಪಪ್ರಚಾರ ಮಾಡಲಾಗುತ್ತಿದೆ. ಯಾವುದೋ ಒಂದು ಪ್ರಕರಣವನ್ನು ತೆಗೆದುಕೊಂಡು ಮೋಕ್ಷಿತಾ ಪೈ ವಿರುದ್ಧ ಆರೋಪ ಹಾಗೂ ಅಪಪ್ರಚಾರದ ಟ್ರೋಲ್‌ಗಳನ್ನು ಮಾಡಲಾಗುತ್ತಿದೆ. ಈ ಪ್ರಕರಣದ ಬಗ್ಗೆ ಮೋಕ್ಷಿತಾ ಪೈ ಆಪ್ತರು ಈವರೆಗೂ ಪ್ರತಿಕ್ರಿಯಿಸಿಲ್ಲ. ಆದರೆ ಸೋಶಿಯಲ್ ಮೀಡಿಯಾಗಳಲ್ಲಿ ಅವರ ಫೋಟೋ ಬಳಸಿ ವೈರಲ್ ಮಾಡಲಾಗುತ್ತಿದ
ಬಿಗ್ ಬಾಸ್ ಕನ್ನಡ ಸೀಜನ್ 11ರಲ್ಲಿ ಮೋಕ್ಷಿತಾ ಗೆಲ್ಲುವ ಸ್ಪರ್ಧಿಯಾಗಿದ್ದು, ಅವರ ವಿರುದ್ಧ ಆರೋಪ ಮಾಡುವುದು, ಅಪಪ್ರಚಾರ ಮಾಡುವುದನ್ನು ನಿಲ್ಲಿಸಿ ಎಂದು ಅವರ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ಇದೀಗ ಮೋಕ್ಷಿತಾ ಪೈ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಟ್ಯಾಗ್ ಮಾಡಲಾದ ಪೋಸ್ಟ್‌ವೊಂದು ಎಲ್ಲರ ಗಮನ ಸೆಳೆದಿದೆ.
ಮೋಕ್ಷಿತಾ ದಿ ಕ್ವೀನ್ ಎನ್ನುವ ಇನ್ಸ್ಟಾಗ್ರಾಮ್ ಖಾತೆಯಿಂದ ಮೋಕ್ಷಿತಾ ಪೈ ಖಾತೆಗೆ ಈ ಸ್ಟೋರಿಯನ್ನು ಟ್ಯಾಗ್ ಮಾಡಲಾಗಿದೆ. ‘ಒಂದು ಕಾರ್ಯಕ್ರಮವನ್ನು ಕಾರ್ಯಕ್ರಮದಂತೆ ನೋಡಿ. ಸ್ಪರ್ಧಿಗಳ ಮಾನಹಾನಿಯನ್ನು ನಿಲ್ಲಿಸಿ. ಅವರು ಈಗಾಗಲೇ ಸಾಧಿಸಿದ್ದಾರೆ. ಅವರನ್ನು ಅವರು ಈಗಾಗಲೇ ಏನೆಂದು ಸಾಬೀತು ಪಡಿಸಿಕೊಂಡಿದ್ದಾರೆ. ಸಾಧ್ಯವಾದರೆ ನಿಮ್ಮ ಇಷ್ಟದ ಸ್ಪರ್ಧಿಯನ್ನು ಬೆಂಬಲಿಸಿ, ಇಲ್ಲವಾದರೆ ಕಾರ್ಯಕ್ರಮವನ್ನು ನೋಡಿ ಎಂಜಾಜ್ ಮಾಡಿ’.
ಚಿಲ್ಲರೆ ಕಾಸು ಆಸೆಗೆ ಅಪಪ್ರಚಾರ ನಿಲ್ಲಿಸಿ’ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದ್ದು, ‘ಸ್ಟೇ ಸ್ಟ್ರಾಂಗ್ ಮೋಕ್ಷಿತಾ’ ಎಂದು ಹಂಚಿಕೊಳ್ಳಲಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಮೋಕ್ಷಿತಾ ವಿರುದ್ಧ ಕೇಳಿಬರುತ್ತಿರುವ ಆರೋಪ ಹಾಗೂ ಅಪಪ್ರಚಾರ ನಿಲ್ಲಿಸುವ ಕಾರಣದಿಂದ ಈ ಪೋಸ್ಟ್ ಹಾಕಲಾಗಿರಬಹುದು ಎಂದು ನೆಟ್ಟಿಗರು ಅಂದಾಜಿಸಿದ್ದಾರೆ.